Close Menu
    Facebook X (Twitter) Instagram
    Chitradurga News-Kannada News
    Facebook X (Twitter) Instagram
    Chitradurga News-Kannada News
    ಮಾರುಕಟ್ಟೆ ಧಾರಣೆ

    ಕ್ರೀಡಾ, ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ SRS ವಿದ್ಯಾರ್ಥಿಗಳ ಕಮಾಲ್

    chitradurganews.comBy chitradurganews.com16 September 2023No Comments1 Min Read
    SRS Student Achievement

    ಚಿತ್ರದುರ್ಗ ನ್ಯೂಸ್.ಕಾಂ: ಚಿತ್ರದುರ್ಗ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಎಸ್‍ಆರ್‍ಎಸ್ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆಯುತ್ತಿರುವ ಎಸ್‍ಆರ್‍ಎಸ್ ಆಸ್ಕರ್ ಫರ್ನಾಂಡಿಸ್ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

    ಇಲ್ಲಿನ 8ನೇ ತರಗತಿ ವಿದ್ಯಾರ್ಥಿಗಳಾದ ಎಂ.ವಿ.ನಿತಿಲ, ಅಧಿತಿ ಕೆ.ರಾವ್, ಎಸ್.ಸಿಂಚನ ಹಾಗೂ ಜಿ.ಬಿಂದುಶ್ರೀ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

    ಪ್ರತಿಭಾ ಕರಾಂಜಿಯಲ್ಲಿ ವಿದ್ಯಾರ್ಥಿಗಳ ಸಾಧನೆ:

    ಮದಕರಿಪುರದ ಭಾರತೀಯ ಪ್ರೌಢಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್‍ಆರ್‍ಎಸ್ ಆಸ್ಕರ್ ಫರ್ನಾಂಡಿಸ್ ಇಂಟರ್‍ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

    SRS Student Achievement
    ಎಸ್‍ಆರ್‍ಎಸ್ ಆಸ್ಕರ್ ಫರ್ನಾಂಡಿಸ್ ಶಾಲೆಯ ವಿದ್ಯಾರ್ಥಿಗಳು ಸಾಧನೆ

    ಕವನ ವಾಚನ ಸ್ಪರ್ಧೆಯಲ್ಲಿ ಭಾನುಪ್ರಿಯ ಪ್ರಥಮ ಸ್ಥಾನ, ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಧರಣೇಶ್ ಪ್ರಥಮ, ಕವ್ವಾಲಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಸೈಯದಾ ಬಾನು, ಶಿಫಾ ರಹಿಮಾ, ಮಾಹಿನ್ ಸೈಯದಾ, ಫಾತಿಮಾ, ಮುಝಮ್ಮಿಲ್ ಕಲಂದರ್ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.

    ಇದನ್ನೂ ಓದಿ: ಭಾರತ ಮಹಿಳಾ ಕ್ರಿಕೇಟ್ ತಂಡದ ನಾಯಕಿ ವರ್ಷಾಗೆ ಅಭಿನಂದನಾ ಸಮಾರಂಭ

    ಜಾನಪದ ನೃತ್ಯ ಸ್ಪರ್ಧೆಯಲ್ಲಿ ಅಕ್ಷರ, ಭೂಮಿಕ ತಾನ್ಯ, ಪಲ್ಲವಿ, ತೇಜಸ್ವಿನಿ ಮತ್ತು ಕೇಸರಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ವರ್ಷಿಣಿ, ಆಂಗ್ಲ ಭಾಷಣ ಸ್ಪರ್ಧೆಯಲ್ಲಿ ತೇಜಸ್ವಿನಿ, ಹಿಂದಿ ಭಾಷಣ ಸ್ಪರ್ಧೆಯಲ್ಲಿ ತಬರುಜ್ ಅಫಿಫಾ, ಭಗವದ್ಗೀತೆ ಶ್ಲೋಕ ಪಠಣ ಸ್ಪರ್ಧೆಯಲ್ಲಿ ತೇಜಸ್, ಜಾನಪದ ಗೀತ ಗಾಯನ ಸ್ಪರ್ಧೆಯಲ್ಲಿ ಅಕ್ಷಿತಾ, ವೇಷಭೂಷಣ ಸ್ಪರ್ಧೆಯಲ್ಲಿ ಕ್ಷೇಮಾ, ಆಶುಭಾಷಣ ಸ್ಪರ್ಧೆಯಲ್ಲಿ ಕೀರ್ತನಾ ಹಾಗೂ ಅರೆಬಿಕ್ ಧಾರ್ಮಿಕ ಪಠಣದಲ್ಲಿ ತಬರುಜ್ ಅಫಿಫಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

     

    ________________________________________________

    ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

    ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

    ________________________________________________

    ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

    » Chitradurga News gmail: chitradurganews23@gmail.com

    » Whatsapp Number:  9008943015

    ________________________________________________

    ಎಸ್ಆರ್ಎಸ್ ಕನ್ನಡ ಲೇಟೆಸ್ಟ್ ಕ್ರೀಡೆ ಚಿತ್ರದುರ್ಗ ನ್ಯೂಸ್ ಪ್ರತಿಭಾ ಕಾರಂಜಿ
    chitradurganews.com
    • Website

    Related Posts

    ದಿನ ಭವಿಷ್ಯ | ನವೆಂಬರ್ 24 | ವ್ಯಾಪಾರದಲ್ಲಿ ಹೊಸ ಹೂಡಿಕೆ, ದೂರದ ಪ್ರಯಾಣ ಬೇಡ

    24 November 2026

    ಮಾರುಕಟ್ಟೆ ಧಾರಣೆ | ನವೆಂಬರ್ 23 | ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?

    23 November 2026

    ದಿನ ಭವಿಷ್ಯ | 23 ನವೆಂಬರ್ | ಉದ್ಯೋಗಿಗಳಿಗೆ ಕೆಲಸದ ಒತ್ತಡ, ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು

    23 November 2026
    Leave A Reply Cancel Reply

    Categories
    Dina Bhavishya Life Style ಅಡಕೆ ಧಾರಣೆ ಕ್ರೈಂ ಸುದ್ದಿ ಚಳ್ಳಕೆರೆ ತಾಲೂಕು ನಿಧನವಾರ್ತೆ ಮಾರುಕಟ್ಟೆ ಧಾರಣೆ ಮುಖ್ಯ ಸುದ್ದಿ ಮೊಳಕಾಳ್ಮೂರು ಲೋಕಸಮರ 2024 ಸಂಡೆ ಸ್ಪಷಲ್ ಹಿರಿಯೂರು ಹೊಳಲ್ಕೆರೆ ಹೊಸದುರ್ಗ

    Facebook X (Twitter) Instagram Pinterest
    © 2026 ThemeSphere. Designed by ThemeSphere.

    Type above and press Enter to search. Press Esc to cancel.

    Loading Comments...