ಕ್ರೈಂ ಸುದ್ದಿ
ಮಕ್ಕಳ ಕಳ್ಳತನಕ್ಕೆ ಯತ್ನ | ಓಮಿನಿಯಲ್ಲಿ ಬಂದ ನಾಲ್ವರಿಂದ ಕೃತ್ಯ | ನಡು ದಾರಿಯಲ್ಲೇ ಮಕ್ಕಳನ್ನು ಬಿಟ್ಟು ಎಸ್ಕೇಪ್
CHITRADURGA NEWS | 02 JANUARY 2024
ಚಿತ್ರದುರ್ಗ: ಟ್ಯೂಷನ್‍ಗೆ ಹೋಗಿ ಬರುತ್ತಿದ್ದ ಇಬ್ಬರು ಮಕ್ಕಳನ್ನು ಓಮಿನಿ ಕಾರಿನಲ್ಲಿ ಬಂದ ನಾಲ್ವರು ಮುಸುಕುಧಾರಿ ವ್ಯಕ್ತಿಗಳು ಮಕ್ಕಳನ್ನು ಕಳ್ಳತನ ಮಾಡಿ ನಡು ದಾರಿಯಲ್ಲಿ ಇಳಿಸಿ ಹೋಗಿರುವ ಆತಂಕಕಾರಿ ಘಟನೆ ಜಿಲ್ಲೆಯಲ್ಲಿ ನಡೆದು ಹೋಗಿದೆ.
ನವೋದಯ ಪರೀಕ್ಷೆಗೆ ತಯಾರಿ ಮಾಡಲು ಟ್ಯೂಷನ್‍ಗೆ ಹೋಗಿದ್ದ ಇಬ್ಬರು ಮಕ್ಕಳನ್ನು ಓಮಿನಿಯಲ್ಲಿ ಕಿಡ್ನ್ಯಾಪ್ ಮಾಡಿ, ನಡು ರಸ್ತೆಯಲ್ಲಿ ಇಳಿಸಿ ಹೋಗಿದ್ದಾರೆ.
ಇದನ್ನೂ ಓದಿ: ಪ್ಯಾಸೆಂಜರ್ ಆಟೋ ಪಲ್ಟಿ | 9 ಮಂದಿಗೆ ಗಾಯ
ಯಾರನ್ನೋ ಕಿಡ್ನ್ಯಾಪ್ ಮಾಡಲು ಬಂದು, ಮತ್ಯಾರನ್ನೋ ಕದ್ದೊಯ್ದು, ನಡು ದಾರಿಯಲ್ಲಿ ಇಳಿಸಿ ಹೋಗಿರಬಹುದು ಎಂದು ಶಂಕಿಸಲಾಗುತ್ತಿದೆ.
ಘಟನೆಯ ಪೂರ್ಣ ವಿವರ:
ನವೋದಯ ಪರೀಕ್ಷೆ ತಯಾರಿಗಾಗಿ ಹಿರಿಯೂರು ತಾಲೂಕು ಧರ್ಮಪುರದ ಕಣಜನಹಳ್ಳಿ ರಸ್ತೆಯಲ್ಲಿರುವ ಟ್ಯೂಷನ್‍ಗೆ 5ನೇ ತರಗತಿಯ 11 ವರ್ಷದ ಯಶ್ವಿನ್‍ಗೌಡ ಹಾಗೂ ಜೀವನ್‍ಗೌಡ ಎಂಬ ಇಬ್ಬರು ಮಕ್ಕಳು ಬಂದಿದ್ದಾರೆ.
ಬಹಿರ್ದೆಸೆಗೆಂದು ಟ್ಯೂಷನ್ ಪಕ್ಕದ ಜಾಲಿಗಿಡಗಳ ಬಳಿ ತೆರಳಿದ್ದಾಗ ಮುಸುಕು ಧರಿಸಿದ್ದ ನಾಲ್ವರು ಓಮಿನಿಯಲ್ಲಿ ಬಂದಿಳಿದು ಮಕ್ಕಳ ಮುಖಕ್ಕೆ ಏನನ್ನೋ ಸ್ಪ್ರೇ ಮಾಡಿ ಬಾಲಕರನ್ನು ಓಮಿನಿಯಲ್ಲಿ ಕರೆದೊಯ್ದಿದ್ದಾರೆ.
ಇದನ್ನೂ ಓದಿ: ಆಡುಮಲ್ಲೇಶ್ವರ ಮೃಗಾಲಯದಲ್ಲಿ ಹೊಸ ದಾಖಲೆ | ಹೊಸ ವರ್ಷದ ದಿನ ಎಷ್ಟು ಕಲೆಕ್ಷನ್ ನೋಡಿ..
ಇಲ್ಲಿಂದ ಪಿ.ಡಿ.ಕೋಟೆ ಹೊರಟ ಓಮಿನಿ ಮಾರ್ಗ ಮಧ್ಯೆ ನಿಲ್ಲಿಸಿ ಮಕ್ಕಳ ಪೋಟೋ ತೆಗೆದು ಬೇರೆ ಯಾರಿಗೋ ಕಳಿಸಿದ್ದು, ಅವರು ಈ ಮಕ್ಕಳಲ್ಲ ಎಂದಾಗ ರಸ್ತೆಯಲ್ಲೇ ಮಕ್ಕಳನ್ನು ಇಳಿಸಿ ಹೋಗಿದ್ದಾರೆ.
ಮನೆಗೆ ತಡವಾಗಿ ಬಂದ ಮಕ್ಕಳು ಅಳುತ್ತಾ ನಡೆದ ಘಟನೆಯನ್ನು ಪೋಷಕರ ಬಳಿ ವಿವರಿಸಿದ್ದಾರೆ. ಡಿಸೆಂಬರ್ 31 ರಂದು ಘಟನೆ ನಡೆದಿದ್ದು, ಈ ಸಂಬಂಧ ಅಬ್ಬಿನಹೊಳೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮಕ್ಕಳನ್ನು ಕಳ್ಳತನ ಮಾಡಲು ಯತ್ನಿಸಿದ ಗ್ಯಾಂಗ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಈ ಘಟನೆಯಿಂದ ಧರ್ಮಪುರ, ಸುತ್ತಮುತ್ತಲಿನ ಗ್ರಾಮಗಳ ಪೋಷಕರು ಆತಂಕಕ್ಕೆ ಒಳಗಾಗಿದ್ದು, ಪೊಲೀಸರು ಆದಷ್ಟು ಬೇಗ ಈ ಗ್ಯಾಂಗ್ ಪತ್ತೆ ಮಾಡಿ, ಯಾವ ಕಾರಣಕ್ಕೆ, ಯಾರನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದರು. ಇದರ ಹಿಂದೆ ಯಾರಿದ್ದಾರೆ ಎನ್ನುವ ಅಂಶಗಳನ್ನು ಬಯಲಿಗೆ ತರಬೇಕಿದೆ.