ಹೊಳಲ್ಕೆರೆ
16 ಹೊಸ ಮಳಿಗೆ ನಿರ್ಮಾಣಕ್ಕೆ ಚಾಲನೆ ನೀಡಿದ ಶಾಸಕ ಎಂ.ಚಂದ್ರಪ್ಪ

CHITRADURGA NEWS | 25 FEBRUARY 2024
ಹೊಳಲ್ಕೆರೆ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಅವರಣದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ 16 ನೂತನ ಮಳಿಗೆ, 2 ಕೋಟಿ ರೂ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಮತ್ತು ಸಿಸಿ ರಸ್ತೆ ಕಾಮಗಾರಿಗಳಿಗೆ ಶಾಸಕ ಡಾ.ಎಂ.ಚಂದ್ರಪ್ಪ ಚಾಲನೆ ನೀಡಿದರು.
ಇದನ್ನೂ ಓದಿ: ಕೋಟೆನಾಡಲ್ಲಿ ರಥೋತ್ಸವ ವೈಭವ| ಜಿಲ್ಲೆಯಾದ್ಯಂತ ಸಂಭ್ರಮಿಸಿದ ಭಕ್ತರು
ಈ ವೇಳೆ ಮಾತನಾಡಿದ ಅವರು, ಸುಮಾರು 100 ಮೀಟರ್ ಎತ್ತರದಲ್ಲಿದ್ದ ಗುಡ್ಡವನ್ನು ಕಡೆದು ಸಮ ಮಾಡಿ 250 ಕೊಟಿ ರೂ. ಗಳಿಗೂ ಹೆಚ್ಚು ಖರ್ಚು ಮಾಡಿ ರೈತರಿಗೆ ಅನುಕೂಲವಾಗಲಿ ಎಂದು ಹೊಸ ಕಟ್ಟಡಗಳನ್ನು ಕಟ್ಟಲಾಗಿದೆ. ಈ ಹಿಂದೆ ರೈತರು ಹೊಸದುರ್ಗಕ್ಕೆ ಹೋಗಬೇಕಿತ್ತು ಅದನ್ನು ಮನಗಂಡು ಇಲ್ಲಿಯೇ ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಉಳಿದುಕೊಳ್ಳಲು ವಸತಿ ಹಾಗೂ ಉಪಹಾರದ ವ್ಯವಸ್ಥೆ ಕಲ್ಪಿಸುವ ಚಿಂತನೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: ನಾಯಕನಹಟ್ಟಿ ತಿಪ್ಪೇಶನ ಜಾತ್ರೆಯಲ್ಲಿ ಜಕಾತಿ ವಸೂಲಿಗೆ ಬ್ರೇಕ್| ಮುಕ್ತಿ ಬಾವುಟ ಹರಾಜಿಗೆ ಮಾರ್ಗಸೂಚಿ| ಸಚಿವ ಡಿ.ಸುಧಾಕರ್
ಎಪಿಎಂಸಿಗೆ ಇದುವರೆಗೂ 40 ಕೋಟಿ ರೂ. ಗಳಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ, ಮಕ್ಕಳ ಶಿಕ್ಷಣಕ್ಕಾಗಿ 13 ಕೋಟಿ ರೂ.ಗಳಲ್ಲಿ ಎರಡು ಹೊಸ ಹಾಸ್ಟೆಲ್ ಗಳನ್ನು ನಿರ್ಮಾಣ ಮಾಡಲಾಗುವುದು 10 ಕೋಟಿಯಲ್ಲಿ ಐಟಿಐ ಕಾಲೇಜ್ ಕಟ್ಟಲು ಮುಂದಿನ ವಾರ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ನನ್ನ ಕ್ಷೇತ್ರದಲ್ಲಿ ಸಾರ್ವಜನಿಕರಿಂದ ಏನನ್ನು ಹೇಳಿಸಿಕೊಳ್ಳದೆ ಹುಡುಕಿ ಕೆಲಸ ಮಾಡಿದ್ದೇನೆ. ರೈತರು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಿಕೊಳ್ಳಬಹುದು ಎನ್ನುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು, ಆಗ ವಿರೋಧ ವ್ಯಕ್ತವಾಗಿದ್ದರಿಂದ ಹಿಂದಕ್ಕೆ ಪಡೆದಿದೆ. ಕಳೆದ 70 ವರ್ಷಗಳಿಂದಲೂ ರೈತರಿಗೆ ಸರಿಯಾದ ಮಾರುಕಟ್ಟೆ ಇರಲಿಲ್ಲ ಎನ್ನುವುದನ್ನು ಗಮನಿಸಿ ಪಟ್ಟಣದ ಹೊರವಲಯದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಿದ್ದೇನೆ. ತಾಲೂಕಿನ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಇದನ್ನೂ ಓದಿ: ಜನಮನ ರಂಜಿಸಿದ ಸಿದ್ದಯ್ಯನಕೋಟೆ ಜನಪರ ಉತ್ಸವ | ಜಾನಪದ ಸೊಗಡು ಅನಾವರಣ
ಎಪಿಎಂಸಿ ಮಾಜಿ ಅಧ್ಯಕ್ಷ ಅಂಕಳಪ್ಪ, ಕುಮಾರಣ್ಣ, ಮಾಜಿ ಉಪಾಧ್ಯಕ್ಷ ದಾಸಯ್ಯನಹಟ್ಟಿ ರಮೇಶ್, ಸದಸ್ಯ ಮುರಳಿ ಸಿದ್ದಪ್ಪ, ಹೊಳಲ್ಕೆರೆ ಕೃಷಿ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಜಿ.ಎಸ್. ಸುರೇಶ್, ಇಂಜಿನಿಯರ್ಗಳಾದ ಪುಟ್ಟರಾಜು, ರುದ್ರೇಶ್ ನಾಯ್ಕ್, ಪ್ರವೀಣ್, ಮಹೇಶ್ ನಾಯ್ಕ್ ಇದ್ದರು.
