ಮುಖ್ಯ ಸುದ್ದಿ
Renukaswamy case: ನಟಿಯರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ | ಪ್ರತಿಕ್ರಿಯೆ ಮೂಲಕ ಗೊಂದಲಕ್ಕೆ ತೆರೆ

CHITRADURGA NEWS | 10 SEPTEMBER 2024
ಚಿತ್ರದುರ್ಗ: ನಟ ದರ್ಶನ್ ಗ್ಯಾಂಗ್‌ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಬಳಿಕ ನಟಿ ರಾಗಿಣಿ ದ್ವಿವೇದಿ ಹಾಗೂ ಶುಭಾ ಪೂಂಜಾ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.
ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಮಾತ್ರವಲ್ಲದೆ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭಾ ಪೂಂಜಾ ಅವರಿಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಮಸೇಜ್ ಮಾಡಿದ್ದಾನೆ ಎಂದು ಪ್ರಕರಣದ ‘ಎ14 ’ ಆರೋಪಿ ಪ್ರದೂಶ್ ಸ್ವ ಇಚ್ಛಾ ಹೇಳಿಕೆ ನೀಡಿದ್ದಾನೆ. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಈ ಇಬ್ಬರು ನಟಿಯರು ಪ್ರತಿಕ್ರಿಯೆ ನೀಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಕ್ಲಿಕ್ ಮಾಡಿ ಓದಿ: ಭದ್ರಾ ಮೇಲ್ದಂಡೆ ಯೋಜನೆ ಅನುದಾನ | ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ

ನಟಿ ಶುಭಾ ಪೂಂಜಾ
‘ನಕಲಿ ಖಾತೆ ಮೂಲಕ ಇಂತಹ ಸಂದೇಶಗಳು ಬರುತ್ತಲೇ ಇರುತ್ತವೆ. ಆದರೆ ನಾನು ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಗೌತಮ್ ಎನ್ನುವ ಖಾತೆಯಿಂದ ಮೆಸೇಜ್ ಬಂದಿರುವ ಬಗ್ಗೆ ಮಾಹಿತಿಯಿಲ್ಲ. ಸಿಂಗಾಪುರ ಮೂಲದ ಏಜೆನ್ಸಿ ನನ್ನ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡುತ್ತಿದೆ. ಏನೇ ಮೆಸೇಜ್ ಬಂದರೂ ಅವರು ಹ್ಯಾಂಡಲ್ ಮಾಡುತ್ತಾರೆ. ರೇಣುಕಾಸ್ವಾಮಿಯಿಂದ ನನಗೆ ಅಂತಹ ಮೇಸೆಜ್ ಬಂದಿಲ್ಲ. ಎಲ್ಲದಕ್ಕೂ ನನ್ನ ಹೆಸರು ತಳುಕು ಹಾಕುವುದು ಹಾಸ್ಯಾಸ್ಪದ’ ಎಂದು ನಟಿ ರಾಗಿಣಿ ಸ್ಪಷ್ಟಪಡಿಸಿದ್ದಾರೆ.
‘ರೇಣುಕಾಸ್ವಾಮಿ ವಿಚಾರದಲ್ಲಿ ಬೆಳಗ್ಗೆಯಿಂದ ನನಗೆ ಕರೆ ಮಾಡುತ್ತಿರುವ ನನ್ನ ಮಾಧ್ಯಮ ಮಿತ್ರರೇ ನಾನು ಆ ರೀತಿಯ ಯಾವುದೇ ಮೆಸೇಜ್‌ಗಳನ್ನು ನನ್ನ ವೈಯಕ್ತಿಕ ಖಾತೆಗೆ ಸ್ವೀಕರಿಸಿಲ್ಲ ಎಂದು ಈ ಮೂಲಕ ಸ್ಪಷ್ಟನೆ ನೀಡುತ್ತೇನೆ’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಸ್ಟೋರಿಯಲ್ಲಿ ನಟಿ ಶುಭಾ ಪೂಂಜಾ ಬರೆದುಕೊಂಡಿದ್ದಾರೆ.
