ಮುಖ್ಯ ಸುದ್ದಿ
Ex-CM: ಎಸ್.ನಿಜಲಿಂಗಪ್ಪ ಮನೆ ಖರೀಧಿಗೆ ಮುಂದಾದ ಕಾಂಗ್ರೆಸ್ | ಮನೆ ವೀಕ್ಷಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
CHITRADURGA NEWS | 02 SEPTEMBER 2024
ಚಿತ್ರದುರ್ಗ: ರಾಷ್ಟ್ರ ನಾಯಕ, (Ex-CM) ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ನಿವಾಸವನ್ನು ಕಾಂಗ್ರೆಸ್ ಪಕ್ಷದಿಂದ ಖರೀಧಿಸುವ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ.
ಸರ್ಕಾರದಿಂದ ಎಸ್ಸೆನ್ ಮನೆ ಖರೀದಿ ಮಾಡದಿದ್ದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಮನೆ ಖರೀದಿ ಮಾಡುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಕಳೆದ ಜುಲೈ 18 ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎದುರಲ್ಲೇ ಕೈ ಕಾರ್ಯಕರ್ತರ ವಾಗ್ವಾದ
ಈಗ ಅದಕ್ಕೆ ಪೂರಕವಾಗಿ ಕೆಪಿಸಿಸಿಯಿಂದ ಮನೆ ನೋಡಿಕೊಂಡು ಹೋಗಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮುರುಳೀಧರ ಹಾಲಪ್ಪ ಇಂದು ಬೆಳಗ್ಗೆ ಎಸ್ಸೆನ್ ನಿವಾಸ ‘ವಿನಯ’ಕ್ಕೆ ಭೇಟಿ ನೀಡಿದ್ದರು.
ಸಚಿವೆ ಹೆಬ್ಬಾಳ್ಕರ್ ಭೇಟಿ ಹಿನ್ನೆಲೆಯಲ್ಲಿ ಬಹಳ ವರ್ಷಗಳ ನಂತರ ನಿಜಲಿಂಗಪ್ಪ ಅವರ ನಿವಾಸದ ಬಾಗಿಲುಗಳನ್ನು ತೆಗೆಯಲಾಗಿತ್ತು.
ಜೊತೆಗೆ ಎಸ್.ನಿಜಲಿಂಗಪ್ಪ ಅವರ ಪುತ್ರ ಎಸ್.ಎನ್.ಕಿರಣ್ ಶಂಕರ್ ಕೂಡಾ ಆಗಮಿಸಿದ್ದರು. ಇಡೀ ಮನೆಯನ್ನು ವೀಕ್ಷಿಸಿದ ನಂತರ ಮಾತುಕತೆ ಕೂಡಾ ನಡೆಯಿತು.
ಇದನ್ನೂ ಓದಿ: ಅಮೇರಿಕಾದ ಅಕ್ಕಾ ಸಮ್ಮೇಳನದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಭಾಗೀ
ಮನೆಯ ಪಕ್ಕದಲ್ಲಿನ ಮಾವಿನ ಮರದ ಕೆಳಗೆ ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಅವರ ಜೊತೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತುಕತೆ ನಡೆಸಿದರು.
ಗಣೇಶ ಚತುರ್ಥಿ ನಂತರ ಮುಂದಿನ ಮಾತುಕತೆ ಮುಂದುವರೆಸೋಣ ಎಂದು ಹೇಳಿದರು.
ಇದನ್ನೂ ಓದಿ: ಮೂಲ ನಕ್ಷೆಯಲ್ಲಿ ಮುಖ್ಯ ರಸ್ತೆಗಳು ವಿಶಾಲವಾಗಿವೆ | ಡಿಸಿ ಟಿ.ವೆಂಕಟೇಶ್
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ನಿಜಲಿಂಗಪ್ಪ ಕುಟುಂಬದ ಆಪ್ತ ಎಸ್.ಷಣ್ಮುಖಪ್ಪ, ಕಾಂಗ್ರೆಸ್ ಮುಖಂಡ ರಘು, ಗೀತಾ ನಂದಿನಿಗೌಡ, ಜಾಹ್ನವಿ ನಾಗರಾಜ್ ಮತ್ತಿತರರಿದ್ದರು.
ಮಹಾತ್ಮಾ ಗಾಂಧೀಜಿ 1924ರಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದು. ಈಗ ಅದಕ್ಕೆ ಶತಮಾನೋತ್ಸವದ ಸಂಭ್ರಮ. 1968ರಲ್ಲಿ ನಿಜಲಿಂಗಪ್ಪ ಕೂಡಾ ಎಐಸಿಸಿ ಅಧ್ಯಕ್ಷರಾಗಿದ್ದರು. ಈ ಸವಿ ನೆನಪಿಗಾಗಿ ಅವರ ಮನೆಯನ್ನು ಕೆಪಿಸಿಸಿಯಿಂದ ಖರೀಧಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.