ಮುಖ್ಯ ಸುದ್ದಿ
ಮಾಯಾವತಿ ವಿರುದ್ಧ ಬೇಸರ | BSP ಪದಾಧಿಕಾರಿಗಳ ಸಾಮೂಹಿಕ ರಾಜಿನಾಮೆ
CHITRADURGA NEWS | 05 SEPTEMBER 2024
ಚಿತ್ರದುರ್ಗ: ಪರಿಶಿಷ್ಟ ಜಾತಿಯಲ್ಲಿರುವ ಒಳ ಪಂಗಡಿಗಳಿಗೆ ಒಳಮೀಸಲಾತಿ ನೀಡುವ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನ ಬಗ್ಗೆ ಅಪಸ್ವರ ಎತ್ತಿರುವ ಬಿಎಸ್‍ಪಿ (BSP) ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಮಾಜಿ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಬೇಸತ್ತು ಚಿತ್ರದುರ್ಗ ಜಿಲ್ಲೆಯ ಬಿಎಸ್‍ಪಿ ಪದಾಧಿಕಾರಿಗಳು ಸಾಮೂಹಿಕ ರಾಜಿನಾಮೆ ನೀಡಿದ್ದಾರೆ.
ಬಿಎಸ್‍ಪಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಒಳಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪಿನ ಕುರಿತು ಮಾಯಾವತಿ ನೀಡಿರುವ ಹೇಳಿಕೆ ಕುರಿಸು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ತಹಶೀಲ್ದಾರ್ ಜೀಪ್‍ಗೆ ಬೆಂಕಿ ಹಚ್ಚಿದ ಚಳ್ಳಕೆರೆ ಪೃಥ್ವಿ
ಮಾಯಾವತಿ ಅವರ ಹೇಳಿಕೆ ವಿರೋಧಿಸಿ ಈಗಾಗಲೇ ಬಿಎಸ್‍ಪಿ ರಾಜ್ಯಾಧ್ಯಕ್ಷರಿಗೆ ಸಾಮೂಹಿಕವಾಗಿ ರಾಜಿನಾಮೆ ನೀಡಿದ್ದೇವೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಬಹುಜನ ಸಮಾಜ ಪಾರ್ಟಿಯನ್ನು ಪುನರ್ ರಚಿಸುತ್ತೇವೆ. ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರು ಕೂಡ ಈಗಾಗಲೇ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಶಾಸಕ ಟಿ.ರಘುಮೂರ್ತಿಗೆ ಮೊದಲ ಜಯ | ಡಿಸಿಸಿ ಬ್ಯಾಂಕ್ ಚುನಾವಣೆ ಸ್ಪರ್ಧೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ರಾಜ್ಯದಿಂದ ಐವರು ನಾಯಕರು ಅಹವಾಲು ಸಲ್ಲಿಸಲು ಹೋದಾಗ ಸೌಜನ್ಯಕೂ ಮಾತನಾಡಿಸದೆ ಅವಮಾನಿಸಿದ್ದಾರೆ. ಈ ಬಗ್ಗೆ 14 ಪುಟಗಳ ಪತ್ರ ಬರೆದಿದ್ದು, ನಮಗೆ ಅಸಮಾಧಾನ ಇರುವುದರಿಂದ ಕರ್ನಾಟಕ ಬಹುಜನ ಸಮಾಜ ಪಾರ್ಟಿ ಕಟ್ಟುವುದಾಗಿ ತಿಳಿಸಿದ್ದಾರೆ.
ಈ ವೇಳೆ ಬಿಎಸ್‍ಪಿ ಜಿಲ್ಲಾ ಸಂಯೋಜಕ ಕೆ.ಎನ್.ದೊಡ್ಡೊಟ್ಟೆಪ್ಪ, ಸಂಯೋಜಕ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಹನುಮಂತರಾಯ, ಕಾರ್ಯದರ್ಶಿಗಳಾದ ಶ್ರೀನಿವಾಸ್, ಎಂ.ಜಗದೀಶ್, ಲಕ್ಷ್ಮಕ್ಕ, ರಾಘವೇಂದ್ರ, ಮಹಾಲಿಂಗಪ್ಪ, ಚಂದ್ರಣ್ಣ, ರಂಗಸ್ವಾಮಿ, ನರಸಿಂಹಮೂರ್ತಿ, ಗುರುಸ್ವಾಮಿ, ಗೋವಿಂದಪ್ಪ, ರಾಜೇಶ್ ಇದ್ದರು.
ಇದನ್ನೂ ಓದಿ: ಪುರಪ್ರವೇಶ ಮಾಡಿದ ಹಿಂದೂ ಮಹಾಗಣಪತಿ | ಸಾವಿರಾರು ಜನ ಸೇರಿ ಮೆರವಣಿಗೆ ಮೂಲಕ ಸ್ವಾಗತ