ಮುಖ್ಯ ಸುದ್ದಿ
30 ಸಾವಿರದವರೆಗೆ ಉಚಿತ ಚಿಕಿತ್ಸೆ | ಹೆದ್ದಾರಿ ಪ್ರಯಾಣಿಕರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ನೆರವು

CHITRADURGA NEWS | 14 JUNE2024
ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾದ ಗಾಯಾಳುಗಳಿಗೆ 30 ಸಾವಿರದವರೆಗೂ ಉಚಿತ ತುರ್ತು ಚಿಕಿತ್ಸೆಯನ್ನು ಬಸವೇಶ್ವರ ಆಸ್ಪತ್ರೆಯಲ್ಲಿ ನೀಡಲಾಗುವುದು.
ಇದನ್ನೂ ಓದಿ: ಚಿನ್ನದ ಸರ ಕಳೆದುಕೊಂಡ ಮಹಿಳೆ | ಪ್ರಾಮಾಣಿಕತೆ ಮೆರೆದ ಮಠದ ಸಿಬ್ಬಂದಿ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಎಂಡಿ ಇಂಡಿಯಾ ಹಾಗೂ ಬಜಾಜ್ ಆಲೈಯನ್ಸ್ ವಿಮಾ ಕಂಪನಿ ಜೊತೆ ಬಸವೇಶ್ವರ ಆಸ್ಪತ್ರೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ವತಿಯಿಂದ ಎಂಡಿ ಇಂಡಿಯಾ, ಬಜಾಜ್ ಅಲೆಯನ್ಸ್ ಸಹಬಾಗಿತ್ವದಲ್ಲಿ ರಸ್ತೆ ಅಪಘಾತದ ಗಾಯಾಳುಗಳಿಗೆ ನೆರವಾಗುವಂತೆ ಸುಮಾರು 30 ಸಾವಿರದವರೆಗೂ ಉಚಿತ ಚಿಕಿತ್ಸೆಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಆದೀಕ್ಷಕರಾದ ಡಾ.ಎಂ.ಎಸ್.ರಾಜೇಶ್ ತಿಳಿಸಿದರು.
ಬಸವೇಶ್ವರ ವೈದ್ಯಕೀಯ ಕಾಲೇಜಿನ ಉಪ ಆದೀಕ್ಷಕರಾದ ಡಾ ನಾಗೇಂದ್ರಗೌಡ ಮಾತನಾಡಿ, ಅಪಘಾತ ಸಂದರ್ಭದಂತಹ ತುರ್ತು ಸಂದರ್ಭಗಳಲ್ಲಿ ತಕ್ಷಣಕ್ಕೆ ಜೀವ ಉಳಿಸುವುದು ಮುಖ್ಯವಾಗಿರುತ್ತದೆ, ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಈ ಯೋಜನೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ | ಪೊಲೀಸರಿಗೆ ಶರಣಾದ ಚಿತ್ರದುರ್ಗದ ಜಗ್ಗು, ಅನು
ಆಸ್ಪತ್ರೆಯ ಡೀನ್ ಡಾ.ಪ್ರಶಾಂತ್ ಮಾತನಾಡಿ, ನಗರದಲ್ಲಿ ಸುಮಾರು ಮೂರಕ್ಕು ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳು ಹಾದೂ ಹೋಗಿದ್ದು, ಅತಿಯಾದ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ , ಇಂತಹ ಸಂದರ್ಭಗಳಲ್ಲಿ ಅಪಘಾತವಾದ ಗಾಯಾಳುವಿಗೆ ತುರ್ತು ಚಿಕಿತ್ಸೆಯ ಅಗತ್ಯತೆಯನ್ನು ಅರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ, ಎಂ ಡಿ ಇಂಡಿಯಾ, ಬಜಾಜ್ ಅಲೆಯನ್ಸ್ ಸಹಬಾಗಿತ್ವದ ಈ ಯೋಜನೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ಸತ್ಯನಾರಾಯಣ್, ಮಾರ್ಕೆಟಿಂಗ್ ವಿಭಾಗದ ಮುಖಸ್ಥ ಪಿ.ಸತೀಶ್, ಎಂ ಡಿ ಇಂಡಿಯಾ, ಬಜಾಜ್ ಅಲೈಯನ್ಸ್ ಸಂಸ್ಥೆಯ ಯೋಜನಾ ನಿರ್ದೇಶಕ ಪ್ರವೀಣ್ ಕೂಮಾರ್ ಹಾಗೂ ಚಿತ್ರದುರ್ಗ ಜಿಲ್ಲಾ ಯೋಜನಾ ಸಂಯೋಜಕ ಡಿ.ಮಣಿಕಂಠನ್ ಉಪಸ್ಥಿತರಿದ್ದರು.
ಇದನ್ನೂ ಓದಿ: ನೀರಿನ ಪೈಪ್‌ಲೈನ್ ಮೇಲೆ ಕಣ್ಗಾವಲು | ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ
ಅಪಘಾತದಂತಹ ತುರ್ತು ಪರಿಸ್ಥಿತಿಯಲ್ಲಿ ಜಿಲ್ಲಾ ಯೋಜನಾ ಸಂಯೋಜಕ ಡಿ.ಮಣಿಕಂಠನ್ ರವರ ದೂರವಾಣಿ ಸಂಖ್ಯೆ: 7892305613 ಹಾಗೂ ಅಸ್ಪತ್ರೆಯ ಸಂಖೈ 18001021949 ಗೆ ಸಂಪರ್ಕಿಸಿ ಉಚಿತ ತುರ್ತು ಚಿಕಿತ್ಸೆ ಪಡೆಯಬಹುದಾಗಿದೆ.
