ಮುಖ್ಯ ಸುದ್ದಿ
Chandravalli: ಗಂಗೆಯ ಮಡಿಲು ಸೇರಿದ ಗೌರಿಪುತ್ರ | ಹಿಂದೂ ಮಹಾಗಣಪತಿ ವಿಸರ್ಜನೆ | ಶೋಭಾಯಾತ್ರೆ ಸಂಪನ್ನ
Published on
CHITRADURGA NEWS | 28 SEPTEMBER 2024
ಚಿತ್ರದುರ್ಗ: ಸೋಷಿಯಲ್ ಮೀಡಿಯಾಗಳಲ್ಲಿ ದುರ್ಗದ ಬಾಸ್ ಎಂದೇ ಬಿಂಬಿತವಾಗುತ್ತಿರುವ ಹಿಂದೂ ಮಹಾಗಣಪತಿಗೆ ಅದ್ದೂರಿ ವಿದಾಯ ಹೇಳಲಾಯಿತು.
ಬೆಳಗ್ಗೆ 12 ಗಂಟೆಗೆ ಪ್ರಾರಂಭವಾದ ಶೋಭಾಯಾತ್ರೆ ನಿರಂತರ ಹತ್ತು ತಾಸು ಸಾಗಿ, ನಾಲ್ಕು ಕಿ.ಮೀ ಅಂತರದಲ್ಲಿರುವ ಚಂದ್ರವಳ್ಳಿ (Chandravalli) ತಲುಪಿತು.
ಇದನ್ನೂ ಓದಿ: ಶೋಭಾಯಾತ್ರೆಯಲ್ಲಿ ನಟರ, ಫ್ಯಾನ್ಸ್‍ಗಳ ಅಬ್ಬರ | ರಾರಾಜಿಸುತ್ತಿವೆ ಕೇಸರಿ ಭಾವುಟ
ಗಣೇಶ ವಿಸರ್ಜನೆಗಾಗಿ ಇಲ್ಲಿ ನಿರ್ಮಿಸಿರುವ ಬಾವಿಯಲ್ಲಿ ಕ್ರೇನ್ ಮೂಲಕ ಗಣಪತಿಯನ್ನು ಬಾವಿಯ ದಡಕ್ಕೆ ತೆಗೆದುಕೊಂಡು ಹೋಗಿ ಮಹಾ ಮಂಹಳಾರತಿ ಸಲ್ಲಿಸಿದ ನಂತರ ವಿಸರ್ಜನೆಗೆ ಅಣಿಗೊಳಿಸಲಾಯಿತು.
ನೂರಾರು ಕಾರ್ಯಕರ್ತರು, ಸಾವಿರಾರು ಜನರ ಸಮ್ಮುಖದಲ್ಲಿ ಗಣಪ ಕ್ರೇನ್ ಬೆಲ್ಟ್ ಬಿಗಿಯಲ್ಲಿ ನಿಧಾನವಾಗಿ ನೀರಿಗಿಳಿದು ಮುಳುಗುವ ಮೂಲಕ ಈ ವರ್ಷದ ಗಣೇಶೋತ್ಸವಕ್ಕೆ ಅಂತಿಮ ವಿದಾಯ ಹೇಳಲಾಯಿತು.
Continue Reading
Related Topics:Chandravalli, Chitradurga, Chitradurga news, Chitradurga Updates, DJ Saddu, Ganapati Dissolution, Hindu Mahaganapati, Kannada Latest News, Shobhayatra, ಕನ್ನಡ ಲೇಟೆಸ್ಟ್ ನ್ಯೂಸ್, ಗಣಪತಿ ವಿಸರ್ಜನೆ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಡಿಜೆ ಸದ್ದು, ಶೋಭಾಯಾತ್ರೆ, ಹಿಂದೂ ಮಹಾಗಣಪತಿ
Click to comment