Connect with us

    ಕಾಂಗ್ರೆಸ್ ಗುಲಾಮಿತನದಿಂದ ಹೊರಬಂದಾಗಲೇ ದಲಿತರಿಗೆ ಸ್ವಾತಂತ್ರ್ಯ | ಗೋವಿಂದ ಕಾರಜೋಳ

    Govinda karajola

    ಮುಖ್ಯ ಸುದ್ದಿ

    ಕಾಂಗ್ರೆಸ್ ಗುಲಾಮಿತನದಿಂದ ಹೊರಬಂದಾಗಲೇ ದಲಿತರಿಗೆ ಸ್ವಾತಂತ್ರ್ಯ | ಗೋವಿಂದ ಕಾರಜೋಳ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 25 DECEMBER 2024

    ಚಿತ್ರದುರ್ಗ: ದೇಶದಲ್ಲಿನ ದಲಿತ ಸಮುದಾಯ ಕಾಂಗ್ರೆಸ್‍ನ ಗುಲಾಮಿತನದಿಂದ ಹೊರ ಬರುವವರೆಗೂ ದಲಿತರು ಸ್ವಾತಂತ್ರ್ಯದಿಂದ ಹೂರ ಬರಲು ಸಾಧ್ಯವಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.

    ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಜೀವಿತ ಕಾಲದಲ್ಲಿ ಕಾಂಗ್ರೆಸ್ ಮಾಡಿದ ಅವಮಾನವನ್ನು ದಲಿತ ಸಮುದಾಯ ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.

    ಇದನ್ನೂ ಓದಿ: ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ

    ಕಾಂಗ್ರೆಸ್ ಅಂಬೇಡ್ಕರರಿಗೆ ಮಾಡಿರುವ ಮೋಸ, ಅಪಮಾನವನ್ನು ದೇಶಾದ್ಯಂತ ಬಿಜೆಪಿ ತಿಳಿಸುವ ಕೆಲಸ ಮಾಡಲಿದೆ. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ. ಆದರೆ, ನೆಹರು ಪ್ರಧಾನ ಮಂತ್ರಿಯಾಗಿದ್ದಾಗ ಅವರಿಗೆ ಅವರೇ ಭಾರತ ರತ್ನ ಘೋಷಣೆ ಮಾಡಿಕೊಂಡಿದ್ದರು ಎಂದು ಹೇಳಿದರು.

    ಇಡೀ ದೇಶದಲ್ಲಿನ ದಲಿತ ಬಂಧುಗಳಿಗೆ ಸತ್ಯ ಮತ್ತು ವಸ್ತುಸ್ಥಿತಿಯನ್ನು ಬಿಚ್ಚಿಡುವಂತಹ ಕೆಲಸ ಮಾಡುತ್ತೇನೆ. ಅಂಬೇಡ್ಕರ್ ದೇಶ ಸ್ವಾತಂತ್ರವಾದ ಸಂದರ್ಭದಲ್ಲಿ ಅವರು ನನಗೆ ಅರ್ಥ ಮಂತ್ರಿ ಸ್ಥಾನ ನೀಡುವಂತೆ ಅಂದಿನ ಪ್ರಧಾನಮಂತ್ರಿ ನೆಹರು ಅವರನ್ನು ಕೇಳಿದಾಗ ತಿರಸ್ಕರಿಸಿ ಕಾನೂನು ಮಂತ್ರಿ ಮಾಡಿದ್ದರು. ಆದರೆ, ಅಂಬೇಡ್ಕರ್ ನೆಹರು ಕ್ಯಾಬಿನೆಟ್‍ನಲ್ಲಿ ಬಹಳ ದಿನ ಇರಲಿಲ್ಲ. ಅವಮಾನ ಸಹಿಸಲಾರದೆ ರಾಜೀನಾಮೆ ಕೊಟ್ಟು ಹೊರ ಬಂದರು.

    ಇದನ್ನೂ ಓದಿ: ದೇಶದಲ್ಲೇ ಮಾದರಿ ಗ್ರಾಪಂ ಕಟ್ಟಡ ನಿರ್ಮಿಸಿ | ಗೋವಿಂದ ಕಾರಜೋಳ

    1952ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಿದಾಗ ಅವಿರೋಧವಾಗಿ ಆಯ್ಕೆ ಮಾಡಬಹುದಾಗಿತ್ತು. ಆದರೆ, ಚುನಾವಣೆಯಲ್ಲಿ ಸೋಲಿಸಿದ ಕೀರ್ತಿ ಕಾಂಗ್ರೆಸ್‍ಗೆ ಸಲುತ್ತದೆ. ಇದನ್ನು ನಮ್ಮ ದಲಿತ ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದರು.

    ಅಂಬೇಡ್ಕರ್ ನಿಧನರಾದಾಗ ಅವರ ಸಂತ್ಯಕ್ರಿಯೆ ನಡೆಸಲು ದೆಹಲಿಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಾಗ ಕೊಡಲಿಲ್ಲ. ಆದರೆ, ನೆಹರು ಕುಟುಂಬದವರಿಗೆ ನೂರಾರು ಎಕರೆ ಜಾಗ ನೀಡಲಾಗಿದೆ. ಆದರೂ, ತಿಳುವಳಿಕೆ ಇಲ್ಲದ ಯುವಕರು ಅವರನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಜನರಿಗೆ ಶಿಕ್ಷಣ ನೀಡದೆ ದಲಿತರನ್ನು ಕತ್ತಲಿನಲ್ಲಿ ಇಟ್ಟಿದೆ. ಇವರಿಗೆ ಶಿಕ್ಷಣ ನೀಡಿದರೆ ನಮಗೆ ಮತಗಳು ಬರುವುದಿಲ್ಲ ಎನ್ನುವುದು ಅವರ ನಂಬಿಕೆ ಎಂದು ಹೇಳಿದರು.

    ಇದನ್ನೂ ಓದಿ: ಕರಡಿ ಮರಿಗಳ BIRTHDAY ಸಂಭ್ರಮ | ಆಡುಮಲ್ಲೇಶ್ವರದಲ್ಲಿ ವಿಶಿಷ್ಟ ಆಚರಣೆ

    ಕಳೆದ ಒಂದು ವಾರದಿಂದ ಕಾಂಗ್ರೆಸ್ ದೇಶದ ಉದ್ದಗಲಕ್ಕೂ ಸುಳ್ಳು ಆಪಾದನೆ ಮಾಡಿ ಅಮಿತ್ ಶಾ ವಿರುದ್ಧ ದಲಿತರನ್ನು ಎತ್ತಿ ಕಟ್ಟುವಂತಹ ಹುನ್ನಾರ ಮಾಡುತ್ತಿರುವುದನ್ನು ಖಂಡಿಸುತ್ತೇನೆ ಎಂದರು.

    ನಮ್ಮ ಸರ್ಕಾರ ಇದ್ದಾಗ ಒಳಮೀಸಲಾತಿಗೆ ಶಿಫಾರಸ್ಸು ಮಾಡಲಾಗಿತ್ತು. ಆದರೆ, ಈಗ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದರೂ ಕಾಂಗ್ರೆಸ್ ಒಳಗಿನವರೇ ಒಳಮೀಸಲಾತಿಗೆ ವಿರೋಧ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ದಲಿತ ವಿರೋಧಿ ನೀತಿ ಎಂದರು.

    ಇದನ್ನೂ ಓದಿ: ವಿದ್ಯಾರ್ಥಿನಿಗೆ ಥಳಿಸಿದ್ದ ಶಿಕ್ಷಕ ಅಮಾನತು

    ಅಮಿತ್ ಶಾ ಅವರು ಕಾಂಗ್ರೆಸ್ಸಿನವರ ಬಗ್ಗೆ ರಾಜ್ಯಸಭೆಯಲ್ಲಿ ವ್ಯಂಗ್ಯವಾಗಿ ಮಾತನಾಡಿದರು. ಅದನ್ನು ತಪ್ಪಾಗಿ ಅರ್ಥೈಸಿ ಅವರನ್ನು ಅಂಬೇಡ್ಕರ್ ವಿರೋಧಿ ಎಂಬಂತೆ ಬಿಂಬಿಸುತ್ತಿದ್ದಾರೆ. ಈ ಕಾರಣಕ್ಕೆ ದಲಿತ ಯುವಕರು ಯಾವ ಕಾರಣಕ್ಕೂ ಕಾಂಗ್ರೆಸ್ ನಂಬಬೇಡಿ ಎಂದು ಮನವಿ ಮಾಡಿದರು.

    ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಎ.ಮುರುಳಿ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಸಿದ್ದಾಪುರ, ಸಂಪತ್ ಕುಮಾರ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಛಲವಾದಿ ತಿಪ್ಪೇಸ್ವಾಮಿ, ಮಲ್ಲಿಕಾರ್ಜನ್, ನವೀನ್ ಚಾಲುಕ್ಯ ಇತರರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top