Connect with us

    ಮೊಳಕಾಲ್ಮೂರು ಘಟನೆಗೆ ಬೆಸ್ಕಾಂ ಸ್ಪಷ್ಟನೆ | ಹಾಗಾದರೆ ಅಂದು ರಾತ್ರಿ ಎಷ್ಟೊತ್ತು ವಿದ್ಯುತ್ ಇರಲಿಲ್ಲ

    ಮೊಳಕಾಲ್ಮೂರು ತಾಲೂಕು ಆಸ್ಪತ್ರೆ

    ಮುಖ್ಯ ಸುದ್ದಿ

    ಮೊಳಕಾಲ್ಮೂರು ಘಟನೆಗೆ ಬೆಸ್ಕಾಂ ಸ್ಪಷ್ಟನೆ | ಹಾಗಾದರೆ ಅಂದು ರಾತ್ರಿ ಎಷ್ಟೊತ್ತು ವಿದ್ಯುತ್ ಇರಲಿಲ್ಲ

    CHITRADURGA NEWS | 26 MAY 2024

    ಚಿತ್ರದುರ್ಗ: ಮಳೆಯಿಂದ ವಿದ್ಯುತ್ ಕೈಕೊಟ್ಟು ಕತ್ತಲೆಯಲ್ಲಿ ಚಿಕಿತ್ಸೆ ನೀಡುವ ಪರಿಸ್ಥಿತಿ ತಲೆದೂರಿದ್ದ ಮೊಳಕಾಲ್ಮೂರು ತಾಲೂಕು ಆಸ್ಪತ್ರೆ ಪ್ರಕರಣ ರಾಜ್ಯವ್ಯಾಪಿ ಸದ್ದು ಮಾಡಿತ್ತು.

    ಈ ಬಗ್ಗೆ ಪ್ರತಿಪಕ್ಷ ಬಿಜೆಪಿ ಆಡಳಿತರೂಢ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಟೀಕೆ ಮಾಡಿತ್ತು.
    ಖುದ್ದು ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಇದನ್ನೂ ಓದಿ: ಮೂಡಿಗೆರೆ ಬಳಿ ಭೀಕರ ಅಪಘಾತದಲ್ಲಿ ಮಡಿದವರಿಗೆ ಪರಿಹಾರದ ಭರವಸೆ | ಸಚಿವ ಡಿ.ಸುಧಾಕರ್

    ಈ ಎಲ್ಲಾ ಘಟನೆಗಳ ನಂತರ ಈಗ ಬೆಸ್ಕಾಂ ಇಲಾಖೆ ವಿದ್ಯುತ್ ವ್ಯತ್ಯಯ ಕುರಿತಂತೆ ಸ್ಪಷ್ಟನೆ ನೀಡಿದೆ.
    ಮೇ.20 ರಂದು ರಾತ್ರಿ ಮರ ಬಿದ್ದು ಅನಿರೀಕ್ಷಿತ ಸಮಸ್ಯೆಯಾದರೂ ತ್ವರಿತವಾಗಿ ಸರಿಪಡಿಸಲಾಗಿದೆ ಎಂದು ತಿಳಿಸಿದೆ.

    ಮಳೆ, ಗಾಳಿಯಿಂದ ಮರ ಬಿದ್ದು ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ಮೊಳಕಾಲ್ಮೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೇ.20ರಂದು ರಾತ್ರಿ ವಿದ್ಯುತ್ ಸಮಸ್ಯೆಯಾಗಿತ್ತು ಎಂದು ಬೆಸ್ಕಾಂ ಸ್ಪಷ್ಟನೆ ನೀಡಿದೆ.

    ಇದನ್ನೂ ಓದಿ: ವಿವಿ ಸಾಗರಕ್ಕೆ ಹೆಚ್ಚಾದ ಒಳಹರಿವು | 114 ಅಡಿ ತಲುಪಿದ ಜಲಾಶಯ ಮಟ್ಟ

    ಕಳೆದ ಮೇ.20ರ ಸಂಜೆ ಸುರಿದ ಭಾರಿ ಮಳೆಯಿಂದಾಗಿ, 66/11 ಕೆ.ವಿ ಹಾನಗಲ್ ವಿದ್ಯುತ್ ವಿತರಣಾ ಕೇಂದ್ರದಿಂದ ಪ್ರವಹಿಸುವ ಎಫ್-2 ಮೊಳಕಾಲ್ಮೂರು ಫೀಡರ್ 11 ಕೆ.ವಿ ಮಾರ್ಗದ ಮೇಲೆ ಮರದ ರೆಂಬೆ ಬಿದ್ದು, ಮಧ್ಯರಾತ್ರಿ 12 ಗಂಟೆಗೆ ಫೀಡರ್ ಓ.ಸಿ.ಆರ್ ರಿಲೇ ಮೇಲೆ ಟ್ರಿಪ್ ಆಗಿತ್ತು.

    ಈ ಸಂದರ್ಭದಲ್ಲಿ ಆಸ್ಪತ್ರೆಯ ಜನರೇಟರ್ ದುರಸ್ಥಿಗೆ ಬಂದಿತ್ತು. ಇದರ ಮಧ್ಯೆಯೂ ಐಸಿಯು ಮತ್ತು ಇತರ ತುರ್ತು ಘಟಕಗಳಿಗೆ ಯುಪಿಎಸ್‍ನಿಂದ ವಿದ್ಯುತ್ ಪೂರೈಕೆ ಇತ್ತು ಎಂದು ಬೆಸ್ಕಾಂ ತಿಳಿಸಿದೆ.

    ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಶಿಕ್ಷಣ ಕ್ಷೇತ್ರ ಕಲುಷಿತ | ಬಿ.ವೈ.ವಿಜಯೇಂದ್ರ ವಾಗ್ದಾಳಿ

    ಮಧ್ಯರಾತ್ರಿ 12ಕ್ಕೆ ಸ್ಥಗಿತಗೊಂಡಿದ್ದ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಸಿಬ್ಬಂದಿ ತ್ವರಿತ ಕಾರ್ಯಾಚರಣೆಯಿಂದ ತಡರಾತ್ರಿ 1.17 ರೊಳಗೆ ಸರಿಪಡಿಸಿ ವಿದ್ಯುತ್ ಮರುಪೂರೈಕೆ ಮಾಡಿದ್ದರು ಎಂದು ತಿಳಿಸಿದೆ.

    ಸಮಸ್ಯೆ ಕಾಣಿಸಿಕೊಂಡ ತಕ್ಷಣ ಬೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದು, ವಿಳಂಬವಿಲ್ಲದೇ ವಿದ್ಯುತ್ ಮರುಪೂರೈಕೆಗೆ ಕ್ರಮ ಕೈಗೊಂಡಿದ್ದಾರೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top