Connect with us

    ಅಯ್ಯಪ್ಪಸ್ವಾಮಿ ಜಾತಿಗೆ ಸೀಮಿತವಲ್ಲ | ಭಜರಂಗದಳ ದಕ್ಷಿಣ ಪ್ರಾಂತೀಯ ಸಂಚಾಲಕ ಪ್ರಭಂಜನ್‌

    ayyapa swamy

    ಮುಖ್ಯ ಸುದ್ದಿ

    ಅಯ್ಯಪ್ಪಸ್ವಾಮಿ ಜಾತಿಗೆ ಸೀಮಿತವಲ್ಲ | ಭಜರಂಗದಳ ದಕ್ಷಿಣ ಪ್ರಾಂತೀಯ ಸಂಚಾಲಕ ಪ್ರಭಂಜನ್‌

    CHITRADURGA NEWS | 09 JULY 2024
    ಚಿತ್ರದುರ್ಗ: ಮಕ್ಕಳಿಗೆ ಅಂಕಗಳಿಕೆ ಜತೆ ಸಂಸ್ಕಾರದ ಪಾಠವನ್ನು ಕಲಿಸಬೇಕಿದೆ. ಈ ಮೂಲಕ ಸರ್ವತೋಮುಖ ಬೆಳವಣಿಗೆಗೆ ಪೋಷಕರು ಮುಂದಾಗಬೇಕು ಎಂದು ಭಜರಂಗದಳ ದಕ್ಷಿಣ ಪ್ರಾಂತೀಯ ಸಂಚಾಲಕ ಪ್ರಭಂಜನ್‌ ತಿಳಿಸಿದರು.

    ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ರಜತ ಮಹೋತ್ಸವ ಹಾಗೂ ದ್ವಿತೀಯ ಮಹಾ ಕುಂಭಾಭಿಷೇಕ ಮಹೋತ್ಸವದ ತೃತೀಯ ದಿನದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಶಾಲೆಗಳಲ್ಲಿ ಮಕ್ಕಳಿಗೆ ಬರೀ ಪಠ್ಯ ಕಲಿಸಿ ಅಂಕಗಳಿಕೆಗೆ ಸಿದ್ದಗೊಳಿಸುತ್ತಾರೆ. ಸಂಸ್ಕಾರ ಕಲಿತ ಮಗು ಮುಂದೆ ಅವರ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ. ಯಾವುದೇ ಕಾರಣಕ್ಕೂ ವೃದ್ಧಾಶ್ರಮಕ್ಕೆ ಕಳುಹಿಸುವುದಿಲ್ಲ ಹಾಗೂ ನಿರ್ಲಕ್ಷ ಮಾಡುವುದಿಲ್ಲ’ ಎಂದು ಹೇಳಿದರು.

    ‘ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರ ಮೂಲಕ ಸಂಸ್ಕಾರ ಕಲಿಯಬೇಕಿದೆ. ಅಯ್ಯಪ್ಪಸ್ವಾಮಿ ವೃತ ಬಹಳ ಮಹತ್ವ ಪಡೆದಿದೆ. ಇಂದಿನ ದಿನಮಾನದಲ್ಲಿ ದೇವಾಲಯಗಳನ್ನು ಕೇವಲ ಒಂದು ಜಾತಿಗೆ ಸೀಮಿತಮಾಡಲಾಗುತ್ತಿದೆ. ಅಯ್ಯಪ್ಪಸ್ವಾಮಿ ವೃತ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ’ ಎಂದರು.

    ಕ್ಲಿಕ್‌ ಮಾಡಿ ಓದಿ: ಕಳೆದುಕೊಂಡಿದ್ದ 80 ಮೊಬೈಲ್ ಹುಡುಕಿಕೊಟ್ಟ ಪೊಲೀಸರು

    ‘ಧಾರ್ಮಿಕ ಸಂಸ್ಥೆಗಳು ಮಕ್ಕಳಿಗೆ ಸಂಸ್ಕಾರ ಕಲಿಸುವ ಕೇಂದ್ರಗಳಾಗಬೇಕು. ನಮ್ಮಲ್ಲಿನ ಮಠಗಳು, ದೇವಾಲಯಗಳು, ಗುರುಗಳು, ಮಠಾಧೀಶರು ಸಂಸ್ಕಾರ ಕಲಿಸುವ ಕೇಂದ್ರಗಳಾಗಿವೆ. ಈ ಕಾರ್ಯಕ್ರಮಕ್ಕೆ ದಾನಿಗಳ ಸಹಕಾರ ಅಗತ್ಯವಾಗಿದೆ. ಅವರು ನೀಡಿದ ದಾನದಿಂದ ಇಂದು ಉಪಯುಕ್ತ ಕಾರ್ಯವಾಗಿದೆ’ ಎಂದು ತಿಳಿಸಿದರು.

    ಕ್ಲಿಕ್‌ ಮಾಡಿ ಓದಿ: ಖಾಸಗಿ ಆಸ್ಪತ್ರೆ, ಲ್ಯಾಬ್‌ಗಳ ವಿರುದ್ಧ ಕಠಿಣ ಕ್ರಮ | ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಎಚ್ಚರಿಕೆ

    ಮೇದೆಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಜ್ಜಿನಿಸ್ವಾಮಿ, ಐಶ್ವರ್ಯ ಫೋರ್ಟ್‌ ಅರುಣ್‌ ಕುಮಾರ್‌, ಬಿಜೆಪಿ ನಗರಾಧ್ಯಕ್ಷ ನವೀನ್‌ ಚಾಲುಕ್ಯ, ಎವಿಓಪಿಎ ಉಪಾಧ್ಯಕ್ಷ ಪಿ.ಎಲ್.ಸುರೇಶ್‌ ಬಾಬು, ಆದರ್ಶ ಟ್ರೇಡರ್ಸ್‌ನ ಪಟೇಲ್ ಶಿವಕುಮಾರ್, ಹೋಟೇಲ್ ಮಾಲಿಕರ ಸಂಘದ ಅಧ್ಯಕ್ಷ ಕೆ.ಎಸ್‌.ಅರುಣ್‌ ಕುಮಾರ್‌, ಜಯರಾಂ ಗ್ರೂಪ್ಸ್‌ನ ಮಾರುತಿ ಪ್ರಸನ್ನ, ಕ್ರೀಡಾ ಮಂಡಳಿ ಮಾಜಿ ಉಪಾಧ್ಯಕ್ಷ ಜಿ.ಎಂ.ಸುರೇಶ್‌, ಕಾವೇರಿ ಟ್ರೇಡರ್ಸ್‌ನ ಟಿ.ರಾಮರೆಡ್ಡಿ, ಮಲ್ಲಿಕಾರ್ಜನ ಸ್ವಾಮಿ, ಮೋಹನ್‌ ಕುಮಾರ್‌, ಚಂದ್ರಶೇಖರ್‌, ಸೂರಪ್ಪ, ಮಂಜುನಾಥ್‌, ಪ್ರಧಾನ ಅರ್ಚಕ ಸತೀಶ್‌ ಶರ್ಮ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top