Connect with us

    Murugha shree Release: ಮುರುಘೇಶನ ಆಶೀರ್ವಾದದಿಂದ ಬಿಡುಗಡೆ | ಮುರುಘಾ ಶರಣರು

    ಮುಖ್ಯ ಸುದ್ದಿ

    Murugha shree Release: ಮುರುಘೇಶನ ಆಶೀರ್ವಾದದಿಂದ ಬಿಡುಗಡೆ | ಮುರುಘಾ ಶರಣರು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 07 OCTOBER 2024

    ಚಿತ್ರದುರ್ಗ: ಎರಡನೇ ಅವಧಿಯ ಐದು ತಿಂಗಳ ಕಾರಾಗೃಹ ವಾಸದಿಂದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರಿಗೆ ಮುಕ್ತಿ ಸಿಕ್ಕಿದೆ (Murugha shree Release).

    ಮುರುಘಾ ಮಠದಲ್ಲಿ ಶರಣ ಸಂಸ್ಕøತಿ ಉತ್ಸವ ಆರಂಭವಾಗಿವ ಒಂದು ದಿನ ಮೊದಲು, ದಸರಾ ಸಂಭ್ರಮದಲ್ಲಿ ಶರಣರು ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಹೊರಗೆ ಬಂದಿದ್ದಾರೆ.

    ಇದನ್ನೂ ಓದಿ: ಮುರುಘಾ ಶರಣರಿಗೆ ಜಾಮೀನು ಮಂಜೂರು | ಚಿತ್ರದುರ್ಗ ನ್ಯಾಯಾಲಯ ಆದೇಶ

    ಆದರೆ, ಶ್ರೀಗಳಿಗೆ ಈ ಹಿಂದೆ ಹೈಕೋರ್ಟ್ ಜಾಮೀನು ನೀಡುವಾಗ ಚಿತ್ರದುರ್ಗ ಪ್ರವೇಶಿಸಬಾರದು ಎನ್ನುವ ಷರತ್ತು ವಿಧಿಸಿರುವ ಹಿನ್ನೆಲೆಯಲ್ಲಿ ಈಗಲೂ ಅದು ಮುಂದುವರೆಯುತ್ತದೆ. ಈ ಕಾರಣಕ್ಕೆ ಚಿತ್ರದುರ್ಗದಿಂದ ನೇರವಾಗಿ ದಾವಣಗೆರೆಗೆ ತೆರಳಿದ್ದಾರೆ.

    ಬೆಳಗ್ಗೆ ಚಿತ್ರದುರ್ಗ ಎರಡನೇ ಅಪರ ಜಿಲ್ಲಾ ನ್ಯಾಯಾಲಯ ಶ್ರೀಗಳಿಗೆ ಜಾಮೀನು ಮಂಜೂರು ಮಾಡಿತ್ತು. ಕಾರಾಗೃಹಕ್ಕೆ ನ್ಯಾಯಾಲದ ಆದೇಶ ಪ್ರತಿ ತಲುಪಿ, ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ ಸಂಜೆ 4.15ರ ವೇಳೆಗೆ ಶ್ರೀಗಳು ಕಾರಾಗೃಹದಿಂದ ಹೊರಗೆ ಬಂದರು.

    ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ಧಾರಣೆ ಎಷ್ಟಿದೆ ?

    ಈ ವೇಳೆ ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಮಠದ ಮರಿ ಬಸವಾದಿತ್ಯ ದೇವರು, ಹಿರಿಯ ನ್ಯಾಯವಾದಿಗಳಾದ ಕೆ.ಎನ್.ವಿಶ್ವನಾಥಯ್ಯ, ಉಮೇಶ್, ಮುಖಂಡರಾದ ಜಿತೇಂದ್ರ ಎನ್.ಹುಲಿಕುಂಟೆ, ವಕೀಲ ಪ್ರತಾಪ್ ಜೋಗಿ ಸೇರಿದಂತೆ ಹಲವರು ಸ್ವಾಗತಿಸಿದರು.

    https://t.co/TenVxrpJmz(https://x.com/Chitradurg81233/status/1843267116327190727?s=03)

    ಮುರುಘೇಶನ ಆಶೀರ್ವಾದಿಂದ ಬಿಡುಗಡೆ:
    ಶ್ರೀ ಶಿವಮೂರ್ತಿ ಮುರುಘಾ ಶರಣರು ಕಾರಾಗೃಹದಿಂದ ಹೊರಬಂದ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಬಸವೇಶ, ಮುರುಘೇಶನ ಆಶೀರ್ವಾದದಿಂದ ಬಂಧಿಖಾನೆಯಿಂದ ಬಿಡುಗಡೆ ಆಗಿದೆ ಎಂದರು. ಸತ್ಯಕ್ಕೆ ಜಯ ಸಿಗಬಹುದು ಎನ್ನುವ ನಿರೀಕ್ಷೆ ಇದೆ. ಇದು ಮೌನವಹಿಸುವ ಕಾಲ. ಮುಂದೆ ವಿಚಾರ ಮಾಡಿ ಹೆಜ್ಜೆ ಇಡೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇಲ್ಲಿಂದ ದಾವಣಗೆರೆಯ ಶಿವಯೋಗಾಶ್ರಮಕ್ಕೆ ತೆರಳುತ್ತೇವೆ. ಜೈಲಿನ ಒಳಗಿನ ಅನುಭವವನ್ನು ಮುಂದೆ ಹೇಳುತ್ತೇವೆ. ಇದು ಸಕಾಲ ಅಲ್ಲ. ಇದು ಮೌನ ವಹಿಸುವ ಕಾಲ. ಕಾನೂನು ಹೋರಾಟ ಮುಂದುವರೆಯುತ್ತದೆ ಎಂದರು.

    ಎರಡನೇ ಬಾರಿ ಜಾಮೀನು
    2022 ಸೆಪ್ಟಂಬರ್ 1 ರಂದು ಬಂಧನಕ್ಕೆ ಒಳಗಾಗಿದ್ದ ಮುರುಘಾ ಶರಣರು 2023 ನವೆಂಬರ್ 8 ರಂದು ಜಾಮೀನು ಪಡೆದು ಜೈಲಿನಿಂದ ಹೊರಬಂದು ದಾವಣಗೆರೆಯ ಶಿವಯೋಗಾಶ್ರಮದಲ್ಲಿ ನೆಲೆಸಿದ್ದರು.

    murughashree release

    ಮುರುಘಾ ಶರಣರು ಬಿಡುಗಡೆ

    ಆದರೆ, ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ 2024 ಏಪ್ರಿಲ್ 23 ರಂದು ಒಂದು ವಾರದೊಳಗೆ ಶರಣರು ವಿಚಾರಣಾ ನ್ಯಾಯಾಲಯಕ್ಕೆ ಶರಣಾಗಬೇಕು ಎಂದು ಆದೇಶ ಹೊರಡಿಸಿತ್ತು.

    ಇದನ್ನೂ ಓದಿ: ವಿವಿ ಸಾಗರಕ್ಕೆ 2426 ಕ್ಯೂಸೆಕ್ ಒಳಹರಿವು | ಜಿಲ್ಲೆಯ ರೈತರಿಗೆ ಸಂತಸ

    ಈ ವೇಳೆ ಸಾಕ್ಷಿಗಳ ವಿಚಾರಣೆ ಮುಗಿಯುವವರೆಗೆ ನಾಲ್ಕು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿರಬೇಕು ಎಂದು ನಿರ್ದೇಶನ ನೀಡಲಾಗಿತ್ತು. ಸರ್ವೋಚ್ಛ ನ್ಯಾಯಾಲಯದ ಆದೇಶಾನುಸಾರ ಶ್ರೀಗಳು ಏ.29 ರಂದು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top