ಕ್ರೈಂ ಸುದ್ದಿ
ನಾಯಿ ಬಾಯಲ್ಲಿ ನವಜಾತ ಶಿಶು | ಚಿತ್ರದುರ್ಗದಲ್ಲೊಂದು ಅಮಾನವೀಯ ಘಟನೆ
CHITRADURGA NEWS | 27 DECEMBER 2024
ಚಿತ್ರದುರ್ಗ: ನವಜಾತ ಶಿಶುವನ್ನು ಕಚ್ಚಿಕೊಂಡು ನಾಯಿಯೊಂದು ಖಾಸಗಿ ಶಾಲೆ ಆವರಣಕ್ಕೆ ನುಗ್ಗಿದ್ದು, ಸಂಸ್ಥೆಯ ಸೆಕ್ಯೂರಿಟಿ ಇದನ್ನು ಗಮನಿಸಿ ನಾಯಿಯ ಬಾಯಿಂದ ಮಗುವಿವ ದೇಹ ಬಿಡಿಸಿದ್ದಾರೆ.
ಗುರುವಾರ ಚಳ್ಳಕೆರೆ ಗೇಟ್ ಬಳಿ ಈ ಘಟನೆ ಬೆಳಕಿಗೆ ಬಂದಿದ್ದು, ಕಾವಲುಗಾರ ಬೆದರಿಸಿದಾಗ ನಾಯಿ ಮಗುವಿನ ಮೃತ ದೇಹ ಬಿಟ್ಟು ಓಡಿ ಹೋಗಿದೆ.
ಇದನ್ನೂ ಓದಿ: ರಸ್ತೆ ಅಭಿವೃದ್ಧಿ ಕಾಮಗಾರಿ | ಚಿಕ್ಕಜಾಜೂರಿನಿಂದ ಅಮೃತಾಪುರಕ್ಕೆ ಮಾರ್ಗ ಬದಲಾವಣೆ
ನಾಯಿಯ ಬಾಯಲ್ಲಿ ಮಗುವಿನ ಅರ್ಧದಷ್ಟು ದೃಹ ಮಾತ್ರ ಇದ್ದು, ಇನ್ನರ್ಧ ತಿಂದಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎರಡರಿಂದ ಮೂರು ದಿನಗಳ ಹಿಂದೆ ಶಿಶು ಜನಿಸಿರಬಹುದು ಎಂದು ಅಂದಾಜಿಸಿದ್ದು, ಯಾರೋ ಬಿಟ್ಟು ಹೋಗಿರುವ ಅಥವಾ ಮೃತಪಟ್ಟಿರುವ ಶಿಶುವಿನ ದೇಹ ನಾಯಿಗೆ ಸಿಕ್ಕಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ಜನವರಿ ಮೊದಲ ವಾರದಲ್ಲಿ ವಿವಿ ಸಾಗರ ಕೋಡಿ
ಮೃತ ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಗುವಿನ ಅರ್ಧ ಭಾಗ ನಾಯಿ ಕಚ್ಚಿರುವುದರಿಂದ ಮಗು ಗಂಡು ಅಥವಾ ಹೆಣ್ಣು ಎನ್ನುವುದು ತಿಳಿದು ಬಂದಿಲ್ಲ.
ಈ ಹಿನ್ನೆಲೆಯಲ್ಲಿ ಡಿಎನ್‍ಎ ಪರೀಕ್ಷೆಗೆ ಕಳಿಸಲಾಗಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.