ಮುಖ್ಯ ಸುದ್ದಿ
ಬಸವೇಶ್ವರ ಮೆಡಿಕಲ್ ಕಾಲೇಜಿಗೆ 7 ರ್ಯಾಂಕ್
CHITRADURGA NEWS | 26 FEBRUARY 2025
ಚಿತ್ರದುರ್ಗ: ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದು. ಸ್ನಾತಕೋತ್ತರ(PG) ವಿಭಾಗದಲ್ಲಿ 6, 8, 9, 10ನೇ ರ್ಯಾಂಕ್ ಮತ್ತು ಸ್ನಾತಕ(UG) ವಿಭಾಗದಲ್ಲಿ 3, 7, 8ನೇ ರ್ಯಾಂಕ್ ಪಡೆದಿದ್ದಾರೆ ಎಂದು ಕಾಲೇಜಿನ ಡೀನ್ ಡಾ.ಪ್ರಶಾಂತ್ ತಿಳಿಸಿದ್ದಾರೆ.
Also Read: ಜಗದ್ಗುರು ಮುರುಘರಾಜೇಂದ್ರ ಶ್ರೀ ಹೆಸರಿನಲ್ಲಿ ನೂತನ ಸರ್ಕಲ್ ಅನಾವರಣ
ಸ್ನಾತಕೋತ್ತರ (ಪಿಜಿ) ವಿಭಾಗದಲ್ಲಿ: ಡಾ.ಅಪೂರ್ವ ಆರ್. ಶಾಹಪುರ (MDDVL) 9ನೇ ರ್ಯಾಂಕ್, ಡಾ.ಎಸ್. ಎ.ಮೇಘನಾ (Respiratory Medicine) 8ನೇ ರ್ಯಾಂಕ್, ಡಾ.ಎಂ. ಮೋನಿಕಾ (M.S. OBG) 6ನೇ ರ್ಯಾಂಕ್, ಡಾ.ಜಿ. ಆರ್.ಮಧು(M.S. OBG) 9ನೇ ರ್ಯಾಂಕ್, ಡಾ.ಐಶ್ವರ್ಯ ಪಿ ಜೋಗ್ (M.D. Psychiatry) 10ನೇ ರ್ಯಾಂಕ್ ಪಡೆದಿದ್ದಾರೆ.
ಮೇಘನಾ, ಚೈತ್ರಾ, ಸಮರ್ಥ ಕುಲಕರ್ಣಿ
ಸ್ನಾತಕ (ಯುಜಿ) ವಿಭಾಗದಲ್ಲಿ : ಸಮರ್ಥ ಕುಲಕರ್ಣಿ (Physiology) 7ನೇ ರ್ಯಾಂಕ್, ಹೆಡ್ಡೆ ಅನುಷಾ ರಘುನಾಥ್ (OTORHINOLARYNGOLOGY-ENT) 3 ರ್ಯಾಂಕ್, ಚೈತ್ರಾ ಎಸ್ ಹೊಳೆಪ್ಪಗೋಳ್ (OTORHINOLARYNGOLOGY – ENT) 8ನೇ ಬ್ಯಾಂಕ್ ಪಡೆದಿದ್ದಾರೆ.
Also Read: ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗೆ ಕ್ರಮವಹಿಸಿ | ಸಂಸದ ಗೋವಿಂದ ಕಾರಜೋಳ
ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು, ಬೋಧಕ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.