Connect with us

    ಅಮೇರಿಕಾ ಯುವತಿ ಜೊತೆ ಸಪ್ತಪದಿ ತುಳಿದ ಕೋಟೆನಾಡಿನ ಯುವಕ

    chitradurga-boy and amercia girl wedding

    ಮುಖ್ಯ ಸುದ್ದಿ

    ಅಮೇರಿಕಾ ಯುವತಿ ಜೊತೆ ಸಪ್ತಪದಿ ತುಳಿದ ಕೋಟೆನಾಡಿನ ಯುವಕ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 17 DECEMBER 2024

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಅಪರೂಪದ ಮದುವೆಯಾಗಿದೆ. ಅಮೇರಿಕಾ ಯುವತಿ ಜೊತೆ ಚಿತ್ರದುರ್ಗದ ಯುವಕ ಸಪ್ತಪದಿ ತುಳಿದಿದ್ದಾನೆ.

    ಚಿತ್ರದುರ್ಗ ಮೂಲದ ಯುವಕ ಅಭಿಲಾಷ್ ಹಾಗೂ ಅಮೇರಿಕಾ ಮೂಲದ ಯುವತಿ ಕೆಲ್ಲಿ ಪರಸ್ಪರ ಪ್ರೀತಿಸಿ ಭಾರತೀಯ ಸಂಪ್ರದಾಯದಂತೆ ಚಿತ್ರದುರ್ಗದ ಜಿ.ಜಿ.ಕಲ್ಯಾಣ ಮಂಟಪದಲ್ಲಿ ಸೋಮವಾರ ಮದುವೆಯಾಗಿದ್ದಾರೆ.

    ಇದನ್ನೂ ಓದಿ: ಎಸ್.ನಿಜಲಿಂಗಪ್ಪ ಮನೆಗೆ ಡಿಸಿ ಭೇಟಿ | ಮನೆಯ ಕೀ ಹಸ್ತಾಂತರ | ನವೀಕರಣ ಪ್ರಕ್ರಿಯೆ ಆರಂಭ

    ಮದುವೆಗೆ ವಧು ಮತ್ತು ವರ ಇಬ್ಬರ ಕುಟುಂಬಗಳು ಸಾಕ್ಷಿಯಾದವು. ವಧುವಿನ ಕುಟುಂಬದವರೆಲ್ಲರೂ ಭಾರತೀಯ ಪರಂಪರೆಯಂತೆ ಸೀರೆ, ಪಂಚೆ ಉಟ್ಟು ಸಂಭ್ರಮಿಸಿದರು.

    ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುವಾಗ ಇಬ್ಬರೂ ಪ್ರೀತಿಸಿದ್ದೆವು. ಎರಡೂ ಕಡೆಯ ಸಾಂಸ್ಕøತಿಕ ಭಿನ್ನತೆಯನ್ನು ಅರ್ಥ ಮಾಡಿಕೊಳ್ಳುವ ಕುತೂಹಲ ಇಬ್ಬರಲ್ಲೂ ಇದೆ. ಕೆಲ್ಲಿಗೆ ಭಾರತೀಯ ಸಂಸ್ಕøತಿ ಬಗ್ಗೆ ಆಸಕ್ತಿ ಇದೆ. ಬರಹಗಾರ್ತಿಯಾಗಿದ್ದು, ಇಲ್ಲಿನ ಜನಜೀವನ ತಿಳಿಯುವ ಕುತೂಹಲ ಹೊಂದಿದ್ದಾಳೆ.

    | ಅಭಿಲಾಷ್, ಚಿತ್ರದುರ್ಗದ ವರ.

    ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ, ಕೋವಿಡ್ ವೇಳೆ ಇಬ್ಬರಲ್ಲಿ ಅನುರಾಗ ಅರಳಿದ್ದು, ಅದು ಮುಂದುವರೆದು ಮದುವೆಯಾಗಿ ಸಾಂಸರಿಕ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ.

    chitradurga boy and america girl wedding

    ಅಮೇರಿಕಾ ಯುವತಿ ಜೊತೆ ಸಪ್ತಪದಿ ತುಳಿದ ಕೋಟೆನಾಡಿನ ಯುವಕ

    ಇದನ್ನೂ ಓದಿ: ವಾಣಿವಿಲಾಸ ಸಾಗರ ಭರ್ತಿಗೆ ಅರ್ಧ TMC ಬಾಕಿ

    ವಿಶೇಷವೆಂದರೆ ಅಮೇರಿಕಾ ಯುವತಿಯಾಗಿದ್ದರೂ ಕೆಲ್ಲಿ ಕನ್ನಡ ಕಲಿತಿದ್ದಾರೆ. ವರ ಅಭಿಲಾಶ್ ಬ್ಯಾಂಕೊಂದರಲ್ಲಿ ಕ್ವಾಂಟಿಟಿ ರಿಸರ್ಚ್‍ರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ವಧು ಕೆಲ್ಲಿ ಹೆಲ್ತ್‍ಕೇರ್ ಕಂಪನಿಯಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.

    ಕನ್ನಡದಲ್ಲೇ ಮಾತನಾಡಿದ ಕೆಲ್ಲಿ, ಭಾರತೀಯ ಸಂಸ್ಕøತಿ ಚೆನ್ನಾಗಿದೆ. ಈ ಮದುವೆ ಬಹಳ ಇಷ್ಟವಾಯಿತು. ಇಲ್ಲಿನ ಜನ ನನಗೆ ಭವ್ಯ ಸ್ವಾಗತ ನೀಡಿದ್ದಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಭಾರತೀಯನನ್ನು ಮದುವೆಯಾದ ಬಗ್ಗೆ ಸಂತೋಷವಿದೆ. ನನ್ನ ಕುಟುಂಬಕ್ಕೂ ಅಭಿಲಾಷ್ ಇಷ್ಟವಾಗಿದ್ದಾರೆ.

    | ಕೆಲ್ಲಿ, ಅಮೇರಿಕಾದ ವಧು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top