Connect with us

    DCC ಬ್ಯಾಂಕ್ ಚುನಾವಣೆ | ಕೋರ್ಟ್ ಮೆಟ್ಟಿಲೇರಿದ ಶಾಸಕ ರಘುಮೂರ್ತಿ | 200 ಸೊಸೈಟಿ ಅನರ್ಹ

    DCC BANK

    ಮುಖ್ಯ ಸುದ್ದಿ

    DCC ಬ್ಯಾಂಕ್ ಚುನಾವಣೆ | ಕೋರ್ಟ್ ಮೆಟ್ಟಿಲೇರಿದ ಶಾಸಕ ರಘುಮೂರ್ತಿ | 200 ಸೊಸೈಟಿ ಅನರ್ಹ

    CHITRADURGA NEWS | 04 SEPTEMBER 2024

    ಚಿತ್ರದುರ್ಗ: ಜಿಲ್ಲೆಯ ಪ್ರತಿಷ್ಠಿತ ಜಿಲ್ಲಾ ಸಹಕಾ ಕೇಂದ್ರ ಬ್ಯಾಂಕ್(DCC) ಚುನಾವಣೆ ಸೆಪ್ಟಂಬರ್ 12ಕ್ಕೆ ನಿಗಧಿಯಾಗಿದ್ದು, ಬ್ಯಾಂಕಿನ ಹಾಲಿ ನಿರ್ದೇಶಕರಾಗಿರುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನ ಮಾಡಲು ಅವಕಾಶ ಇಲ್ಲದಂತಾಗಿರುವುದು ಕುತೂಹಲ ಮೂಡಿಸಿದೆ.

    ಡಿಸಿಸಿ ಬ್ಯಾಂಕಿನ 12 ನಿರ್ದೇಶಕರ ಸ್ಥಾನಗಳಿಗೆ ಸೆ.12 ರಂದು ಚುನಾವಣೆ ನಿಗಧಿಯಾಗಿದ್ದು, ನಾಮಪತ್ರ ಸಲ್ಲಿಸಲು ಇಂದು(ಸೆ.4) ಸಂಜೆ 4 ಗಂಟೆವರೆಗೆ ಅವಕಾಶವಿದೆ.

    ಇದನ್ನೂ ಓದಿ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿ ಪ್ರಕಟ | 24 ಶಿಕ್ಷಕರಿಗೆ ಸಂದ ಗೌರವ

    ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಬೈಲಾ ಪ್ರಕಾರ ಮತದಾನ ಹಾಗೂ ಸ್ಪರ್ಧೆಗೆ ಅರ್ಹತೆ ಪಡೆದುಕೊಳ್ಳಬೇಕು. ಆದರೆ, ಬೇರೆ ಬೇರೆ ಕಾರಣಗಳನ್ನು ಮುಂದಿಟ್ಟು 200 ಸೊಸೈಟಿಗಳನ್ನು ಅನರ್ಹಗೊಳಿಸಲಾಗಿದೆ. ಇದರಲ್ಲಿ ಶಾಸಕ ಟಿ.ರಘುಮೂರ್ತಿ ಪ್ರತಿನಿಧಿಸುವ ಕಡಬನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೂ ಸೇರಿದೆ.

    D SUDHAKAR - T RAGHUMURTHY

    ಸಚಿವ ಡಿ.ಸುಧಾಕರ್ – ಶಾಸಕ ರಘುಮೂರ್ತಿ

    ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷರಾಗಿರುವ ಡಿಸಿಸಿ ಬ್ಯಾಂಕಿನಲ್ಲಿ ಇದೇ ಮೊದಲ ಬಾರಿಗೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ನಿರ್ದೇಶಕರಾಗಿದ್ದರು. ಆದರೆ, ಎರಡನೇ ಅವಧಿಗೆ ಅವರು ಸ್ಪರ್ಧೆ ಮಾಡಲು ಅವಕಾಶ ಇಲ್ಲದಂತಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

    ಇದನ್ನೂ ಓದಿ: ಕೃಷಿ ವಿಜ್ಞಾನ ಕೇಂದ್ರ ಬಬ್ಬೂರು ಫಾರಂ ನಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

    ಈ ಹಿನ್ನೆಲೆಯಲ್ಲಿ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಸುಮಾರು 15 ಸೊಸೈಟಿಗಳ ಪ್ರತಿನಿಧಿಗಳು ಕೋರ್ಟ್ ಮೆಟ್ಟಿಲೇರಿದ್ದು, ಇಂದು ಸಂಜೆ ವೇಳೆಗೆ ತೀರ್ಪು ಪ್ರಕಟವಾಗುವ ನಿರೀಕ್ಷೆಯಿದೆ. ಒಂದು ವೇಳೆ ತೀರ್ಪು ಪೂರಕವಾಗಿ ಬಂದರೆ ಚುನಾವಣೆಗೆ ಸ್ಪರ್ಧಿಸಲು, ಮತದಾನ ಮಾಡಲು ಅವಕಾಶ ಸಿಗಲಿದೆ.

    ಜಿಲ್ಲೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಒಕ್ಕೂಟ, ಅರ್ಬನ್ ಬ್ಯಾಂಕುಗಳು ಸೇರಿದಂತೆ ಒಟ್ಟು 419 ಸೊಸೈಟಿಗಳು ಡಿಸಿಸಿ ಬ್ಯಾಂಕ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಬರೋಬ್ಬರಿ 200 ಸೊಸೈಟಿಗಳು ಡಿಸಿಸಿ ಬ್ಯಾಂಕಿನ ಬೈಲಾ, ಕಾಯ್ದೆಗಳ ಕಾರಣಕ್ಕೆ ಮತದಾನದಿಂದ ವಂಚಿತವಾಗಿವೆ. 150 ಸೊಸೈಟಿಗಳು ಮಾತ್ರ ಮತದಾನಕ್ಕೆ ಅರ್ಹವಾಗಿವೆ.

    ಬೈಲಾ ಪ್ರಕಾರ ಇರಬೇಕಾದ ಅರ್ಹತೆಗಳೇನು ?

    ಕಳೆದ 5 ವರ್ಷದಲ್ಲಿ ಕನಿಷ್ಟ 2 ಸಾಮಾನ್ಯ ಸಭೆಗಳಿಗೆ ಹಾಜರಾಗಿರಬೇಕು. ಕನಿಷ್ಟ 2 ವರ್ಷ ಡಿಸಿಸಿ ಬ್ಯಾಂಕಿನಲ್ಲಿ ಸೊಸೈಟಿಗಳು ವಹಿವಾಟು ನಡೆಸಿರಬೇಕು. ಸುಸ್ತಿದಾರರಾಗಿರಬಾರದು ಎನ್ನುವ ನಿಯಮಗಳಿವೆ.

    ಇದನ್ನೂ ಓದಿ: ವಾಣಿವಿಲಾಸ ಸಾಗರ ಜಲಾಶಯದಲ್ಲಿ ಜಲ ವೈಭೋಗ | ಸನಿಹವಾಗಿದೆ ಮೂರನೇ ಬಾರಿಗೆ ಕೋಡಿ ಬೀಳುವ ಕ್ಷಣ

    ಇದೆಲ್ಲದರ ಜೊತೆಗೆ ಆಡಳಿತ ಮಂಡಳಿ ಇಲ್ಲದೆ ಕೇವಲ ಆಡಳಿತಾಧಿಕಾರಿ ನಡೆಸಿಕೊಂಡು ಹೋಗುತ್ತಿರುವ ಸೊಸೈಟಿಗಳು ಮತದಾನಕ್ಕೆ ಅರ್ಹವಲ್ಲ.
    ಶಾಸಕ ಟಿ.ರಘುಮೂರ್ತಿ ಪ್ರತಿನಿಧಿಸುವ ಕಡಬನಕಟ್ಟಿ ಕೃಷಿ ಪತ್ತಿನ ಸಹಕಾರ ಸಂಘ ಬೈಲಾ ಪ್ರಕಾರ ಬ್ಯಾಂಕಿನೊಡನೆ ವ್ಯವಹಾರ ನಡೆಸಿಲ್ಲ ಎಂದು ಕಾರಣ ನಮೂದು ಮಾಡಲಾಗಿದೆ.

    6 ವರ್ಗಗಳಿಂದ 12 ನಿರ್ದೇಶಕ ಸ್ಥಾನ:

    ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇಲ್ಲಿ ಆಯ್ಕೆಯಾದ ನಿರ್ದೇಶಕರು ಆನಂತರ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

    ಇದನ್ನೂ ಓದಿ: ಗರುಡ ವಾಹನದಲ್ಲಿ ಕೋಟೆನಾಡು ಪ್ರವೇಶಿಸಲಿದೆ ಹಿಂದೂ ಮಹಾಗಣಪತಿ

    ಈಗ ‘ಎ’ ಯಿಂದ ‘ಎಫ್’ ವರೆಗೆ ಒಟ್ಟು 6 ವರ್ಗಗಳಲ್ಲಿ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ. ‘ಎ’ ವರ್ಗದಲ್ಲಿ 6 ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ‘ಬಿ’ ವರ್ಗದಲ್ಲಿ ಟಿಎಪಿಸಿಎಂಎಸ್, ‘ಸಿ’ ವರ್ಗದಲ್ಲಿ ಪಟ್ಟಣ ವ್ಯಾಪ್ತಿಯ ಅರ್ಬನ್ ಬ್ಯಾಂಕುಗಳು, ‘ಡಿ’ ವರ್ಗದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು, ‘ಇ’ ವರ್ಗದಲ್ಲಿ ನೇಕಾರ ಮತ್ತಿತರೆ ಸೊಸೈಟಿಗಳು ಹಾಗೂ ‘ಎಫ್’ ವರ್ಗದಲ್ಲಿ ಮೇಲಿನ ಐದು ಹೊರತುಪಡಿಸಿದ ಕೈಗಾರಿಕೆ ಮತ್ತಿತರೆ ಸಹಕಾರಿ ವಲಯಗಳಿಂದ ಪ್ರತಿನಿಧಿಗಳು ಈ ಚುನಾವಣೆಗೆ ಸ್ಪರ್ಧೆ ಮತ್ತು ಮತದಾನ ಮಾಡಬಹುದು.

    ಡಿಸಿಸಿ ಬ್ಯಾಂಕಿನಿಂದ ಕೇವಿಯಟ್:

    ಚುನಾವಣೆ ಸಂಬಂಧ ಡಿಸಿಸಿ ಬ್ಯಾಂಕಿನಿಂದ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಲಾಗಿದೆ. ಇದಕ್ಕೆ ಶಾಸಕ ಟಿ.ರಘುಮೂರ್ತಿ ಅಚ್ಚರಿ ವ್ಯಕ್ತಪಡಿಸಿದ್ದು, ಕೋವಿಡ್, ಬರಗಾಲದ ಕಾರಣಕ್ಕೆ ರೈತರು ಸೊಸೈಟಿಗಳಲ್ಲಿ ಸಾಲ ಕಟ್ಟದೆ ಬ್ಯಾಂಕಿನ ಜೊತೆಗೆ ವ್ಯವಹಾರ ಮಾಡಿರುವುದಿಲ್ಲ. ಈ ಕಾರಣಕ್ಕೆ ಮತದಾನ ಹಾಗೂ ಚುನಾವಣೆಗೆ ಸ್ಪರ್ಧೆ ಮಾಡದಂತೆ ಅನರ್ಹಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top