
CHITRADURGA NEWS | 27 NOVEMBER 2024
ಚಿತ್ರದುರ್ಗ: ನಗರ ಉಪವಿಭಾಗ ಘಟಕ-2ರ ವ್ಯಾಪ್ತಿಯಲ್ಲಿ ಬರುವ ಎಫ್-15 ಮಿಲ್ ಏರಿಯಾ ಮಾರ್ಗದ ಎಂ.ಕೆ ಪ್ಯಾಲೇಸ್ ಮುಂಭಾಗದ ರಸ್ತೆ ಅಗಲೀಕರಣ ಕಾಮಗಾರಿಗೆ ಅಡ್ಡಲಾಗಿರುವ 11 ಕೆ.ವಿ/ ಎಲ್.ಟಿ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿ ನಿರ್ವಹಿಸುತ್ತಿರುವುದರಿಂದ (ನಾಳೆ) ನ.28ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ(Power cut)ವಾಗಲಿದೆ.
ವಿದ್ಯುತ್ ಅಡಚಣೆಗೆ ಒಳಪಡುವ ಪ್ರದೇಶಗಳು:

ಎಫ್-15 ಮಿಲ್ ಏರಿಯಾದ ಎಂ.ಕೆ ಪ್ಯಾಲೇಸ್ ಹತ್ತಿರ, ರೈಲ್ವೇ ಸ್ಟೇಷನ್, ಚೋಳಗುಡ್ಡ, ನೆಹರು ನಗರ, ಅಗಸನಕಲ್ಲು, ತಾಜ್‍ಪೀರ್ ಲೇಔಟ್, ಆಶ್ರಯ ಬಡಾವಣೆ ಹಂತ-1 ಮತ್ತು ಹಂತ-2, ಇಟಗಿ ಚನ್ನಬಸಪ್ಪ ಲೇಔಟ್, ಸದಾನಂದಯ್ಯ ಬಡಾವಣೆ, ದವಳಗಿರಿ ಬಡಾವಣೆ 3ನೇ ಹಂತ, ವಿದ್ಯಾಶ್ರೀ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕ್ಲಿಕ್ ಮಾಡಿ ಓದಿ: ನೇರ ನೇಮಕಾತಿ ಸಂದರ್ಶನ ನವೆಂಬರ್ 30ಕ್ಕೆ
ಸಾರ್ವಜನಿಕರು, ಗ್ರಾಹಕರು ಸಹಕರಿಸಬೇಕೆಂದು ಚಿತ್ರದುರ್ಗ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
