ಮುಖ್ಯ ಸುದ್ದಿ
ಎಸ್.ಆರ್.ಎಸ್. ಪ್ರಥಮ ದರ್ಜೆ ಕಾಲೇಜಿಗೆ ಎರಡು ರ್ಯಾಂಕ್

Published on
ಚಿತ್ರದುರ್ಗ ನ್ಯೂಸ್.ಕಾಂ: ದಾವಣಗೆರೆ ವಿಶ್ವವಿದ್ಯಾಲಯದ 2022-23ನೇ ಶೈಕ್ಷಣಿಕ ಸಾಲಿನ ಅಂತಿಮ ವರ್ಷದ ರ್ಯಾಂಕ್ ಪಟ್ಟಿ ಪ್ರಕಟವಾಗಿದ್ದು, ನಗರದ ಎಸ್.ಆರ್.ಎಸ್. ಪ್ರಥಮ ದರ್ಜೆ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ರ್ಯಾಂಕ್ ಪಡೆದುಕೊಂಡಿದ್ದಾರೆ.
ಬಿಸಿಎ ಅಂತಿಮ ವರ್ಷದ ಫಲಿತಾಂಶದಲ್ಲಿ ಬಿ.ತನ್ಜಿಮ್ ಬಾನು ಶೇ.93.5 ರಷ್ಟು ಅಂಕ ಗಳಿಸಿ ವಿವಿ ಮಟ್ಟದಲ್ಲಿ 2ನೇ ರ್ಯಾಂಕ್ ಪಡೆದರೆ, ಮತ್ತೋರ್ವ ವಿದ್ಯಾರ್ಥಿನಿ ಬಿಸಿಎ ಅಂತಿಮ ಪದವಿಯಲ್ಲಿ ಶೇ.92.4 ರಷ್ಟು ಅಂಕ ಗಳಿಸಿ 5ನೇ ರ್ಯಾಂಕ್ ಗಳಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗದ ಚಿನ್ನದ ಹುಡುಗಿ ಸಿ.ಎಂ.ಚೈತನ್ಯ | ಮೈಸೂರು ವಿವಿಯಲ್ಲಿ ಮೊದಲ ರ್ಯಾಂಕ್

ಬಿಸಿಎ ವಿಭಾಗದಿಂದ ವಿಶ್ವವಿದ್ಯಾಲಯದ ರ್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದ ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿ ಡಾ.ರವಿ. ಟಿ.ಎಸ್, ಪ್ರಾಂಶುಪಾಲರಾದ ಪ್ರೊ.ಸಾಧನ ಎ.ಜಿ ಹಾಗೂ ಬೋಧಕ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
Continue Reading
Related Topics:Chitradurga, Davangere University, Rank, SRS First Class College, ಎಸ್.ಆರ್.ಎಸ್ ಪ್ರಥಮ ದರ್ಜೆ ಕಾಲೇಜು, ಚಿತ್ರದುರ್ಗ, ದಾವಣಗೆರೆ ವಿಶ್ವವಿದ್ಯಾನಿಲಯ, ರ್ಯಾಂಕ್

Click to comment