ಮುಖ್ಯ ಸುದ್ದಿ
Rain: ಹೊಸದುರ್ಗ – ಹೊಳಲ್ಕೆರೆ ಭಾಗದಲ್ಲಿ ಮಳೆ | ತಡರಾತ್ರಿಯಿಂದ ನಸುಕಿನವರೆಗೆ ಹಸಿ ಮಳೆ
CHITRADURGA NEWS | 09 DECEMBER 2024
ಚಿತ್ರದುರ್ಗ: ಜಿಲ್ಲೆಯ ಕೆಲ ಭಾಗಗಳಲ್ಲಿ ಹಿಂಗಾರಿನಲ್ಲಿ ಹದ ಮಳೆಯಾಗಿದೆ.
ಹೊಸದುರ್ಗ, ಹೊಳಲ್ಕೆರೆ ತಾಲೂಕಿನ ಹಲವು ಕಡೆಗಳಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ನಸುಕಿನಲ್ಲಿ ಉತ್ತಮ ಮಳೆ (Rain)ಸುರಿದಿದೆ.
ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ್ದ ಖಾಸಗಿ ಶಾಲೆ ಬಸ್ ಅಪಘಾತ | ಸಣ್ಣ ಪುಟ್ಟ ಗಾಯಗಳಿಂದ ಪಾರಾದ 40 ಮಕ್ಕಳು
ಹೊಸದುರ್ಗ ತಾಲೂಕಿನ ಮಾಡದಕೆರೆಯಲ್ಲಿ ರಾತ್ರಿ ಸುಮರು 2 ಗಂಟೆಗೆ ಆರಂಭವಾದ ಮಳೆರಾಯ ನಸುಕಿನವರೆಗೆ ಸುರಿದಿದ್ದು, ಹಸಿ ಮಳೆಯಾಗಿದೆ ಎಂದು ರೈತರು ಹೇಳುತ್ತಿದ್ದಾರೆ.
ಇನ್ನೂ ಕೆಲವೆಡೆಗಳಲ್ಲಿ ಬೆಳಗ್ಗೆ 6 ರಿಂದ 7 ಗಂಟೆವೆರೆಗ ಸುಮಾರು 1 ಗಂಟೆ ಹದವಾದ ಮಳೆಯಾಗಿದೆ.
ಇದನ್ನೂ ಓದಿ: ದಿನ ಭವಿಷ್ಯ | 09 ಡಿಸೆಂಬರ್ | ಈ ದಿನ ಹೇಗಿದೆ ನಿಮ್ಮ ರಾಶಿ ಫಲ…
ಡಿಸೆಂಬರ್ ತಿಂಗಳಿನಲ್ಲೂ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಈಗ ಮಳೆಯಾದ ಪರಿಣಾಮ ತೊಟಗಾರಿಕೆ ಬೆಳೆಗಾರರು ಇನ್ನೂ 10 ರಿಂದ 15 ದಿನ ತೋಟಕ್ಕೆ ನೀರು ಹಾಯಿಸುವುದು ತಪ್ಪಿದಂತಾಗಿದೆ.
ಇಷ್ಟು ದಿನಗಳ ಕಾಲ ಮೋಟಾರ್ ಚಾಲು ಮಾಡದಿದ್ದರೆ, ಬೇಸಿಗೆಯಲ್ಲಿ ಹೆಚ್ಚು ದಿನಗಳ ಕಾಲ ನೀರು ಬರುತ್ತದೆ. ಇದರಿಂದಾಗಿ ಹಿಂಗಾರಿನಲ್ಲೂ ಜಿಲ್ಲೆಗೆ ಉತ್ತಮ ಮಳೆಯಾಗಿರುವುದರಿಂದ ರೈತರು ಸಂತಸಗೊಂಡಿದ್ದಾರೆ.