Connect with us

    ರಸ್ತೆ ಹಂಪ್ಸ್ ಹತ್ತುವಾಗ ಬಿದ್ದ ಸ್ಕೂಟಿ | ತಲೆಗೆ ಪೆಟ್ಟು ಬಿದ್ದು ಸವಾರ ಸಾವು

    ಕ್ರೈಂ ಸುದ್ದಿ

    ರಸ್ತೆ ಹಂಪ್ಸ್ ಹತ್ತುವಾಗ ಬಿದ್ದ ಸ್ಕೂಟಿ | ತಲೆಗೆ ಪೆಟ್ಟು ಬಿದ್ದು ಸವಾರ ಸಾವು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 03 MAY 2024

    ಚಿತ್ರದುರ್ಗ: ರಸ್ತೆಯಲ್ಲಿನ ಹಂಪ್ಸ್‍ಗಳನ್ನು ಹತ್ತಿಸುವಾಗ ಸ್ಕೂಟಿಯಿಂದ ಬಿದ್ದು, ಸವಾರ ಮೃತಪಟ್ಟಿರುವ ಘಟನೆ ಹಳೇ ಕಲ್ಲಹಳ್ಳಿ ಬಳಿ ನಡೆದಿದೆ.

    ಇದನ್ನೂ ಓದಿ: ಲೋಕಸಭೆ ಚುನಾವಣೆ ಬೆನ್ನಲ್ಲೆ ಮತ್ತೊಂದು ಚುನಾವಣೆ | ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ವೇಳಾಪಟ್ಟಿ ಪ್ರಕಟ

    ಚಳ್ಳಕೆರೆ ತಾಲ್ಲೂಕು ಉಪ್ಪಾರಹಟ್ಟಿ ನಿವಾಸಿ 40 ವರ್ಷದ ಕೆ.ಕುಮಾರ್ ಮೃತ ವ್ಯಕ್ತಿ. ಮೇ.2 ಗುರುವಾರ ಬೆಳಗಿನ ಜಾವ 1.45 ರ ಸಮಯದಲ್ಲಿ ತಮ್ಮ ಸ್ಕೂಟಿಯಲ್ಲಿ ಚಳ್ಳಕೆರೆ ಕಡೆಯಿಂದ ಚಿತ್ರದುರ್ಗ ಕಡೆಗೆ ಬರುವಾಗ ಚಿತ್ರದುರ್ಗ ತಾಲ್ಲೂಕಿನ ಹಳೇ ಕಲ್ಲಹಳ್ಳಿ ಬಳಿ ರಸ್ತೆಯಲ್ಲಿದ್ದ ಹಂಪ್ಸ್‍ಗಳನ್ನು ಏಕಾಏಕಿ ಹತ್ತಿದ ಪರಿಣಾಮ ಸ್ಕೂಟಿ ಬಿದ್ದಿದೆ.

    ಇದನ್ನೂ ಓದಿ: ತೋಟಕ್ಕೆ ಆಕಸ್ಮಿಕ ಬೆಂಕಿ | ಹಲವು ಮರ, ಗಿಡ ಬೆಂಕಿಗಾಹುತಿ

    ಈ ವೇಳೆ ತಲೆ, ಮೈಕೈಗಳಿಗೆ ಪೆಟ್ಟು ಬಿದ್ದಿದ್ದು, ಯಾವುದೋ ವಾಹನದಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷೆ ನಡೆಸಿದ ವೈದ್ಯರು ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ POLICE ಠಾಣೆಯಲ್ಲಿ ದೂರು ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top