Connect with us

    ಚಿತ್ರದುರ್ಗ ಜಿಲ್ಲೆಯನ್ನು ನಶೆ ಮುಕ್ತಗೊಳಿಸಲು ನಮ್ಮೊಂದಿಗೆ ಕೈಜೋಡಿಸಿ…

    ನಶೆ ಮುಕ್ತ ಚಿತ್ರದುರ್ಗ ವಿಶೇಷ ಅಭಿಯಾನ

    ಮುಖ್ಯ ಸುದ್ದಿ

    ಚಿತ್ರದುರ್ಗ ಜಿಲ್ಲೆಯನ್ನು ನಶೆ ಮುಕ್ತಗೊಳಿಸಲು ನಮ್ಮೊಂದಿಗೆ ಕೈಜೋಡಿಸಿ…

    CHITRADURG NEWS | 9 JANUARY 2024

    ಚಿತ್ರದುರ್ಗ: ನಶೆ ಮುಕ್ತ ಚಿತ್ರದುರ್ಗ ವಿಶೇಷ ಅಭಿಯಾನದ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸೋಮವಾರ ಜಾಗೃತಿ ಜಾಥಾ ನಡೆಯಿತು.

    ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಆರಂಭವಾದ ಮದ್ಯ ಮತ್ತು ಮಾದಕ ವ್ಯಸನಗಳ ಜಾಗೃತಿ ಜಾಥಾಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಚಾಲನೆ ನೀಡಿದರು.

    ಇದನ್ನೂ ಓದಿ: ರಾಶಿ ಅಡಿಕೆ ಬೆಲೆಯಲ್ಲಿ ದೊಡ್ಡ ಜಿಗಿತ

    ಹೊಳಲ್ಕೆರೆ ರಸ್ತೆಯಿಂದ ಪ್ರಾರಂಭವಾದ ಜಾಗೃತಿ ಜಾಥಾ ಹಾಗೂ ನಡಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಮದಕರಿ ನಾಯಕರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಜಾಗೃತಿ ಮೂಡಿಸಲಾಯಿತು.

    ಬನ್ನಿ, ಚಿತ್ರದುರ್ಗ ಜಿಲ್ಲೆಯನ್ನು ನಶೆ ಮುಕ್ತಗೊಳಿಸಲು ನಮ್ಮೊಂದಿಗೆ ಕೈಜೋಡಿಸಿ, ನಿಮ್ಮ ಬದುಕು, ನಿಮ್ಮ ಕೈಯಲ್ಲಿ, ಮಾದಕ ವ್ಯಸನಗಳಿಂದ ದೂರ ಸರಿಯಿರಿ, ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ, ಮಾದಕ ವಸ್ತುಗಳ ಮಾರಾಟ, ಸೇವನೆ ಇತ್ಯಾದಿ ಮಾಡಿದಲ್ಲಿ ಅತ್ಯಂತ ಕಠಿಣ ಶಿಕ್ಷೆ ಕಾದಿದೆ ಎಂಬುದು ತಿಳಿದಿರಲಿ, ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿ ಎಂಬ ಇತ್ಯಾದಿ ನಾಮಫಲಕಗಳು ಜಾಗೃತಿ ಜಾಥಾದಲ್ಲಿ ಗಮನ ಸೆಳೆದರು.

    ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳ ಸೇವನೆ ಮಾಡುವುದನ್ನು ಕೈಬಿಡಬೇಕು. ಇವುಗಳು ಭವಿಷ್ಯದಲ್ಲಿ ಬದುಕಿಗೆ ಹಲವಾರು ತೊಂದರೆಗಳಿಗೆ ಕಾರಣವಾಗುತ್ತವೆ. ಆರೋಗ್ಯ ಹಾಳಾಗುತ್ತದೆ. ಮೆದಳು ಕೆಲಸ ಮಾಡದೆ ನಿಷ್ಕ್ರಿಯವಾಗಬಹುದು.
    | ದಿವ್ಯಪ್ರಭು ಜಿ.ಆರ್.ಜೆ ಜಿಲ್ಲಾಧಿಕಾರಿ

    ಜಾಥಾದಲ್ಲಿ ಕಾಲೇಜುಗಳ ವಿದ್ಯಾರ್ಥಿಗಳು, ನಾಗರಿಕರು, ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
    ಒನಕೆ ಓಬವ್ವ ವೃತ್ತದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲೆಯಾದ್ಯಂತ ಮಾದಕ ವಸ್ತುಗಳ ಸೇವನೆ ತಡೆಯಲು, ಯುವ ಜನರಲ್ಲಿ ಜಾಗೃತಿ ಮೂಡಿಸಲು ಹೆಚ್ಚಿನ ಅಭಿಯಾನಗಳನ್ನು ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

    ಇದನ್ನೂ ಓದಿ: ಬಯಲು ಸೀಮೆ ಜನರ ದಶಕದ ಕನಸು ನನಸಾಗಿಸಿದ ಮೋದಿ

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಕುಮಾರ್ ಮೀನಾ ಮಾತನಾಡಿ, ಮಾದಕ ವಸ್ತುಗಳ ಸೇವನೆ ಗಂಭೀರ ಅಪರಾಧವಾಗಿದೆ. ಮಾದಕ ವಸ್ತುಗಳ ಸೇವನೆ, ಮಾರಾಟ, ಸಾಗಾಣಿಕೆ ಹಾಗೂ ಮಾದಕ ವಸ್ತು ಸೇವನೆಗೆ ಹಣ ನೀಡಿದರೂ ಎನ್.ಡಿ.ಪಿ.ಎಸ್ (THE NARCOTIC DRUGS AND PSYCHOTROPIC SUBSTANCES)  ಕಾಯ್ದೆಯಡಿ ಅಪರಾಧವಾಗುತ್ತದೆ ಎಂದರು.

    ನಶೆ ಮುಕ್ತ ಚಿತ್ರದುರ್ಗ ವಿಶೇಷ ಅಭಿಯಾನ

    ನಶೆ ಮುಕ್ತ ಚಿತ್ರದುರ್ಗ ವಿಶೇಷ ಅಭಿಯಾನ

    ಮಾದಕ ವಸ್ತು ಸೇವನೆ ಯುವ ಜನರ ಭವಿಷ್ಯಕ್ಕೆ ಮಾರಕವಾಗುತ್ತದೆ. POLICE ಇಲಾಖೆ ಕ್ರಿಮಿನಲ್ ರೆಕಾರ್ಡ್ ಆಗುವುದರಿಂದ ಉದ್ಯೋಗಕ್ಕೆ ಹೋಗುವಾಗ ಇದು ತಪಾಸಣೆಗೆ ಒಳಪಡುತ್ತದೆ. ಯುವಕರು ಎಚ್ಚರಿಕೆಯಿಂದ ಇದ್ದು ಮಾದಕ ವ್ಯಸನಗಳಿಂದ ದೂರ ಇರಬೇಕು.
    | ಧರ್ಮೇಂದರ್ ಕುಮಾರ್ ಮೀನಾ, ಎಸ್ಪಿ.

    ಈ ಕಾಯ್ದೆ ಕಠಿಣವಾಗಿದ್ದು, ವೈದ್ಯಕೀಯ ತಪಾಸಣೆ ಆಧರಿಸಿ ಎಫ್.ಐ.ಆರ್ ದಾಖಲಿಸಲಾಗುತ್ತದೆ. ಮಾದಕ ವಸ್ತು ಅಪರಾಧದಲ್ಲಿ ಸಿಲುಕಿಕೊಂಡರೆ ಖಂಡಿತವಾಗಿ ಶಿಕ್ಷೆ ಅನುಭವಿಸಬೇಕಾಗುತ್ತದೆ.

    ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರಸ್ವಾಮಿ, ಅಬ್ದುಲ್ ಖಾದರ್, ಡಿಆರ್‍ಡಿಎಸ್‍ಪಿ ಗಣೇಶ್, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ನಾಗರಾಜ್ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top