Connect with us

    Artist; ಚಿತ್ರದುರ್ಗದ ಕಲಾವಿದ ಕಣ್ಮೇಶ್ ಅವರಿಗೆ ಪ್ರತಿಷ್ಠಿತ ಪಿ.ಆರ್.ತಿಪ್ಪೇಸ್ವಾಮಿ ಪುರಸ್ಕಾರ | ಸಿಎಂ‌ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಪ್ರದಾನ

    ಕಲಾವಿದ ಕಣ್ಮೇಶ್ ಅವರಿಗೆ ಪ್ರತಿಷ್ಠಿತ ಪಿ.ಆರ್.ತಿಪ್ಪೇಸ್ವಾಮಿ ಪುರಸ್ಕಾರ | ನಾಗರಾಜ್‍ಬೇದ್ರೆ

    ಮುಖ್ಯ ಸುದ್ದಿ

    Artist; ಚಿತ್ರದುರ್ಗದ ಕಲಾವಿದ ಕಣ್ಮೇಶ್ ಅವರಿಗೆ ಪ್ರತಿಷ್ಠಿತ ಪಿ.ಆರ್.ತಿಪ್ಪೇಸ್ವಾಮಿ ಪುರಸ್ಕಾರ | ಸಿಎಂ‌ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಪ್ರದಾನ

    CHITRADURGA NEWS | 17 SEPTEMBER 2024

    ಚಿತ್ರದುರ್ಗ: ಚಿತ್ರದುರ್ಗದ ಕಲಾವಿದ(Artist) ಸಿ.ಕಣ್ಮೇಶ್‍ ಅವರಿಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆಯ ಪಿ.ಆರ್.ತಿಪ್ಪೇಸ್ವಾಮಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಸೆ.20 ರಂದು ರಾಜ್ಯದ ಮುಖ್ಯಮಂತ್ರಿ(CM) ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ನಾಗರಾಜ್‍ಬೇದ್ರೆ ತಿಳಿಸಿದರು.

    ಕ್ಲಿಕ್ ಮಾಡಿ ಓದಿ: Convocation; ಸೆ.20 ರಂದು ಬಿಟ್ಸ್ ಹೈಟೆಕ್ ಕಾಲೇಜಿನ ಘಟಿಕೋತ್ಸವ 

    ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಜೆ.ಎಂ.ಚಿತ್ರಕಲಾ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಸಿ.ಕಣ್ಮೇಶ್‍ರವರು ಬಡುಕಟ್ಟು ಸಮುದಾಯ ಹಾಗೂ ಜಾನಪದಕ್ಕೆ ಸಂಬಂಧಿಸಿದಂತೆ ಹೆಚ್ಚು ಚಿತ್ರಕಲೆಗಳನ್ನು ರಚಿಸಿ ಕಲೆಗಾಗಿಯೇ ಜೀವನವನ್ನು ಮುಡುಪಾಗಿಟ್ಟಿದ್ದಾರೆ ಎಂದು ಹೇಳಿದರು.

    ಪ್ರಕಾಶ್ ರಾಮನಾಯ್ಕ ಮಾತನಾಡಿ, ಪಿ.ಆರ್.ತಿಪ್ಪೇಸ್ವಾಮಿ ಕೇವಲ ಜಾನಪದ ಕಲಾವಿದರಷ್ಟೆ ಅಲ್ಲ. ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿ ಜಾನಪದ ವಸ್ತುಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಉಳಿಸಿದ್ದಾರೆ.

    ಚಿತ್ರಕಲೆಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಬರೆದು ಕಾಲೇಜುಗಳಿಗೆ ನೀಡಿದ್ದಾರೆ. ಧಮಸ್ಥಳದಲ್ಲಿರುವ ಮ್ಯೂಸಿಯಂನಲ್ಲಿ ಪಿ.ಆರ್.ತಿಪ್ಪೇಸ್ವಾಮಿರವರ ಸಂಗ್ರಹಗಳು ಇಂದಿಗೂ ಇವೆ.

    ಕ್ಲಿಕ್ ಮಾಡಿ ಓದಿ: ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಅಪಘಾತ

    ಅವಿವಾಹಿತರಾಗಿದ್ದುಕೊಂಡು ಕಲೆಗಾಗಿಯೇ ಜೀವನವನ್ನು ಮುಡುಪಾಗಿಟ್ಟ ಪಿ.ಆರ್.ತಿಪ್ಪೇಸ್ವಾಮಿ ಪ್ರಶಸ್ತಿ ಸಿ.ಕಣ್ಮೇಶ್‍ಗೆ ಸಿಕ್ಕಿರುವುದು ಅವರ ಪರಿಶ್ರಮಕ್ಕೆ ತಕ್ಕ ಫಲ ಎಂದರು.

    ಪ್ರಶಸ್ತಿಯು 25 ಸಾವಿರ ರೂ.ನಗದು ಸ್ಮರಣಿಕೆ ಒಳಗೊಂಡಿರುತ್ತದೆ ಎಂದರು.

    ಜಾನಪದ ಹಾಡುಗಾರ ಹರೀಶ್ ಮಾತನಾಡಿ, ಜನಪದ ಚಿತ್ರಗಳ ಮೂಲಕ ಕಲೆಯನ್ನು ಚಿತ್ರಿಸುವ ಅದ್ಬುತ ಕಲಾವಿದ ಪಿ.ಕಣ್ಮೇಶ್‍ಗೆ ಪಿ.ಆರ್.ತಿಪ್ಪೇಸ್ವಾಮಿ ರಾಜ್ಯ ಮಟ್ಟದ ಪ್ರಶಸ್ತಿ ದೊರಕಿರುವುದು ಇಡಿ ಚಿತ್ರಕಲೆಗೆ ಸಂದ ಗೌರವ ಎಂದರು.

    ಪತ್ರಿಕಾಗೋಷ್ಟಿಯಲ್ಲಿ ಪ್ರಸನ್ನಕುಮಾರ್, ಸೈಯದ್ ಖುದ್ದೂಸ್, ರಮೇಶ, ತಿಮ್ಮಾರೆಡ್ಡಿ ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top