ಕ್ರೈಂ ಸುದ್ದಿ
ಚಳ್ಳಕೆರೆ ಎಡಿಎಲ್‍ಆರ್ ಲೋಕಾಯುಕ್ತ ಬಲೆಗೆ
CHITRADURGA NEWS | 03 FEBRUARY 2024
ಚಿತ್ರದುರ್ಗ: ರೈತರ ಜಮೀನಿಗೆ ಸಂಬಂಧಿಸಿದ ಪಹಣಿ ಹಾಗೂ ದಾಖಲೆ ನೀಡಲು 10 ಸಾವಿರ ಲಂಚ ಪಡೆಯುತ್ತಿದ್ದ ಚಳ್ಳಕೆರೆ ಭೂ ದಾಖಲೆಗಳ ಇಲಾಖೆಯ ಎಡಿಎಲ್‍ಆರ್ ಗಂಗಣ್ಣ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಳ್ಳಕೆರೆ ನಗರದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಶುಕ್ರವಾರ ಸಂಜೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಇದನ್ನೂ ಓದಿ: ಚಲನಚಿತ್ರಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಬಿ.ಎಲ್.ವೇಣು
ಚಳ್ಳಕೆರೆ ತಾಲೂಕು ಓಬಳಾಪುರ ಗ್ರಾಮದ ರೈತ ಕೆ.ಜಿ.ಜಯ್ಯಣ್ಣ ತಮ್ಮ ಜಮೀನಿಗೆ ಸಂಬಂದಿಸಿದಂತೆ ಪ್ರತ್ಯೇಕವಾಗಿ ದಾಖಲೆಗಳನ್ನು ಮಾಡಿಕೊಡಲು ಎಡಿಎಲ್‍ಆರ್ ಗಂಗಣ್ಣ ಅವರಿಗೆ ಕೇಳಿಕೊಂಡಿದ್ದರು.
ಈ ಸಂಬಂಧ ಗಂಗಣ್ಣ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಕೊಡಲು ಇಷ್ಟವಿಲ್ಲದ ರೈತ, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಜೆಡಿಎಸ್-ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರು
ಶುಕ್ರವಾರ ಲಂಚ ಕೇಳಿದ್ದ 15 ಸಾವಿರದ ಪೈಕಿ 10 ಸಾವಿರವನ್ನು ಚಾಲಕ ಕಿರಣ್ ರೈತನಿಂದ ಪಡೆಯುವಾಗ ಲೋಕಾಯುಕ್ತರು ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ಮಾರ್ಗದರ್ಶನ ಹಾಗೂ ಡಿವೈಎಸ್ಪಿ ಮೃತ್ಯಂಜಯ ನೇತೃತ್ವದಲ್ಲಿ ದಾಳಿ ನಡೆದಿದೆ.