ಮುಖ್ಯ ಸುದ್ದಿ
RETIREMENT; ವಯೋನಿವೃತ್ತಿ ಹೊಂದಿದ ಎನ್.ಪ್ರಕಾಶ್ ಅವರಿಗೆ ಬೀಳ್ಕೊಡುಗೆ

CHITRADURGA NEWS | 03 JULY 2024
ಚಿತ್ರದುರ್ಗ: (RETIREMENT) ವಯೋನಿವೃತ್ತಿ ಹೊಂದಿದ ಎಸ್.ಜೆ.ಎಂ.ಐ.ಟಿ.ಯಲ್ಲಿ ಸ್ಕಿಲ್ಡ್ ಲೇಬರ್ ಎನ್.ಪ್ರಕಾಶ್‍ಗೆ ಸಂಸ್ಥೆ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಇದನ್ನೂ ಓದಿ: AdikeRate; ಅಡಿಕೆ ಧಾರಣೆ | ರಾಜ್ಯದ ಪ್ರಮುಖ ಮಾರುಕಟ್ಟೆಗಳ ರೇಟ್
ಜೆ.ಎಂ.ಐ.ಟಿ. ಪ್ರಾಚಾರ್ಯರಾದ ಡಾ.ಭರತ್ ಮಾತನಾಡಿ, ವೃತ್ತಿ ಜೀವನ ಎನ್ನುವುದು ಪ್ರತಿಯೊಬ್ಬರ ಬದುಕಿನಲ್ಲಿ ಅತ್ಯಂತ ಮಹತ್ವದಾದ್ದು. ಎನ್.ಪ್ರಕಾಶ್ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕೊಟ್ಟ ಕೆಲಸವನ್ನು ವಿಧೇಯತೆ, ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದಾರೆ. ನಿವೃತ್ತಿ, ವರ್ಗಾವಣೆ ಎನ್ನುವುದು ನೌಕರಿಯಲ್ಲಿ ಸಹಜ. ಹಾಗಾಗಿ ಬೇಸರಿಸಿಕೊಳ್ಳುವುದು ಬೇಡ. ನಿವೃತ್ತಿ ಜೀವನ ನೆಮ್ಮದಿಯಾಗಿರಲೆಂದು ಹಾರೈಸಿದರು.
ಮೆಕ್ಯಾನಿಕಲ್ ವಿಭಾಗದ ಹೆಚ್.ಓ.ಡಿ.ಡಾ.ಜಗನ್ನಾಥ್ ಮಾತನಾಡಿ, ಎನ್.ಪ್ರಕಾಶ್ ಹೇಳಿದ ಕೆಲಸವನ್ನು ನಿಷ್ಟೆಯಿಂದ ಮಾಡಿದ್ದಾರೆ, ನಿವೃತ್ತಿ ಜೀವನ ಸುಖಕರವಾಗಿರಲಿ. ಭಗವಂತ ಆರೋಗ್ಯ, ಆಯಸ್ಸು ನೀಡಲಿ ಎಂದರು.
ಇದನ್ನೂ ಓದಿ: ಅಗತ್ಯ ವಸ್ತುಗಳ ಬೆಲೆ ಏರಿಕೆ | ಬಿಜೆಪಿ ರೈತ ಮೋರ್ಚಾದಿಂದ ಎತ್ತಿನ ಬಂಡಿ ಏರಿ ಪ್ರತಿಭಟನೆ
ದೈಹಿಕ ಶಿಕ್ಷಣ ನಿರ್ದೇಶಕ ಕುಮಾರಸ್ವಾಮಿ ಮಾತನಾಡಿ 1988 ರಲ್ಲಿ ಕೆಲಸಕ್ಕೆ ಸೇರಿಕೊಂಡ ಎನ್.ಪ್ರಕಾಶ್ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಕುಟುಂಬ ಅವರ ದುಡಿಮೆಯ ಮೇಲೆ ನಿಂತಿದೆ. ನಿವೃತ್ತಿ ನಂತರ ಯಾವುದೇ ನೌಕರನಿಗೆ ಜೀವನ ಸಾಗಿಸುವುದು ಕಷ್ಟವಾಗುತ್ತದೆ. ಹಾಗಾಗಿ ನೌಕರರಿಗೆ ಸಿಗಬೇಕಾದ ಸೌಲಭ್ಯಗಳು ಸಕಾಲಕ್ಕೆ ದೊರಕಬೇಕೆಂದು ಪ್ರಾಚಾರ್ಯರಲ್ಲಿ ಮನವಿ ಮಾಡಿದರು.
ಈ ವೇಳೆ ಜೆ.ಎಂ.ಐ.ಟಿ. ಸಿಬ್ಬಂದಿಗಳು ಇದ್ದರು.
