ಮುಖ್ಯ ಸುದ್ದಿ
ನಾಳೆ ವಿದ್ಯುತ್ ವ್ಯತ್ಯಯ | ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕರೆಂಟ್ ಕಟ್
CHITRADURGA NEWS | 26 DECEMBER 2024
ಚಿತ್ರದುರ್ಗ: ವಿದ್ಯುತ್ ಪ್ರಸರಣ ಮಾರ್ಗದ ಪರಿವರ್ತನೆ ಕಾರ್ಯ ಹಮ್ಮಿಕೊಂಡಿರುವುದರಿಂದ ಡಿ.27 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಭರಮಸಾಗರ ವಿ.ವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕ್ಲಿಕ್ ಮಾಡಿ ಓದಿ: ಕೃಷಿಕ ಸಮಾಜದ ಅಧ್ಯಕ್ಷರಾಗಿ ಬಿ.ಟಿ.ಜಗದೀಶ್ ಆಯ್ಕೆ
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಭರಮಸಾಗರ ವಿ.ವಿ. ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಹೆಗ್ಗೆರೆ , ಎಮ್ಮೆಹಟ್ಟಿ , ನಲ್ಲಿಕಟ್ಟೆ , ಕೋಳಾಳ್ ಎನ್.ಜೆ.ವೈ , ಹೆಗ್ಗಡೆಹಾಳ್, ವಿಜಾಪುರ , ಶಿವನಕೆರೆ , ನಂದಿಹಳ್ಳಿ , ಬಹದುರ್ ಘಟ್ಟ , ಅಡವಿ ಗೋಲ್ಲರಹಳ್ಳಿ , ಭರಮಸಾಗರ , ಪಮೇರಹಳ್ಳಿ , ಕೋಗುಂಡೆ , ಎಸ್.ಕೆ.ಎಮ್ ಕೈಗಾರಿಕ ಪ್ರದೇಶ, ಕೋಡಿಹಳ್ಳಿ , ಅರಳಕಟ್ಟೆ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕ್ಲಿಕ್ ಮಾಡಿ ಓದಿ: ಜನವರಿ ಮೊದಲ ವಾರದಲ್ಲಿ ವಿವಿ ಸಾಗರ ಕೋಡಿ
ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.