Connect with us

    Computer knowledge: ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನ ಅವಶ್ಯಕ | ಸಿ.ಎಸ್.ಗಾಯತ್ರಿ

    ಸಮಾರೋಪ ಸಮಾರಂಭ ಕಾರ್ಯಕ್ರಮ

    ಮುಖ್ಯ ಸುದ್ದಿ

    Computer knowledge: ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನ ಅವಶ್ಯಕ | ಸಿ.ಎಸ್.ಗಾಯತ್ರಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 01 DECEMBER 2024

    ಚಿತ್ರದುರ್ಗ: ಇಂದಿನ ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ತಾತ್ರಿಕ ಜ್ಞಾನ(Computer knowledge) ಪ್ರತಿ ಕ್ಷೇತ್ರದಲ್ಲಿ ಅವಶ್ಯಕತೆ ಇದೆ ಎಂದು ಜಿ. ಪಂ. ಯೋಜನಾ ನಿರ್ದೇಶಕರಾದ ಸಿ.ಎಸ್.ಗಾಯತ್ರಿ ಹೇಳಿದರು.

    ಕ್ಲಿಕ್ ಮಾಡಿ ಓದಿ: BTV ಬಜಾಜ್ ನಲ್ಲಿ ಉದ್ಯೋಗಾವಕಾಶ

    ರುಡ್‌ಸೆಟ್ ಸಂಸ್ಥೆಯು ಜಿಲ್ಲಾ ಪಂಚಾಯತ್ ಪ್ರಾಯೋಜಿಕತ್ವದಲ್ಲಿ ಎನ್‌ಆರ್‌ಎಲ್‌ಎಂ ಯೋಜನೆ ಯಡಿಯಲ್ಲಿ ಉದ್ಯಮಶೀಲತಾಭಿವೃದ್ಧಿ – ಡೆಸ್ಕ್ ಟಾಪ್ ಪಬ್ಲಿಷಿಂಗ್ (ಕಂಪ್ಯೂಟರ್ ಡಿ.ಟಿ.ಪಿ.) ತರಬೇತಿ ಕಾರ್ಯಕ್ರಮವನ್ನು 45 ದಿನಗಳ ಕಾಲಾವಧಿಯವರೆಗೆ ಆಯೋಜಿಸಲಾಗಿತ್ತು, ಇಂದು ಈ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,

    ತ್ರಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ, ಬದಲಾದ ಮಾಹಿತಿಯ ಅರಿವನ್ನು ಸರಿಯಾಗಿ ರೂಢಿಸಿಕೊಂಡಲ್ಲಿ ವೃತ್ತಿಯನ್ನು ಸುಭದ್ರಗೊಳಿಸಿಕೊಳ್ಳಲು ಸಾಧ್ಯ. ನಿರಂತರವಾದ ಜ್ಞಾನದ ದಾಹದೊಂದಿಗೆ ಪರಿಣಾಮಕಾರಿಯಾದ ಭಾಷೆಯ ಕಲಿಕೆಯಲ್ಲಿ ತೊಡಬೇಕು, ಜೊತೆಗೆ ಹೆಚ್ಚು ಕುಶಲತೆಯನ್ನು ಕರಗತ ಮಾಡಿಕೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ, ಆದ್ದರಿಂದ ನಿರಂತರ ಕಲಿಕೆಯ ಬಯಕೆಯನ್ನು ರೂಢಿಸಿಕೊಂಡು ಡಿಜೈನಿಂಗ್ ಕ್ಷೇತ್ರದಲ್ಲಿ ಬೇಡಿಕೆ ಸೃಷ್ಠಿಸಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

    ಪ್ರತಿ ಹಂತದ ಸಣ್ಣ ಕಲಿಕೆ ಕೂಡ ಒಂದಲ್ಲ ಒಂದು ಹಂತದಲ್ಲಿ ಉಪಯೋಗಕ್ಕೆ ಬರುತ್ತದೆ, ಜೀವನದಲ್ಲಿ ಎದುರಾಗುವ ಕೆಲ ಸನ್ನಿವೇಶಗಳನ್ನ ಸಮರ್ಥವಾಗಿ ನಿಭಾಯಿಸಲು ಜ್ಞಾನ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ ಎಂದು ಹೇಳಿದರು.

    ಕ್ಲಿಕ್ ಮಾಡಿ ಓದಿ: ಮಂಜುನಾಥ್ ಕೊಲೆ ಆರೋಪಿಗಳ ಬಂಧನ | ಭರಮಸಾಗರ ಪೊಲೀಸರ ಕಾರ್ಯಾಚರಣೆ

    ಈ ವೇಳೆ ಲೀಡ್‌ಬ್ಯಾಂಕ್ ಎಲ್‌ಡಿಎಮ್ ಕುಮಾರಬಾಬು, ಸಂಸ್ಥೆಯ ನಿರ್ದೇಶಕರಾದ ಹೆಚ್.ಆರ್.ರಾಧಮ್ಮ ಮಾತನಾಡಿದರು.

    ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಯೋಗೇಶ್ವರಪ್ಪ, ಸಂಸ್ಥೆಯ ಉಪನ್ಯಾಸಕರಾದ ತೋಟಪ್ಪ ಎಸ್. ಗಾಣಿಗೇರ ಸೇರಿದಂತೆ ಇತರರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top