Connect with us

    Yogacharya Chinmayananda; ಯೋಗಾಚಾರ್ಯ ಚಿನ್ಮಯಾನಂದ ಅವರ 60ನೇ ಜನ್ಮದಿನಾಚರಣೆ 

    ನಗರದ ಜೋಗಿಮಟ್ಟಿ ರಸ್ತೆಯ ಪಕ್ಕದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಸಸಿ ನಡೆಲಾಯಿತು

    ಮುಖ್ಯ ಸುದ್ದಿ

    Yogacharya Chinmayananda; ಯೋಗಾಚಾರ್ಯ ಚಿನ್ಮಯಾನಂದ ಅವರ 60ನೇ ಜನ್ಮದಿನಾಚರಣೆ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 21 OCTOBER 2024

    ಚಿತ್ರದುರ್ಗ: ನಗರದ ರೋಟರಿ ಬಾಲ ಭವನದಲ್ಲಿ ಕಳೆದ ಎರಡೂವರೆ ಮೂರು ದಶಕಗಳಿಂದ ಯೋಗಭ್ಯಾಸ ಮಾಡಿಸುತ್ತಾ ಅದರೊಂದಿಗೆ ಸಾಮಾಜಿಕ ಕೆಲಸಗಳನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿ ಹೆಸರುವಾಸಿಯಾಗಿರುವ ಯೋಗಾಚಾರ್ಯ ಚಿನ್ಮಯಾನಂದ(Yogacharya Chinmayananda) ಅವರ 60ನೇ ವರ್ಷದ ಜನ್ಮದಿನಾಚರಣೆ ಸಮಾರಂಭ ಹಮ್ಮಿಕೊಲಾಗಿತ್ತು.

    ಕ್ಲಿಕ್ ಮಾಡಿ ಓದಿ: ಜಿಲ್ಲೆಯಲ್ಲಿ 48 ಮನೆ ಹಾನಿ | ಯಾವ ತಾಲೂಕಿನಲ್ಲಿ ಎಷ್ಟು ಮನೆ ಹಾನಿ ಇಲ್ಲಿದೆ ಮಾಹಿತಿ 

    ಸಮಾರಂಭದಲ್ಲಿ ಶಾರದಾ ಬ್ರಾಸ್‌ಬ್ಯಾಂಡ್‌ನ ಸಂಸ್ಥಾಪ ಹಾಗೂ ಬಸವೇಶ್ವರ ಪುನರ್ಜೋತಿ’ ಐ’ ಬ್ಯಾಂಕ್‌ನ ನಿರ್ದೇಶಕ ಎಸ್.ವಿ.ಗುರುಮೂರ್ತಿ ಮಾತನಾಡಿ, ಸದೃಢ ಹಾಗೂ ಸಮಸ್ಥಿತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂದು ಸವಾಲಿನ ಸಂಗತಿ.

    ತಮ್ಮ ಜೀವನದ ಅರ್ಧ ಭಾಗವನ್ನು ಈ ಭಾಗದ ಸಾರ್ವಜನಿಕರಿಗಾಗಿ ಯೋಗವನ್ನು ಪರಿಚಯಿಸಿ, ಅದನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸಿದರೆ ರೋಗಗಳು ದೇಹಕ್ಕೆ ಅಷ್ಟು ಸುಲಭವಾಗಿ ಅಂಟುವುದಿಲ್ಲ ಎನ್ನುವುದನ್ನ ಮನವರಿಕೆ ಮಾಡುತ್ತಾ ಬಂದಿರುವ ಚಿನ್ಮಯಾಂದ ಅವರ ಕೊಡುಗೆ ಅನನ್ಯವಾದದ್ದು ಎಂದರು.

    ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳ ತರುವಾಯ ಯೋಗಾಸನ ಕ್ಷೇತ್ರದಲ್ಲಿ ಮತ್ತೆ ಆ ಹೆಸರನ್ನ ಉಳಿಸುವ ನಿಟ್ಟಿನಲ್ಲಿ ಚಿನ್ಮಯಾನಂದ ಅವರು ಶ್ರೀಗಳವರ ಶಿಷ್ಯರಾಗಿ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ. ಅದರೊಂದಿಗೆ ಸಮಾಜಕ್ಕೆ ಅಗತ್ಯ ಎನಿಸುವ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ ಎಂದರು.

    ಕ್ಲಿಕ್ ಮಾಡಿ ಓದಿ: ಪ್ರಾಣ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುವ ಪೊಲೀಸರ ತ್ಯಾಗ ಸ್ಮರಣೀಯ | ಡಿಸಿ ವೆಂಕಟೇಶ್

    ರೋಟೇರಿಯನ್ ಟಿ.ವೀರಭದ್ರಸ್ವಾಮಿ ಮಾತನಾಡಿ, ಶಿಸ್ತು, ಸಮಯಪಾಲನೆ ಮತ್ತು ಬದ್ಧತೆಗೆ ಮತ್ತೊಂದು ಹೆಸರು ಚಿನ್ಮಯಾನಂದ ಅವರು. ನಾವು ಅವರಿಂದ ಕಲಿಯುವುದು ಬಹಳವೇ ಇದೆ. ನಮ್ಮ ಆರೋಗ್ಯ ಸದೃಢವಾಗಿರಿಸಿಕೊಳ್ಳಲು ಯೋಗ ತರಬೇತಿ ಅವರಿಂದ ಪಡೆಯುವ ಮೂಲಕ ಅವರನ್ನ ಸದ್ಬಳಕೆ ಮಾಡಿಕೊಳ್ಳುವ ಪ್ರಯತ್ನ ಮಾಡೋಣ ಎಂದು ಸಲಹೆ ನೀಡಿದರು.

    ನಿವೃತ್ತ ಮುಖ್ಯ ಶಿಕ್ಷಕರಾದ ಹುರುಳಿ ಎಂ.ಬಸವರಾಜ್ ಯೋಗಾಭ್ಯಾಸಿಗಳಾದ ಮಮತಾ ಮಾತನಾಡಿದರು.

    ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಗರದ ವಿವಿಧ ಬಡಾವಣೆಗಳ ಯೋಗಾಸನ ತರಬೇತಿದಾರರು ಭಾಗವಹಿಸಿ ಶ್ರೀಯುತರಿಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು.

    ಕ್ಲಿಕ್ ಮಾಡಿ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ಧಾರಣೆ ಎಷ್ಟಿದೆ?

    ನಗರದ ಜೋಗಿಮಟ್ಟಿ ರಸ್ತೆಯ ಪಕ್ಕದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ವಿವಿಧ ತಳಿಯ ಸಸಿ ನಡೆಲಾಯಿತು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top