ಮುಖ್ಯ ಸುದ್ದಿ
VV Sagara Inflow; ವಿವಿ ಸಾಗರಕ್ಕೆ ಭರ್ಜರಿ ನೀರು | ಇಂದಿನ ಒಳಹರಿವು ಎಷ್ಟು ಗೊತ್ತಾ…
CHITRADURGA NEWS | 18 AUGUST 2024
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ಒಳಹರಿವಿನ(VV Sagara Inflow) ಪ್ರಮಾಣ ಹೆಚ್ಚಾಗಿದೆ.
ಕ್ಲಿಕ್ ಮಾಡಿ ಓದಿ: Accident; ಭೀಕರ ಬೈಕ್ ಅಪಘಾತ | ಸವಾರ ಸಾವು, ಇನ್ನೋರ್ವ ಗಂಭೀರ
ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು, ಕೆರೆ, ಕಟ್ಟೆ, ಚೆಕ್ ಡ್ಯಾಂ ಭರ್ತಿಯಾಗಿವೆ. ಕೆಲವೆಡೆ ಕೆರೆಗಳು ಕೋಡಿಬಿದ್ದಿವೆ.
ಆಗಸ್ಟ್ 18 ಭಾನುವಾರ ಬೆಳಗ್ಗೆ ನಡೆಸಿದ ಮಾಪನದ ಪ್ರಕಾರ ವಿವಿ ಸಾಗರಕ್ಕೆ ಬರೋಬ್ಬರಿ 3004 ಕ್ಯೂಸೆಕ್ ನೀರು ಹರಿದು ಬಂದಿದೆ.
30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 19.97 ಟಿಎಂಸಿ ನೀರು ಸಂಗ್ರಹವಾಗಿದೆ. ಒಟ್ಟಾರೆ 135 ಅಡಿ ಎತ್ತರದ ಜಲಾಶಯದಲ್ಲಿ ಇಂದಿಗೆ 116.65 ಅಡಿ ನೀರು ಬಂದಿದೆ.
ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 123 ಅಡಿವರೆಗೆ ತುಂಬಿದ್ದ ಜಲಾಶಯದಲ್ಲಿ 24.54 ಟಿಎಂಸಿ ನೀರಿತ್ತು.
ಕ್ಲಿಕ್ ಮಾಡಿ ಓದಿ: Ranjith Kumar Bandaru; ಕೋಟೆನಾಡಿಗೆ ರಂಜಿತ್ ಕುಮಾರ್ ಬಂಡಾರು ಎಂಟ್ರಿ | ಎಸ್ಪಿಯಾಗಿ ನೇಮಕ
ಭದ್ರಾ ಜಲಾಶಯದಿಂದಲೂ ಪ್ರತಿ ದಿನ 700 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರ ಜೊತೆಗೆ ದಿನೇ ದಿನೇ ಮಳೆಯೂ ಹೆಚ್ಚಾಗಿದೆ. ವಿವಿ ಸಾಗರ ಸೇರುವ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ವೇದಾವತಿ ನದಿಯಲ್ಲೂ ನೀರು ಹರಿಯುತ್ತಿರುವುದರಿಂದ ಈ ವರ್ಷ ವಿವಿ ಸಾಗರ ಜಲಾಶಯ ಭರ್ತಿಯಾಗುವ ಲಕ್ಷಣಗಳು ಕಾಣಿಸಿತ್ತಿವೆ.
ಒಂದು ವೇಳೆ ಮಳೆ ಕೈಕೊಟ್ಟರೂ ಎತ್ತಿನಹೊಳೆ ಜಲಾಶಯದಿಂದ ಪ್ರಾಯೋಗಿಕವಾಗಿ ವಿವಿ ಸಾಗರಕ್ಕೆ ನೀರು ಹರಿಸುವ ಪ್ರಕ್ರಿಯೆಗಳು ನಡೆಯುತ್ತಿದ್ದು, ವೇದಾವತಿಯೊಂದಿಗೆ ನೇತ್ರಾವತಿಯೂ ಸೇರಲಿದ್ದಾಳೆ.