ಮುಖ್ಯ ಸುದ್ದಿ
ಭದ್ರೆಗೆ ಬಂದ್ ಆಯ್ತು ನಾಯಕನಹಟ್ಟಿ | ಸ್ವಯಂಪ್ರೇರಿತವಾಗಿ ರಸ್ತೆಗೆ ಇಳಿದ ನಾಗರಿಕರು | ಅಭೂತಪೂರ್ವ ಬೆಂಬಲ

CHITRADURGA NEWS | 13 FEBRUARY 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ಶೀಘ್ರ ಕಾರ್ಯಾನುಷ್ಠಾನಕ್ಕೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕರೆ ನೀಡಿರುವ ನಾಯಕನಹಟ್ಟಿ ಹೋಬಳಿ ಬಂದ್‌ಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಮಂಗಳವಾರ ಮುಂಜಾನೆಯಿಂದಲೇ ನಾಯನಕಹಟ್ಟಿ ಪಟ್ಟಣ ನಿಧಾನಗತಿಯಲ್ಲಿ ಸ್ತಬ್ಧವಾಗುತ್ತಿದೆ.
ಪಟ್ಟಣದ ಮುಖ್ಯ ವೃತ್ತದಲ್ಲಿ ಜಮಾಯಿಸಿರುವ ರೈತರು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟ್ರ್ಯಾಕ್ಟರ್‌ಗಳನ್ನು ರಸ್ತೆಗಳಿಗೆ ಅಡ್ಡಲಾಗಿ ನಿಲ್ಲಿಸಿ ವಾಹನಗಳ ಸಂಚಾರ ಬಂದ್ ಮಾಡಿದ್ದಾರೆ. ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ: ಅಧಿಕಾರ ಸ್ವೀಕರಿಸಿದ ರಘುಮೂರ್ತಿ, ಗೋವಿಂದಪ್ಪ | ಅಭಿವೃದ್ಧಿಗೆ ಶ್ರಮಿಸುವ ಭರವಸೆ
ಚಿತ್ರದುರ್ಗ, ಚಳ್ಳಕೆರೆ, ತಳಕು, ಮೊಳಕಾಲ್ಮುರು, ಮುಸ್ಟೂರು, ಜಗಳೂರು, ದಾವಣಗೆರೆಯಿಂದ ಆಗಮಿಸಿದ ಪ್ರಯಾಣಿಕರು ಊರಿನ ಹೊರ ಭಾಗದಲ್ಲೇ ಬಸ್ ಇಳಿದು ನಡೆದುಕೊಂಡು ಪಟ್ಟಣ ಪ್ರವೇಶಿಸಿದರು. ಗ್ರಾಮೀಣ ಭಾಗಕ್ಕೆ ಹೋಗುವ ಶಿಕ್ಷಕರು ಆಟೋ, ಬಸ್‌ಗಳಿಲ್ಲದೆ ಪರದಾಡಿದರು.
ಇದನ್ನೂ ಓದಿ: ಕ್ರಷರ್ ಮಾಲಿಕರ ಸಂಘದ ಜಿಲ್ಲಾಧ್ಯಕ್ಷನ ಮೇಲೆ ಗಣಿ ಇಲಾಖೆ ಅಧಿಕಾರಿ ಹಲ್ಲೆ
ಪಟ್ಟಣದ ನಾಗರಿಕರು ಸ್ವಯಂಪ್ರೇರಿತವಾಗಿ ಬಂದ್‌ಗೆ ಕೈ ಜೋಡಿಸಿದ್ದು, ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲು ಸಿದ್ಧವಾಗಿದ್ದಾರೆ. ಈಗಾಗಲೇ ಚಿತ್ರದುರ್ಗ, ಚಳ್ಳಕೆರೆ ಬಂದ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
