Connect with us

    ಕೇಂದ್ರ ಬಜೆಟ್‍ನಲ್ಲಿ ಚಿತ್ರದುರ್ಗ ರೈಲ್ವೇಗೆ ಬಂಪರ್ | 390 ಕೋಟಿ ರೂ. ನೀಡಿದ ನಿರ್ಮಲಾ ಸೀತಾರಾಮನ್

    ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ

    ಮುಖ್ಯ ಸುದ್ದಿ

    ಕೇಂದ್ರ ಬಜೆಟ್‍ನಲ್ಲಿ ಚಿತ್ರದುರ್ಗ ರೈಲ್ವೇಗೆ ಬಂಪರ್ | 390 ಕೋಟಿ ರೂ. ನೀಡಿದ ನಿರ್ಮಲಾ ಸೀತಾರಾಮನ್

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 02 FEBRUARY 2024

    ಚಿತ್ರದುರ್ಗ: ಕೇಂದ್ರ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್‍ನಲ್ಲಿ ಚಿತ್ರದುರ್ಗ ಜಿಲ್ಲೆಗೆ ಭರ್ಜರಿ ಕೊಡುಗೆಗಳನ್ನು ನಿರೀಕ್ಷಿಸಲಾಗಿತ್ತು. ವಿಶೇಷವಾಗಿ ಇಲ್ಲಿನ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಹಾಗೂ ಹೆಚ್ಚುವರಿ ಅನುದಾನದ ನಿರೀಕ್ಷೆ ಇತ್ತು.

    ಈ ವಿಷಯದಲ್ಲಿ ಜನರ ನಿರೀಕ್ಷೆ ಹುಸಿಯಾದರೂ, ಜಿಲ್ಲೆಯ ಜನರ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ, ದಶಕಗಳ ಕನಸಾಗಿರುವ ನೇರ ರೈಲು ಮಾರ್ಗಕ್ಕೆ ಬಜೆಟ್‍ನಲ್ಲಿ ಅನುದಾನ ದೊರೆತಿದೆ. ಈ ಮೂಲಕ ಜಿಲ್ಲೆಯ ಜನತೆಗೆ ನಿರ್ಮಲಾ ಸೀತಾರಾಮನ್ ಗಿಫ್ಟ್ ನೀಡಿದ್ದಾರೆ.

    ಇದನ್ನೂ ಓದಿ: ಅರ್ಚಕ ನಿಧನ | ಜಾಲಿಕಟ್ಟೆ ಚೌಡೇಶ್ವರಿ ದೇವಿ ಜಾತ್ರೆ ರದ್ದು

    ಮಧ್ಯ ಕರ್ನಾಟಕದ ಮಹತ್ವದ ಹಾಗೂ ಪ್ರಮುಖ ಸಂಪರ್ಕದ ಕೊಂಡಿಯಾಗಲಿರುವ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗಕ್ಕೆ ಕೇಂದ್ರ ಬಜೆಟ್‍ನಲ್ಲಿ 300 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

    ಈ ಮೂಲಕ ದಶಕಗಳ ಕಾಲ ಕುಂಟುತ್ತಾ ಸಾಗುತ್ತಿದ್ದ ಯೋಜನೆಗೆ ವೇಗ ನೀಡಲಾಗಿದೆ. ಕಳೆದ ಬಜೆಟ್‍ನಲ್ಲೂ ಈ ಯೋಜನೆಗೆ ಅನುದಾನ ಸಿಕ್ಕಿತ್ತು. ಈ ಬಜೆಟ್‍ನಲ್ಲಿ ಸಿಕ್ಕಿದ್ದು, ಯೋಜನೆ ಆದಷ್ಟು ಬೇಗ ಸಾಕಾರಾಗೊಳ್ಳುವ ನಿರೀಕ್ಷೆ ಮೂರು ಜಿಲ್ಲೆಗಳ ಜನರಲ್ಲಿ ಮತ್ತೆ ಚಿಗುರೊಡೆದಿದೆ.

    ಇದರೊಟ್ಟಿಗೆ ಚಿಕ್ಕಜಾಜೂರು–ಹುಬ್ಬಳ್ಳಿ ಜೋಡಿ ರೈಲು ಮಾರ್ಗಕ್ಕೆ 94 ಕೋಟಿ ಲಭ್ಯವಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

    ಕೇಂದ್ರ ಬಜೆಟ್‍ನಲ್ಲಿ ರೈಲ್ವೇ ಸಚಿವಾಲಯಕ್ಕೆ ಒಟ್ಟು 2.2 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದ್ದು, ಇದರಲ್ಲಿ ಕರ್ನಾಟಕಕ್ಕೆ 7,524 ಕೋಟಿ ಅನುದಾನ ಲಭ್ಯವಾಗಿದೆ. ನೂತನ ರೈಲು ಮಾರ್ಗಗಳಲ್ಲಿ ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗಕ್ಕೆ 300 ಕೋಟಿ ಅನುದಾನ ಲಭ್ಯವಾಗಿದೆ.

    ಇದನ್ನೂ ಓದಿ: ಅಡಕೆ ಧಾರಣೆ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿದೆ

    ಏನಿದು ನೇರ ರೈಲು ಮಾರ್ಗ ಯೋಜನೆ:

    ಸದ್ಯ ಹುಬ್ಬಳ್ಳಿ, ದಾವಣಗೆರೆ ಅಥವಾ ಚಿತ್ರದುರ್ಗದಿಂದ ಬೆಂಗಳೂರಿಗೆ ಪ್ರಯಾಣಿಸಲು ಅರಸಿಕೆರೆ ಮಾರ್ಗ ಬಳಸಿ ತುಮಕೂರು ಸೇರಿ ಅಲ್ಲಿಂದ ಬೆಂಗಳೂರಿಗೆ ರೈಲುಗಳ ಸಂಚಾರವಿದೆ.

    ಆದರೆ, ದಾವಣಗೆರೆಯಿಂದ ಚಿತ್ರದುರ್ಗದ ಮೂಲಕ ನೇರವಾಗಿ ತುಮಕೂರು ಸೇರಿದರೆ ಹಣ, ಸಮಯ ಎರಡೂ ಉಳಿತಾಯವಾಗಲಿದೆ. ಇದರಿಂದ ಈ ಭಾಗದ ಪ್ರಯಾಣಿಕರ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.

    ಇಲ್ಲಿನ ರೈತರು ಬೆಳೆದ ವಸ್ತುಗಳನ್ನು ಬೆಂಗಳೂರು ಮಾರುಕಟ್ಟೆ ತಲುಪಿಸುವುದು ಕೂಡಾ ತೀರಾ ಸಲೀಸಾಗಲಿದೆ.

    ಇದಕ್ಕಾಗಿ ಕಳೆದ ಮೂರು ದಶಕಗಳಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕರು ಹೋರಾಟ ನಡೆಸಿದ್ದಾರೆ. ಸದ್ಯ ಮಾಜಿ ಸಂಸದ ಪಿ.ಕೋದಂಡರಾಮಯ್ಯ ನೇರ ರೈಲು ಮಾರ್ಗ ಹೋರಾಟದ ನೇತೃತ್ವ ವಹಿಸಿಕೊಂಡಿದ್ದಾರೆ.

    ಯೋಜನೆ ಕಳೆದ ಹತ್ತು ವರ್ಷಗಳಿಂದ ಹಂತ ಹಂತವಾಗಿ ಟೇಕಾಫ್ ಆಗುತ್ತಿದ್ದು, ಈಗ ಕಾಮಗಾರಿಯೂ ಆರಂಭವಾಗಿ ಕೆಲವೆಡೆ ಮುಗಿದೂ ಹೋಗಿದೆ.

    ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗದ ಅಂತದ 195 ಕಿ.ಮೀ ಉದ್ದ ಇದೆ. ಈಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ತೊಡಕಾಗಿತ್ತು.

    ಇದನ್ನೂ ಓದಿ: ಕೇಂದ್ರ ಬಜೆಟ್ ಬಗ್ಗೆ ನೀರಾವರಿ ಹೋರಾಟ ಸಮಿತಿ ಅಸಮಧಾನ

    ಇತ್ತೀಚೆಗೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗತಿ ಪಡೆದಿದ್ದು, ದಾವಣಗೆರೆ–ಚಿತ್ರದುರ್ಗ ಹಾಗೂ ಹಿರಿಯೂರು ನಡುವೆ ಶೇ. 82ರಷ್ಟು ಭೂಸ್ವಾಧೀನ ಪೂರ್ಣಗೊಂಡಿದೆ. ಟೆಂಡರ್ ಪ್ರಕ್ರಿಯೆಗೆ ಶೇ 90ರಷ್ಟು ಭೂಸ್ವಾಧೀನ ಪೂರ್ಣಗೊಳ್ಳಬೇಕಿದ್ದು, ಅಧಿಕಾರಿಗಳು ಮುಗಿಸಲು ಕಾರ್ಯೋನ್ಮುಖರಾಗಿದ್ದಾರೆ.

    ಈ ಯೋಜನೆಗಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ 1,211 ಎಕರೆ ಭೂಸ್ವಾಧೀನವಾಗಿದೆ. ಇದಕ್ಕೆ 250 ಕೋಟಿ ಪರಿಹಾರವನ್ನೂ ವಿತರಿಸಲಾಗಿದೆ.

    ತುಮಕೂರು ಜಿಲ್ಲೆಯಲ್ಲಿ ಅಗತ್ಯವಿರುವ 849 ಎಕರೆಯಲ್ಲಿ 695 ಎಕರೆ ಭೂಸ್ವಾಧೀನ ಪೂರ್ಣಗೊಂಡಿದೆ. ದಾವಣಗೆರೆ ಜಿಲ್ಲೆಯಲ್ಲಿ 237 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಪರಿಹಾರವನ್ನೂ ವಿತರಣೆ ಮಾಡಲಾಗಿದೆ.

    ಇದನ್ನೂ ಓದಿ: ವಿವಾಹಿತೆಯ ಪ್ರೀತಿಗೆ ಪೀಡಿಸಿ ಆಕೆಯ ಗಂಡನ ಕೊಂದವರಿಗೆ ಜೀವಾವಧಿ ಶಿಕ್ಷೆ

    ಮೂಲಗಳ ಮಾಹಿತಿ ಪ್ರಕಾರ ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಯೋಜನೆಯ ಕಾಮಗಾರಿಗೆ ಚಾಲನೆ ದೊರೆಯುವ ಸಾಧ್ಯತೆ ಇದೆ.

    ಎಲ್ಲವೂ ಅಂದುಕೊಂಡಂತೆ ಆದರೆ, ಒಂದೆರಡು ವರ್ಷಗಳಲ್ಲೇ ನೇರ ರೈಲು ಮಾರ್ಗದ ಕನಸು ನನಸಾಗಲಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top