Connect with us

    Drama performance: ನೀನಾಸಂ ತಿರುಗಾಟ | ಪ್ರೇಕ್ಷಕರ ಮನಸೂರೆಗೊಂಡ ಅಂಕದ ಪರದೆ

    ನೀನಾಸಂ ತಿರುಗಾಟ | ಪ್ರೇಕ್ಷಕರ ಮನಸೂರೆಗೊಂಡ ಅಂಕದ ಪರದೆ

    ಮುಖ್ಯ ಸುದ್ದಿ

    Drama performance: ನೀನಾಸಂ ತಿರುಗಾಟ | ಪ್ರೇಕ್ಷಕರ ಮನಸೂರೆಗೊಂಡ ಅಂಕದ ಪರದೆ

    CHITRADURGA NEWS | 15 NOVEMBER 2024

    ಚಿತ್ರದುರ್ಗ: ನಗರದ ರಂಗಸೌರಭ ಕಲಾ ಸಂಘ, ವಿ.ಪಿ.ಅಕಾಡೆಮಿ, ದಿನಸಿ ಫೋರ್ಟ್ ಸೂಪರ್ ಮಾರ್ಕೇಟ್, ಸಂಯುಕ್ತ ಆಶ್ರಯದಲ್ಲಿ ನವಂಬರ್ 13 ರಂದು ನೀನಾಸಂ ತಿರುಗಾಟ 2024ರ ಎರಡನೆಯ ನಾಟಕ ಮರಾಠಿ ನಾಟಕಕಾರ ಅಭಿರಾಮ್ ಭಡ್ಕಮ್ಕರ್ ರಚಿಸಿದ, ನಾಟಕಕಾರ ಮತ್ತು ಕನ್ನಡ ಚಲನಚಿತ್ರ ಗೀತರಚನೆಕಾರ ಜಯಂತ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ ಅಂಕದ ಪರದೆ ನಾಟಕ(Drama)ವು ವಿದ್ಯಾನಿಧಿ ವನಾರಸೆ ಪ್ರಸಾದ್ ನಿರ್ದೇಶನದಲ್ಲಿ ತರಾಸು ರಂಗಮಂದಿರದಲ್ಲಿ ಪ್ರದರ್ಶನ(performance) ಮಾಡಲಾಯಿತು.

    ಕ್ಲಿಕ್ ಮಾಡಿ ಓದಿ: ಬಬ್ಬೂರಿನಲ್ಲಿ ಎರಡು ದಿನ ಕೃಷಿಮೇಳ

    ಆಕಾಶವಾಣಿ ಕಾರ್ಯನಿರ್ವಾಹಕ ಶಿವಪ್ರಕಾಶ್, ಸ್ಟೇಷನ್ ಇಂಜೀನಿಯರ್ ಕೆ.ಕೆ.ಮಣಿ, ರಂಗನಿರ್ದೇಶಕ ಕೆಪಿಎಮ್ ಗಣೇಶಯ್ಯ, ರಂಗಸಂಘಟಕ ಎಂ.ವಿ.ನಟರಾಜ, ಪ್ರಾಧ್ಯಾಪಕ ಎಂ.ವಿ.ನಾಗರಾಜ ಮತ್ತು ತಿರುಗಾಟದ ಸಂಚಾಲಕ ರಘು ಪುರಪ್ಪೇಮನೆ ಉಪಸ್ಥಿತರಿದ್ದರು.

    ರಂಗಸೌರಭ ಕಲಾಸಂಘದ ಅಧ್ಯಕ್ಷ ಡಾ.ಕೆ.ಮೋಹನ್‌ಕುಮಾರ್, ಜಿಲ್ಲಾ ಶಸಾಪ ಅಧ್ಯಕ್ಷ ಕೆ.ಎಮ್.ವೀರೇಶ್ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ನಾಗರಿಕರು, ರಂಗಾಸಕ್ತರು, ಜಿಲ್ಲಾಮಟ್ಟದ ಅಧಿಕಾರಿಗಳು, ಪತ್ರಕರ್ತರು, ವಿದ್ಯಾರ್ಥಿಗಳು, ಕಲಾವಿದರು, ಸಾಹಿತಿಗಳು, ಉಪನ್ಯಾಸಕರು ಮುಂತಾದವರು ನೀನಾಸಮ್ ತಿರುಗಾಟದ ಅಂಕದ ಪರದೆ ನಾಟಕವನ್ನು ವೀಕ್ಷಿಸಿದರು.

    ಕ್ಲಿಕ್ ಮಾಡಿ ಓದಿ: ವಾಣಿವಿಲಾಸ ಸಾಗರ ಕೋಡಿ ಬೀಳಲು 1.95 ಅಡಿ ಬಾಕಿ

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top