ಮುಖ್ಯ ಸುದ್ದಿ
Rain Damage; ಮಳೆಯಿಂದ ಈರುಳ್ಳಿ, ಶೇಂಗಾ ಬೆಳೆ ನಾಶ | ಪರಿಹಾರಕ್ಕೆ ರೈತರ ಆಗ್ರಹ

CHITRADURGA NEWS | 26 OCTOBER 2024
ಚಿತ್ರದುರ್ಗ: ನಿರಂತರ ಮಳೆ(Rain)ಗೆ ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ತಾಲ್ಲೂಕಿನಲ್ಲಿ ಶೇಂಗಾ(Peanut), ಈರುಳ್ಳಿ(Onion) ಇನ್ನೂ ಇತರೆ ಬೆಳೆಗಳು ನೆಲದಲ್ಲಿಯೇ ಮೊಳಕೆಯಾಗಿದ್ದು ಹಾಗೂ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕೆಂದು ರೈತರು ಅಗ್ರಹಿಸಿದರು.
ಕ್ಲಿಕ್ ಮಾಡಿ ಓದಿ: Power Cut; ಹೊಳಲ್ಕೆರೆ ಪಟ್ಟಣದಲ್ಲಿ 2 ದಿನ ವಿದ್ಯುತ್ ವ್ಯತ್ಯಯ
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಚಿತ್ರದುರ್ಗ ಜಿಲ್ಲೆ 17ವರ್ಷಗಳಿಂದ ಮಳೆಯಾಗದೆ ರೈತರು ಪ್ರಕೃತಿ ವೈಫಲ್ಯದಿಂದ ಬೆಳೆದ ಬೆಳೆಗಳು ಕೈಗೆ ಸಿಗದೆ ಕೃಷಿಗೆ ಹಾಕಿದ ಬಂಡವಾಳವು ವಾಪಸ್ಸು ಬಾರದೆ ಸಾಲಗಾರರಾಗಿ ಬರಗಾಲವನ್ನು ಎದುರಿಸುತ್ತಿದ್ದಾರೆ.
ಕಳೆದ ವರ್ಷ ಮಳೆ ಇಲ್ಲದೆ ಬೆಳೆಗಳು ಒಣಗಿ ಹೋಗಿದ್ದು, ಈ ವರ್ಷ ಅತಿಹೆಚ್ಚು ಮಳೆಯಿಂದ ಬೆಳೆಗಳು ಕೊಳತು ಹೋಗಿ ಮೊಳಕೆಯಾಗಿರುತ್ತವೆ. ರೈತರು ಮಾಡಿರುವ ಬ್ಯಾಂಕ್ ಸಾಲದ ವಸೂಲಾತಿಗಾಗಿ ರೈತರಿಗೆ ಕಿರುಕುಳ, ನೋಟೀಸ್ ನೀಡಿ ಹರಾಜು ಹಾಕುವ ಕುರಿತು ಬೆದರಿಸುತ್ತಿದ್ದಾರೆ.
ಕ್ಲಿಕ್ ಮಾಡಿ ಓದಿ: Astrology; ದಿನ ಭವಿಷ್ಯ | 26 ಅಕ್ಟೋಬರ್ | ಆದಾಯಕ್ಕಿಂತ ಹೆಚ್ಚು ಖರ್ಚು, ಮಕ್ಕಳ ಆರೋಗ್ಯದಲ್ಲಿ ಎಚ್ಚರ, ಶುಭ ಸುದ್ದಿ
ಈ ಸಮಸ್ಯೆ ಬಗೆಹರಿಸಲು ತಾವುಗಳು ನವೆಂಬರ್ ಮೊದಲ ವಾರದಲ್ಲಿ ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಮೇಲ್ಕಂಡ ಇಲಾಖೆಗಳ ಅಧಿಕಾರಿಗಳೊಂದಿಗೆ ಖುದ್ದು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಬೆಳೆ ನಷ್ಟ ಪರಿಹಾರ ಮತ್ತು ರೈತರಿಗೆ ಬೆಳೆ ವಿಮೆ ಪರಿಹಾರ ಕೊಡಿಸಿ ಎಂದು ಒತ್ತಾಯಿಸಿದರು.
ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಿಗೂ, ಖಾಸಗಿ ಬ್ಯಾಂಕುಗಳಿಗೂ ವಸೂಲಿಗೆ ಬಾರದಂತೆ ಸೂಚನೆ ನೀಡಬೇಕೆಂದು ರೈತರು ಮನವಿ ಮಾಡಿದರು.
ಕ್ಲಿಕ್ ಮಾಡಿ ಓದಿ: Arecanut: ಅಡಿಕೆ ಧಾರಣೆ | ಚನ್ನಗಿರಿ ಮಾರುಕಟ್ಟೆಯಲ್ಲಿ 50 ಸಾವಿರದ ಗಡಿ ದಾಟಿದ ರಾಶಿ ಅಡಿಕೆ
ಈ ವೇಳೆ ಜಿಲ್ಲಾಧ್ಯಕ್ಷರಾದ ಧನಂಜಯ, ಚಳ್ಳಕೆರೆ ತಾಲ್ಲೂಕ್ ಅಧ್ಯಕ್ಷ ಹಂಪಣ್ಣ, ತಿಮ್ಮಣ್ಣ, ಕುಮಾರ್‍ಸ್ವಾಮಿ, ರಾಜಣ್ಣ, ರಾಮಚಂದ್ರಪ್ಪ, ರುದ್ರಪ್ಪ, ಶ್ರೀನಿವಾಸ್ ಸೇರಿದಂತೆ ಇತರರು ಭಾಗವಹಿಸಿದ್ದರು.
