Connect with us

    Chitradurga: ಉಪನ್ಯಾಸಕರಿಲ್ಲದೆ ಸೊರಗುತ್ತಿದೆ ಸರ್ಕಾರಿ ವಿಜ್ಞಾನ ಕಾಲೇಜು

    Government Scince college

    ಮುಖ್ಯ ಸುದ್ದಿ

    Chitradurga: ಉಪನ್ಯಾಸಕರಿಲ್ಲದೆ ಸೊರಗುತ್ತಿದೆ ಸರ್ಕಾರಿ ವಿಜ್ಞಾನ ಕಾಲೇಜು

    CHITRADURGA NEWS | 24 SEPTEMBER 2024

    ಚಿತ್ರದುರ್ಗ: (Chitradurga) ಐತಿಹಾಸಿಕ ಸರ್ಕಾರಿ ವಿಜ್ಞಾನ ಕಾಲೇಜು ರಾಜ್ಯದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದ್ದು ಯಶಸ್ವಿ 75ವರ್ಷ ಪೂರೈಸಿದೆ.

    ಇಂತಹ ಕಾಲೇಜಿನಲ್ಲಿ ಈ ವರ್ಷ ವಿದ್ಯಾರ್ಥಿಗಳ ದಾಖಲಾತಿ ಕೊರತೆ ಒಂದು ಕಡೆಯಾದರೆ, ಉಪನ್ಯಾಸಕರ ವರ್ಗಾವಣೆಯಿಂದ ಅನೇಕ ವಿಷಯಗಳಿಗೆ ಬೋಧನೆ ಮಾಡಲು ಸಿಬ್ಬಂದಿ ಇಲ್ಲವಾಗಿದ್ದಾರೆ. ಅತಿಥಿ ಉಪನ್ಯಾಸಕರ ನೇಮಕವೂ ಆಗದೆ ಕಾಲೇಜು ಸೊರಗುತ್ತಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪ್ರಕಾಶ್ ರಾಮಾನಾಯ್ಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಶ್ರೀ ಶಿವಕುಮಾರ ಸ್ವಾಮೀಜಿ ಹುಟ್ಟೂರಿಗೆ ಭದ್ರೆ | ನೆರವೇರಿದ ಶ್ರೀ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಸಂಕಲ್ಪ

    ಈ ಕಾಲೇಜು ಲಕ್ಷಾಂತರ ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದು, ಅನೇಕರು ಅತ್ಯುನ್ನತ ಸ್ಥಾನಗಳಲ್ಲಿದ್ದಾರೆ. ಇಂತಹ ಹಿನ್ನೆಲೆ ಹೊಂದಿರುವ ಕಾಲೇಜಿನಲ್ಲಿ ಈಗಲೂ ಸಾವಿರಾರು ವಿಧ್ಯಾರ್ಥಿಗಳು ಪ್ರವೇಶ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ.

    ಕಾಲೇಜಿನಲ್ಲಿ ಬಹುತೇಕ ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲಾ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು ಬಡ ವಿಧ್ಯಾರ್ಥಿಗಳಿಗೆ ಆಶಾಕಿರಣವಾಗಿದೆ. ರಾಜ್ಯ ಸರ್ಕಾರ ಯಾವುದೇ ಬಡ ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಬಯಸಿ ಬಂದಲ್ಲಿ ಅವರಿಗೆ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಆದೇಶಿಸಿದೆ. ಈ ವರ್ಷ ಕಾಲೇಜಿಗೆ ಹಲವು ವಿಭಾಗದಲ್ಲಿ ವಿಧ್ಯಾರ್ಥಿಗಳು ಪ್ರವೇಶ ಬಯಸಿ ಬಂದರೂ ಅವರೆಲ್ಲರಿಗೂ ಹಲವು ಸಬೂಬು ಹೇಳಿ ಪ್ರಾಂಶುಪಾಲರು ಪ್ರವೇಶ ನಿರಾಕರಿಸಿ ಖಾಸಗಿ ಕಾಲೇಜಿಗೆ ಅನುಕೂಲ ಮಾಡಿದ್ದಾರೆ ಎಂದು ದೂರಿದ್ದಾರೆ.

    ಇದನ್ನೂ ಓದಿ: ಬಿಎಸ್‍ಸಿ, ಜಿಎನ್‍ಎಂ ನರ್ಸಿಂಗ್ ಕೋರ್ಸ್ ವಿದ್ಯಾರ್ಥಿಗಳಿಂದ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

    ಕಾಲೇಜಿನಲ್ಲಿ 2007-08 ರಿಂದ ರಸಾಯನಶಾಸ್ತ್ರ, ಬೌತಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಗಣಿತ ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು, ಇಡೀ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಾ ಬರಲಾಗಿದೆ. ಈ ಸಾಧನೆಗೆ ಅತಿಥಿ ಮತ್ತು ಖಾಯಂ ಉಪನ್ಯಾಸಕರು ಕಾರಣಿಕರ್ತರಾಗಿದ್ದರು.

    ಆದರೆ ಈ ಬಾರಿಯ ದಾಖಲಾತಿ ಕುಸಿತದಿಂದ ಕಾರ್ಯಭಾರ ಕಡಿಮೆಯಾಗಿದ್ದು ಸ್ನಾತಕೋತ್ತರ ವಿಭಾಗದ ಕಾರ್ಯಾಬಾರದ ಮಾಹಿತಿಯನ್ನು ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಇಲಾಖೆಗೆ ಅಪ್ಲೋಡ್ ಮಾಡದೇ ಇನ್ಮೇನು ಕೆಲವೇ ದಿನಗಳಲ್ಲಿ ತರಗತಿಗಳು ಶುರುವಾದರು ಅತಿಥಿ ಉಪನ್ಯಾಸಕರ ನೇಮಕಾತಿ ಬೇಗ ಪೂರ್ಣಗೊಂಡರೂ ಸ್ನಾತಕೊತ್ತರ ವಿಭಾಗಗನುಗುಣವಾಗಿ ಕಾರ್ಯಾಭಾರಕ್ಕೆ ಅತಿಥಿ ಉಪನ್ಯಾಸಕರು ನೇಮಕವಾಗುವುದಿಲ್ಲ.

    ಇದನ್ನೂ ಓದಿ: ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಿ | ವಿಜಯೇಂದ್ರ ಕರೆ

    ಹೀಗಿರುವಾಗ ಮೊನ್ನೆ ಕಾಲೇಜು ಶಿಕ್ಷಣ ಇಲಾಖೆಯಿಂದ ನಡೆದ ವರ್ಗಾವಣೆಯಿಂದಾಗಿ ಈ ಕಾಲೇಜಿನ ಹಲವು ಖಾಯಂ ಉಪನ್ಯಾಸಕರು ವರ್ಗಾವಣೆಯಾಗಿದ್ದಾರೆ.

    ಕೆಲವು ಸ್ನಾತಕೊತ್ತರ ವಿಭಾಗಕ್ಕೆ ಯಾವುದೇ ಉಪನ್ಯಾಸಕರು ಇಲ್ಲದೆಯೇ ಇಡೀ ವಿಭಾಗಗಳು ಅಳಿವಿನಂಚಿಗೆ ತಲುಪಿ ಮುಚ್ಚುವ ಪರಿಸ್ಥಿತಿ ಒದಗಿ ಬರಲಿದೆ.

    ಇದನ್ನೂ ಓದಿ: ಮೂಲ ಸೌಲಭ್ಯ ಅಭಿವೃದ್ಧಿಗೆ ಜಿಲ್ಲೆಯ 87 ಗ್ರಾಮಗಳ ಆಯ್ಕೆ

    ಇತ್ತ ಖಾಯಾಂ ಉಪನ್ಯಾಸಕರೂ ಇಲ್ಲ, ಅತ್ತ ಅತಿಥಿ ಉಪನ್ಯಾಸಕರೂ ಇಲ್ಲದಂತಾಗಿ ಸರ್ಕಾರಿ ವಿಜ್ಞಾನ ಕಾಲೇಜು ಸೊರಗುತ್ತಿದೆ. ಉನ್ನತ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಸಚಿವರಾದ ಎಂ.ಸಿ.ಸುಧಾಕರ್ ಕಾಲೇಜಿನಲ್ಲಿ ಉಳಿದಿರುವ ಉಪನ್ಯಾಸಕರನ್ನು ವರ್ಗಾವಣೆಗೊಳಿಸದೇ ಅಲ್ಲಿಯೇ ಮುಂದುವರೆಸಲು ಅವಕಾಶ ನೀಡಬೇಕು ಎಂದು ಪ್ರಕಾಶ್ ರಾಮಾನಾಯ್ಕ್ ಮನವಿ ಮಾಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top