Connect with us

    Vanivilasa sagara; ಮೈದುಂಬಿದ ವೇದಾವತಿ | ವಿವಿ ಸಾಗರಕ್ಕೆ ಬರೋಬ್ಬರಿ 4737 ಕ್ಯೂಸೆಕ್ ನೀರು

    Vedavathi rever

    ಮುಖ್ಯ ಸುದ್ದಿ

    Vanivilasa sagara; ಮೈದುಂಬಿದ ವೇದಾವತಿ | ವಿವಿ ಸಾಗರಕ್ಕೆ ಬರೋಬ್ಬರಿ 4737 ಕ್ಯೂಸೆಕ್ ನೀರು

    CHITRADURGA NEWS | 30 JULY 2024

    ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯಕ್ಕೆ ಸತತ ಎರಡನೇ ದಿನವೂ ವೇದಾವತಿ ನದಿ ಮೂಲಕ ನೀರು ಹರಿದು ಬಂದಿದೆ.
    ಜುಲೈ 30 ರಂದು ಬರೋಬ್ಬರಿ 4737 ಕ್ಯೂಸೆಕ್ ನೀರು ವಿವಿ ಸಾಗರ ಜಲಾಶಯ ಸೇರಿದೆ.

    130 ಅಡಿ ಎತ್ತರದ ವಿವಿ ಸಾಗರ ಜಲಾಶಯದಲ್ಲಿ 30 ಟಿಎಂಸಿ ಅಡಿ ನೀರು ಸಂಗ್ರಹಿಸಿಡಬಹುದು. ಸದ್ಯ 4737 ಕ್ಯೂಸೆಕ್ ಒಳಹರಿವು ಬಂದಿದ್ದು, ಹೊರ ಹರಿವು ಇಲ್ಲ.

    ಇದನ್ನೂ ಓದಿ: ವಿವಿ ಸಾಗರ ತಲುಪಿದ ನೀರು | ಮದಗದ, ಅಯ್ಯಣ್ಣನ ಕೆರೆ ಕೋಡಿ | ವೇದಾವತಿ ನದಿಗೆ ಜೀವಕಳೆ

    ಇದರಲ್ಲಿ ಕುಡಿಯುವ ಉದ್ದೇಶಕ್ಕಾಗಿ 13 ಕ್ಯೂಸೆಕ್ ಬಳಕೆಯಾಗುತ್ತಿದೆ. 134 ಕ್ಯೂಸೆಕ್ ಆವಿಯಾ ಪ್ರಮಾಣವಿದೆ.

    ಸದ್ಯ ಜಲಾಶಯದ ನೀರಿನ ಸಂಗ್ರಹ 123.25 ಅಡಿಯಷ್ಟಿದೆ. 24.75 ಟಿಎಂಸಿ ಅಡಿ ನೀರಿದೆ ಎಂದು ಮಂಗಳವಾರ ಬೆಳಗ್ಗೆ 8 ಗಂಟೆಗೆ ನಡೆಸಿದ ಪರೀಕ್ಷೆಯಲ್ಲಿ ಗೊತ್ತಾಗಿದೆ.

    ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆ ವೈದ್ಯ ಡಾ. ಸಾಲಿ ಮಂಜಪ್ಪ ಅಮಾನತು

    ವೇದಾವತಿ ನದಿಗೆ ಜೀವಕಳೆ:

    ಚಿಕ್ಕಮಗಳೂರು ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿರುವ ಪರಿಣಾಮ ಕಡೂರು ತಾಲೂಕಿನ ಸಖರಾಯಪಟ್ಟಣದ ಬಳಿಯಿರುವ ಮದಗದ ಕೆರೆ ಹಾಗೂ ಅಯ್ಯನಕೆರೆಗಳು ಕೋಡಿ ಬಿದ್ದು ನೀರು ಹರಿಯುತ್ತಿದ್ದು, ವೇದಾವತಿ ನದಿಗೆ ಜೀವಕಳೆ ಬಂದಿದೆ.

    ವಿವಿ ಸಾಗರ ಜಲಾಶಯ

    ವಿವಿ ಸಾಗರ ಜಲಾಶಯ

    ವೇದಾವತಿ ನದಿ ಕೆಲ್ಲೋಡು ಬಳಿ ಮೈದುಂಬಿ ಹರಿಯುತ್ತಿರುವ ದೃಶ್ಯವನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.

    ಇದನ್ನೂ ಓದಿ: ಶೀಘ್ರ 8 ಕೆರೆಗಳಿಗೆ ಭದ್ರಾ ನೀರು | ಡಿಸಿಎಂ ಡಿ.ಕೆ.ಶಿವಕುಮಾರ್‌ ಭರವಸೆ

    ವೇದಾವತಿ ಮೂಲಕ ಹರಿದು ಬರುತ್ತಿರುವ ನೀರು ವಾಣಿವಿಲಾಸ ಸಾಗರ ಜಲಾಶಯದ ಒಡಲು ಸೇರುತ್ತಿರುವುದರಿಂದ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.

    ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಇಲ್ಲದಿದ್ದರೂ, ಚಿಕ್ಕಮಗಳೂರು ಭಾಗದ ಮಳೆಯಿಂದಾಗಿ ವಿವಿ ಸಾಗರಕ್ಕೆ ನೀರು ಹರಿದು ಬರುತ್ತಿದೆ.

    Continue Reading
    You may also like...
    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top