ಮುಖ್ಯ ಸುದ್ದಿ
Education: ಶಿಕ್ಷಣಕ್ಕೆ ಆದ್ಯತೆ ನೀಡಿ | ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
CHITRADURGA NEWS | 17 NOVEMBER 2024
ಚಿತ್ರದುರ್ಗ: ಮುಂದಿನ ಯುಗ ಜ್ಞಾನ ವಿಜ್ಞಾನಗಳ ಯುಗವಾಗುತ್ತದೆ ಆದ್ದರಿಂದ ಶಿಕ್ಷಣ(Education)ಕ್ಕೆ ಆದ್ಯತೆ ನೀಡಬೇಕು ಎಂದು ಶ್ರೀ ಜಗದ್ಗುರು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಕ್ಲಿಕ್ ಮಾಡಿ ಓದಿ: ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ | ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ
ನಗರದ ಹೊರವಲಯದ ಭೋವಿ ಗುರುಪೀಠದಲ್ಲಿ ಶನಿವಾರ ಆಯೋಜಿಸಿದ್ದ, ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪಡೆದ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಸರ್ಕಾರ ನಿಮ್ಮ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿದೆ. ಇದು ಕರ್ನಾಟಕದ ಎರಡನೇ ಬಹುದೊಡ್ಡ ಪ್ರಶಸ್ತಿಯಾಗಿದೆ. ಇದು ದೊರಕಿರುವುದು ನಿಮ್ಮ ಪುಣ್ಯ ಎಂದರು.
ಪ್ರಶಸ್ತಿಗೆ ಆಯ್ಕೆಯಾದವರು ಯಾರು ಕೂಡ ಅರ್ಜಿ ಹಾಕಿಲ್ಲ, ಇವರ ಸೇವೆಯನ್ನು ಪರಗಣಿಸಿ ಸರ್ಕಾರ ಪ್ರಶಸ್ತಿ ನೀಡಿದೆ ಇದು ಸಂತೋಷಕರ ವಿಚಾರ ಎಂದರು. ಶಿಕ್ಷಣದಲ್ಲಿ ಸಂಸ್ಕಾರ ಸಿಕ್ಕರೆ ದೊಡ್ಡ ವ್ಯಕ್ತಿಗಳನ್ನಾಗಿ ಮಾಡಿ ಉನ್ನತ ಸ್ಥಾನಗಳಿಗೆ ಕೊಂಡೊಯ್ಯುತ್ತದೆ.
ಕ್ಲಿಕ್ ಮಾಡಿ ಓದಿ: ಇಸ್ರೋಗೆ ಭೇಟಿ ನೀಡಿದ ಹೊಳಲ್ಕೆರೆ ಸ್ನೇಹ ಪಬ್ಲಿಕ್ ಶಾಲೆ ಮಕ್ಕಳು
ನಮ್ಮ ಧರ್ಮದಲ್ಲಿರುವ ಕಂದಾಚಾರ, ಮೂಡನಂಬಿಕೆ ಹೊರ ಇಟ್ಟು ನಾವುಗಳು ವೈಜ್ಞಾನಿಕ ವೈಚಾರಿಕತೆಯನ್ನು ಹಾಗೂ ನಮ್ಮ ಆಚರಣೆ, ಧರ್ಮಗಳಲ್ಲಿ ವಿಜ್ಞಾನವನ್ನು ಅಳವಡಿಸಿಕೊಳ್ಳಬೇಕು, ಆಗ ಮಾತ್ರ ಭವಿಷ್ಯ ಸುಗಮವಾಗಿರುತ್ತದೆ. ಆಗ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ನಿಜವಾದ ಭಕ್ತಿ ಬಡವರ ಮನೆಯಲ್ಲಿ ಇದೆ. ಬಡವರ ಮನಸ್ಸು ಮುಗ್ದತೆಯಿಂದ ಕೂಡಿರುತ್ತದೆ ಎಂದು ಹೇಳಿದರು.
ಇಂತ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿರುವುದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗುತ್ತದೆ. ಈ ಪ್ರಶಸ್ತಿ ಅರ್ಹರಿಗೆ ಸಿಕ್ಕಿರುವುದರಿಂದ ಮುಂದಿನ ಪೀಳಿಗೆಗೆ ಯುವಕರಿಗೆ ಸ್ಪೂರ್ತಿ ತರಲಿದೆ ಎಂದು ಹೇಳಿದರು.
ಶಾಸಕ ಡಾ.ಎಂ. ಚಂದ್ರಪ್ಪ ಮಾತನಾಡಿ ಇಂತಹ ವ್ಯಕ್ತಿಗಳನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತೋಷಕರ ವಿಚಾರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾವು ಪ್ರಶಸ್ತಿ ಪಡೆದವರಿಗೆ ಪ್ರೋತ್ಸಾಹ ನೀಡಬೇಕು, ಮನುಷ್ಯ ಹುಟ್ಟಿನಿಂದ ಸಾರ್ಥಕತೆಯ ಜೀವನ ಕಟ್ಟಿಕೊಂಡು ಸಮಾಜದ ಋಣ ತೀರಿಸಬೇಕು ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹುಲಿಕಲ್ ನಟರಾಜ್ ಮಾತನಾಡಿದರು.
ಕ್ಲಿಕ್ ಮಾಡಿ ಓದಿ: ನಿರುದ್ಯೋಗಿಗಳಿಗೆ GOOD NEWS | ನ.21 ರಂದು ನೇರ ನೇಮಕಾತಿ ಸಂದರ್ಶನ
ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ.ಟಿ.ದಿಲೀಪ್ ಕುಮಾರ್, ಡಾ.ವಿ.ಕಮಲಮ್ಮ, ಹುಲಿಕಲ್ ನಟರಾಜ್,ಟಿ.ಸೋಮೇಶ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಾವೇರಿ ಭೋವಿ ಜನಾಂಗದ ಜಿಲ್ಲಾಧ್ಯಕ್ಷ ರವಿ ಪೂಜಾರಿ, ಚಿತ್ರದುರ್ಗ ಭೋವಿ ಜನಾಂಗದ ಜಿಲ್ಲಾ ಅಧ್ಯಕ್ಷ ತಿಪ್ಪೇಸ್ವಾಮಿ, ದಾವಣಗೆರೆ ಮಾಜಿ ರೇಷ್ಮೆ ಮಂಡಳಿ ಅಧ್ಯಕ್ಷಬಸವರಾಜ್, ಭೀಮಪ್ಪ, ಮೋಹನ್, ತಿಮ್ಮಣ್ಣ, ಭೋವಿಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಸೇರಿದಂತೆ ಭೋವಿ ಸಮಾಜದ ಮುಖಂಡರು ಇದ್ದರು.