ಮುಖ್ಯ ಸುದ್ದಿ
ಸರ್ಕಾರಿ ಮೆಡಿಕಲ್ ಕಾಲೇಜಿಗೆ 500 ಕೋಟಿ ಮಂಜೂರಾಗಿದ್ದು ಬೊಮ್ಮಾಯಿ ಬಜೆಟ್‍ನಲ್ಲಿ | ಜಿ.ಎಚ್.ತಿಪ್ಪಾರೆಡ್ಡಿ

CHITRADURGA NEWS | 19 FEBRUARY 2024
ಚಿತ್ರದುರ್ಗ: ಚಿತ್ರದುರ್ಗದ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರವೇ 500 ಕೋಟಿ ರೂ. ಮಂಜೂರಾಗಿದೆ. ಆದರೆ, ಬಜೆಟ್ ನಂತರ ಕೆಲ ಕಾಂಗ್ರೆಸ್ ನಾಯಕರು ಈ ಬಜೆಟ್‍ನಲ್ಲೇ 500 ಕೋಟಿ ರೂ. ಮಂಜೂರಾಗಿದೆ ಎಂಬಂತೆ ಪ್ರಚಾರ ಮಾಡಿದ್ದಾರೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚಿತ್ರದುರ್ಗದ ಸರ್ಕಾರಿ ಮೆಡಿಕಲ್ ಕಾಲೇಜು ಕುರಿತು ಮುಖ್ಯಮಂತ್ರಿಗಳು ಬಜೆಟ್ ಭಾಷಣದಲ್ಲಿ 2023-24ನೇ ಸಾಲಿನಿಂದ 150 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಪ್ರಾರಂಭವಾಗಿದೆ. ವಿದ್ಯಾರ್ಥಿಗಳ ವಸತಿ ಹಾಸ್ಟೆಲ್, ಸಿಬ್ಬಂದಿಗಳ ವಸತಿ ಗೃಹ, ಕಾಲೇಜು ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸುವುದು ಹೇಗೆ ಗೊತ್ತಾ
ಆದರೆ, ಕೆಲ ಕಾಂಗ್ರೆಸ್ ನಾಯಕರು, ಮುಖಂಡರು ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡು, ಮೆಡಿಕಲ್ ಕಾಲೇಜಿಗೆ 500 ಕೋಟಿ ರೂ. ಇಟ್ಟಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ ಎಂದರು.
ಮೆಡಿಕಲ್ ಕಾಲೇಜಿಗೆ 500 ಕೋಟಿ ರೂ.ಗಳನ್ನು ಹಿಂದಿನ ವರ್ಷವೇ ಆಯವ್ಯಯದಲ್ಲಿ ಮಂಜೂರು ಮಾಡಲಾಗಿದೆ. ಜನವರಿ ಅಥವಾ ಫೆಬ್ರವರಿಯಲ್ಲಿ ಟೆಂಡರ್ ಅಂತಿಮಗೊಂಡು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಸವರಾಜು ಬೋಮ್ಮಾಯಿ ಟೆಂಡರ್ ಕರೆದು ಕಟ್ಟಡದ ಕಾಮಗಾರಿ ಪ್ರಾರಂಭಿಸಲು ಸೂಚಿಸಿದ್ದರು.
ಇದನ್ನೂ ಓದಿ: ವಿವಿ ಸಾಗರದಿಂದ 30 ಹಳ್ಳಿಗಳಿಗೆ ಕುಡಿಯುವ ನೀರು
ಅದರಂತೆ ಕಟ್ಟಡದ ಕಾಮಗಾರಿಯೂ ಪ್ರಾರಂಭ ಮಾಡಲಾಗಿತ್ತು. ಇನ್ನೂ ಕಳೆದ ವರ್ಷದ ಲೆಕ್ಕದಲ್ಲಿ 150 ವಿದ್ಯಾರ್ಥಿಗಳು ಕಾಲೇಜಿಗೆ ಸೇರಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಮೊದಲನೇ ವರ್ಷದ ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಎಲ್ಲಾ ವ್ಯವಸ್ಥೆ ಆಗಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಎಂಸಿಐಯ ಅನುಮತಿಯೂ ದೂರತಿದ್ದು, ಹಾಸ್ಟೆಲ್ ಸಮಸ್ಯೆಯನ್ನೂ ನಿವಾರಿಸಲಾಗಿತ್ತು. ಭೋಧಕರ ಕೊಠಡಿ, ಹಾಸ್ಟಲ್ ಸೇರಿದಂತೆ ಇತರೆ ಕಟ್ಟಡಗಳನ್ನು ತೋರಿಸಿದ ನಂತರವೇ ಕೇಂದ್ರ ಕಾಲೇಜು ಪ್ರಾರಂಭಕ್ಕೆ ಎಂಸಿಐ ಅನುಮತಿ ನೀಡಿದೆ ಎಂದರು.
ಇದನ್ನೂ ಓದಿ: ಐಮಂಗಲದಲ್ಲಿ ಗ್ಯಾರೆಂಟಿ ಯೋಜನೆಗಳ ಸಾರ್ಥಕ ಸಮಾವೇಶ
ಭದ್ರಾ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಗೊಂದಲ:
ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗಾಗಿ 5300 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಘೋಷಣೆ ಮಾಡಿದೆ. ಈ ಬಗ್ಗೆ ನಮ್ಮ ಗಮನವೂ ಇದೆ. ರಾಜ್ಯ ಸರ್ಕಾರ ಇದಕ್ಕಾಗಿ ನಿರ್ಧಿಷ್ಟ ಖಾತೆ ತೆರೆಯುವ ಮೂಲಕ ಹಣ ಪಡೆಯಬಹುದಾಗಿದೆ. ಆದರೆ ರಾಜ್ಯ ಸರ್ಕಾರ ಸರಿಯಾದ ಮಾಹಿತಿ ನೀಡದೆ ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿದೆ.
ಹಣ ಇರುತ್ತದೆ ಎಲ್ಲಿಯೂ ಹೋಗುವುದಿಲ್ಲ. ಈ ಬಗ್ಗೆ ರೈತರು ಹೋರಾಟ ನಡೆಸುತ್ತಿರುವುದು ಒಳ್ಳೆಯದು. ತಪ್ಪಿಲ್ಲ. ಅಪ್ಪರ್ ಭದ್ರಾ ಬಂದರೆ ಒಂದು ಪಕ್ಷಕ್ಕೆ ಅಲ್ಲ ಚಿತ್ರದುರ್ಗ ಜಿಲ್ಲೆಗೆ ಅನುಕೂಲವಾಗಲಿದೆ. ನಾವು ಅದರ ಪರವಾಗಿದ್ದೇವೆ ಎಂದರು.
ಇದನ್ನೂ ಓದಿ: ನಿಮ್ಮೂರಲ್ಲಿ ಕುಡಿಯುವ ನೀರಿನ ಸಮಸ್ಯೆಯೇ | ಇಲ್ಲಿದೆ ಸಹಾಯವಾಣಿ
ಆದರೆ, ಈ ಸಾಲಿನ ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಭದ್ರಾ ಮೇಲ್ದಂಡೆ ಯೋಜನೆಗಾಗಿ ಕನಿಷ್ಟ ಪ್ರಮಾಣದ ಅನುದಾನವನ್ನಾದರೂ ಮೀಸಲಿಡುತ್ತಾರೆ ಎಂಬ ನಿರೀಕ್ಷೆ ಇತ್ತು. ಬಜೆಟ್‍ನಿಂದ ಭ್ರಮನಿರಸನವಾಗಿದೆ.
ಕೇಂದ್ರ ಸರ್ಕಾರ 5300 ಕೋಟಿ ರೂ.ಗಳನ್ನು ನೀಡಲು ಬದ್ದವಾಗಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡಬೇಕಿದೆ. 100 ವರ್ಷದಲ್ಲಿ 75 ವರ್ಷ ಬರಗಾಲವನ್ನು ಅನುಭವಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಅಪ್ಪರ್ ಭದ್ರಾ ಅತಿ ಮುಖ್ಯವಾದ ಯೋಜನೆಯಾಗಿದೆ ಎಂದು ಹೇಳಿದರು.
