ಕ್ರೈಂ ಸುದ್ದಿ
ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಲೆ ಕುಸಿದು ಬಿದ್ದ ಯುವಕ | ಚಿಕಿತ್ಸೆ ಫಲಿಸದೆ ಸಾವು
Published on
CHITRADURGA NEWS | 15 DECEMBER 2024
ಚಿತ್ರದುರ್ಗ: ಸ್ನೇಹಿತನ ಮದುವೆಯ ಸಂಭ್ರಮದಲ್ಲಿ ಡಿಜೆ ಸದ್ದಿಗೆ ಕುಣಿಯುತ್ತಿದ್ದ ಯುವಕ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಚಳ್ಳಕೆರೆ ತಾಲೂಕು ಪಗಡಲಬಂಡೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಮತ್ತೆ ಆರಂಭವಾಯ್ತು ಒಳಹರಿವು | ಇಂದಿನ ನೀರಿನ ಮಟ್ಟ ಎಷ್ಟು ?
ಪಗಡಲಬಂಡೆನಿವಾಸಿ ಆದರ್ಶ(23) ಮೃತ ಯುವಕ. ಸ್ನೇಹಿತನ ಮದುವೆಯಲ್ಲಿ ಡಿಜೆಗೆ ಹೆಜ್ಜೆ ಹಾಕುತ್ತಿದ್ದಾಗಲೇ ಕುಸಿದು ಬಿದ್ದಿದ್ದಾನೆ.
ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಕುಸಿದು ಬಿದ್ದ ಯುವಕನನ್ನು ತಕ್ಷಣ ಪರಶುರಾಂಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಆದರ್ಶ ಮೃತಪಟ್ಟಿದ್ದಾನೆ.
Continue Reading
Related Topics:Chitradurga, Chitradurga Latest, Chitradurga news, Chitradurga Updates, Dance, DJ, DJ Sound, Kannada News, Parashurampur, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ಡಿಜೆ, ಡಿಜೆ ಸೌಂಡ್, ಡ್ಯಾನ್ಸ್, ಪರಶುರಾಂಪುರ
Click to comment