ಮುಖ್ಯ ಸುದ್ದಿ
Chess: ಕಾನೂನು ಕಾಲೇಜುಗಳ ಚೆಸ್ ಸ್ಪರ್ಧೆ | ಬೆಂಗಳೂರು, ಹುಬ್ಬಳ್ಳಿ ತಂಡಗಳಿಗೆ ಪ್ರಶಸ್ತಿಯ ಗರಿ
CHITRADURGA NEWS | 03 DECEMBER 2024
ಚಿತ್ರದುರ್ಗ: ಅಂತರ್ ಕಾನೂನು ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರ ರಾಜ್ಯ ಮಟ್ಟದ ಚೆಸ್ (Chess) ಪಂದ್ಯಾವಳಿ ಸ್ಪರ್ಧೆ ಚಿತ್ರದುರ್ಗದ ಎಸ್‍ಜೆಎಂ ಕಾನೂನು ಕಾಲೇಜಿನಲ್ಲಿ ಮೂರು ದಿನಗಳ ಕಾಲ ನಡೆಯಿತು.
ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ ವಿಶ್ವವಿದ್ಯಾನಿಲಯ ತಂಡದ ಆಯ್ಕೆ ಪ್ರಕ್ರಿಯೆಯೂ ನಡೆಯಿತು.
ಇದನ್ನೂ ಓದಿ: ಮುರುಘಾ ಮಠದಲ್ಲಿ ಜ್ಞಾನ ದೀಪೋತ್ಸವ | ದೀಪಾರತಿ, ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಣೆ
ಚೆಸ್ ಪಂದ್ಯಾವಳಿಗೆ 73 ಪುರುಷರ ತಂಡಗಳು ಹಾಗೂ 19 ಮಹಿಳಾ ತಂಡಗಳು ಭಾಗವಹಿಸಿದ್ದು, ಜಿದ್ದಾಜಿದ್ದಿನ ಹೋರಾಟ ನಡೆಯಿತು.
ಚೆಸ್ ಸ್ಪರ್ಧೆಯ ಫಲಿತಾಂಶ:
ಅಂತರ್ ಕಾಲೇಜು ಚೆಸ್ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಹುಬ್ಬಳ್ಳಿಯ ಕರ್ನಾಟಕ ಕಾನೂನು ಶಾಲೆ ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಕ್ರೈಸ್ಟ್ ಅಕಾಡೆಮಿ ಇನ್ಸ್‍ಟಿಟ್ಯೂಟ್ ಆಫ್ ಲಾ ಕಾಲೇಜು ತಂಡಗಳು ಪ್ರಥಮ ಸ್ಥಾನ ಪಡೆದರು.
ಇದನ್ನೂ ಓದಿ: ರೈತ ಉತ್ಪಾದಕ ಸಂಸ್ಥೆಗಳಿಂದ ಮೈಸೂರು ಕಿಸಾನ್ ಮಾಲ್ ಸ್ಥಾಪನೆ
ಉಳಿದಂತೆ ಪುರುಷರ ವಿಭಾಗದಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾನೂನು ಕಾಲೇಜು ತಂಡ ದ್ವಿತೀಯ, ವಿಜಯಪುರದ ಅಂಜುಮನ್ ಕಾನೂನು ಕಾಲೇಜು ತೃತೀಯ ಹಾಗೂ ವಿವೇಕಾನಂದ ಕಾನೂನು ಕಾಲೇಜು ಬೆಂಗಳೂರು ತಂಡ 4ನೇ ಸ್ಥಾನ ಪಡೆದವು.
ಮಹಿಳಾ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಕಾನೂನು ಕಾಲೇಜು ತಂಡ ದ್ವಿತೀಯ, ಕರ್ನಾಟಕ ರಾಜ್ಯ ಕಾನೂನು ಶಾಲೆ ಹುಬ್ಬಳ್ಳಿ ತಂಡ ತೃತೀಯ ಹಾಗೂ ಮಂಗಳೂರಿನ ಎಸ್‍ಡಿಎಂ ಕಾನೂನು ಕಾಲೇಜು ತಂಡ ನಾಲ್ಕನೇ ಸ್ಥಾನ ಪಡೆದರು.
ಚೆಸ್ ಸ್ಪರ್ಧೆ ಕುರಿತು ಶ್ರೀ ಬಸವಪ್ರಭು ಸ್ವಾಮೀಜಿ ಮಾತು:
ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿದ ದಾವಣಗೆರೆ ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಬೇರೆ ಬೇರೆ ಕ್ರೀಡೆಗಳು ದೈಹಿಕ ಚಟುವಟಿಕೆ ನೀಡಿದರೆ ಚದುರಂಗ ಮನಸ್ಸು ಮತ್ತು ಮೆದುಳನ್ನು ಚುರುಕಾಗಿಸುವ ಆಟವಾಗಿದೆ. ಬುದ್ಧಿ ಚುರುಕಾಗಿರಬೇಕು ಎನ್ನುವವರು ಚೆಸ್ ಆಡಬೇಕು ಎಂದರು.
ಇದನ್ನೂ ಓದಿ: ವಿಶ್ವವಿದ್ಯಾಲಯ ಕುಲಾಧಿಪತಿ ರಾಜ್ಯಪಾಲರ ಬಳಿಯಿರಲಿ | ಎಬಿವಿಪಿ ಪ್ರತಿಭಟನೆ
ಚದುರಂಗ ಅಥವಾ ಚೆಸ್ ರಾಜ ಮಹಾರಾಜರ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಮಕ್ಕಳು, ವಯಸ್ಕರು ಯಾರು ಬೇಕಾದರೂ ಈ ಆಟ ಆಡಬಹುದು. ಈ ಕ್ರೀಡೆಯಿಂದಾಗಿ ನಮ್ಮ ಬುದ್ದಿಶಕ್ತಿ ಚುರುಕಾಗುತ್ತದೆ ಎಂದರು.
ಎಸ್‍ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಚಾರ್ಯ ಡಾ.ಎಲ್.ಈಶ್ವರಪ್ಪ ಮಾತನಾಡಿ, ಕ್ರೀಡೆ ಮನಸ್ಸಿಗೆ ಮತ್ತು ದೇಹಕ್ಕೆ ಆರೋಗ್ಯ ನೀಡುತ್ತದೆ ಎಂದರು.
ಇದನ್ನೂ ಓದಿ: ಕುರಿ, ಮೇಕೆ ಪೂರೈಕೆ ಯೋಜನೆ | ಪರಿಶಿಷ್ಟ ಪಂಗಡದ ಸದಸ್ಯರಿಂದ ಅರ್ಜಿ ಆಹ್ವಾನ
ಹಿಂದಿನ ಕಾಲದ ಆಟಗಳು ಬೇರೆ ರೀತಿ ಇದ್ದವು. ಈಗಿನ ಕಾಲದ ಆಟಗಳೇ ಬೇರೆಯಾಗಿವೆ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಕ್ರೀಡಾಮನೋಭಾವನೆ ಹೆಚ್ಚಾಗುತ್ತದೆ. ಸೋಲು ಗೆಲುವು ಸಾಮಾನ್ಯ ಆದರೆ ಭಾಗವಹಿಸುವುದು ಮುಖ್ಯ ಎಂದು ತಿಳಿಸಿದರು.
ಮಂಗಳೂರು ಎಸ್‍ಡಿಎಂ ಕಾನೂನು ಕಾಲೇಜು ದೈಹಿಕ ನಿರ್ದೇಶಕ ಶಕ್ತಿಪ್ರಸಾದ್, ಎಸ್‍ಜೆಎಂ ಕಾನೂನು ಕಾಲೇಜು ಪ್ರಾಚಾರ್ಯ ಡಾ.ಎಸ್.ದಿನೇಶ್ ಮಾತನಾಡಿದರು.
ಇದನ್ನೂ ಓದಿ: ಸಿಟಿ ಇನ್ಸ್ಟಿಟ್ಯೂಟ್(City club) ಚುನಾವಣೆ | ನಿರ್ದೇಶಕರ ಫಲಿತಾಂಶ ಪ್ರಕಟ
ಪಂದ್ಯಾವಳಿಯಲ್ಲಿ 73 ಪುರುಷರ ತಂಡ ಹಾಗೂ 19 ಮಹಿಳಾ ತಂಡಗಳು ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದವು.
ಎಸ್‍ಜೆಎಂ ಕಾನೂನು ಕಾಲೇಜು ಸಹಪ್ರಾಧ್ಯಾಪಕರಾದ ಸುಮನ ಎಸ್ ಅಂಗಡಿ, ಉಮೇಶ್, ಕರಕಪ್ಪ, ಗಿರೀಶ್, ಸ್ಮಿತಾ, ಗ್ರಂಥಪಾಲಕ ಸಂದೀಪ್ ಕುಮಾರ್, ದೈಹಿಕ ನಿರ್ದೇಶಕ ಡಾ.ಕುಮಾರಸ್ವಾಮಿ ಇತರರಿದ್ದರು.