ಮುಖ್ಯ ಸುದ್ದಿ
ಫೆಬ್ರವರಿ 20 ರಿಂದ ಶಿವನಾಮ ಸಪ್ತಾಹ | ನೂತನ ಸ್ವಾಗತ ಸಮಿತಿ ರಚನೆ
CHITRADURGA NEWS | 06 JANUARY 2024
ಚಿತ್ರದುರ್ಗ: ನಗರದ ಸದ್ಗುರು ಕಬೀರಾನಂದಾಶ್ರಮದಲ್ಲಿ ಫೆಬ್ರವರಿ 20 ರಿಂದ 26ರವರೆಗೆ ನಡೆಯಲಿರುವ 95ನೇ ಶಿವನಾಮ ಸಪ್ತಾಹದ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು. ಇದೇ ವೇಳೆ ನೂತನ ಸ್ವಾಗತ ಸಮಿತಿ ರಚನೆ ರಚಿಸಲಾಯಿತು.
ಕ್ಲಿಕ್ ಮಾಡಿ ಓದಿ: 15. ಹಿರೇ ಬಡಗಿ ಗೌನಳ್ಳಿಗೆ ಬಂದರು | ಹಬ್ಬಿದಾ ಮಲೆ ಮಧ್ಯದೊಳಗೆ
ಈ ವೇಳೆ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, 94 ಶಿವರಾತ್ರಿ ಸಪ್ತಾಹಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದೆ ರೀತಿ 95ನೇ ಶಿವರಾತ್ರಿ ಸಪ್ತಾಹವನ್ನು ಸಹಾ ಯಶಸ್ವಿಯಾಗಿ ನಡೆಸಲು ನಿರ್ಧರಿಸಿದ್ದು, ಇದಕ್ಕಾಗಿ ಸ್ವಾಗತ ಸಮಿತಿ ರಚನೆ ಮಾಡಲಾಗಿದೆ ಎಂದರು.
ನೂತನ ಸ್ವಾಗತ ಸಮಿತಿಯಲ್ಲಿ ಕಾರ್ಯಾಧ್ಯಕ್ಷರಾಗಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಗೌರಾಧ್ಯಕ್ಷರಾಗಿ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಅಧ್ಯಕ್ಷರಾಗಿ ಮೇದೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರಿನಾಥ್ ಅವರನ್ನು ನೇಮಕ ಮಾಡಲಾಯಿತು.
ಸಮಿತಿಯಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಿದ್ದು, ಅಧ್ಯಕ್ಷರಾಗಿ ನಗರಸಭೆಯ ಮಾಜಿ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷರಾಗಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯೆ ರೇಖಾ ಅವರನ್ನು ನೇಮಕ ಮಾಡಲಾಗಿದೆ ಎಂದು ಶ್ರೀಗಳು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಹುಲ್ಲೂರು ಅನಂತರೆಡ್ಡಿ ನಿಧನ | ಬಸವೇಶ್ವರ ಐ ಬ್ಯಾಂಕ್ ಗೆ ನೇತ್ರದಾನ
ಈ ಸಂದರ್ಭದಲ್ಲಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ನಗರಸಭೆ ಸದಸ್ಯ ವೆಂಕಟೇಶ್, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜನಪ್ಪ, ಮಂಜುನಾಥ ಗುಪ್ತ, ವರ್ತಕರಾದ ವೆಂಕಟೇಶ್, ರಾಮಮೂರ್ತಿ, ಜಿ.ಪಂ.ಮಾಜಿ ಅಧ್ಯಕ್ಷ ರಘುನಾಥ್, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ, ನಿರಂಜನಮೂರ್ತಿ, ತಿಪ್ಪೇಶಯ್ಯ, ಧರ್ಮಪ್ರಸಾದ್, ಸುರೇಂದ್ರ ಭಾಗವಹಿಸಿದ್ದರು.