ಮುಖ್ಯ ಸುದ್ದಿ
Power cut: 4 ದಿನ ವಿದ್ಯುತ್ ವ್ಯತ್ಯಯ | ಯಾವ ದಿನಗಳಂದು ಕರೆಂಟ್ ಇರಲ್ಲ ಗೊತ್ತಾ….
CHITRADURGA NEWS | 29 NOVEMBER 2024
ಚಿತ್ರದುರ್ಗ: ಪಂಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ಬೃಹತ್ 66ಕೆ.ವಿ ಗೋಪುರ ನಿರ್ಮಾಣ ಹಮ್ಮಿಕೊಂಡಿರುವುದರಿಂದ ನ.30 ಹಾಗೂ ಡಿ.2,4 ಮತ್ತು 6ರಂದು ಪಂಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎನ್.ಜೆ.ವೈ ಮತ್ತು ಐ.ಪಿ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯ(Power cut)ವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
66/11 ಕೆವಿ ಪಂಡರಹಳ್ಳಿ ವಿವಿ ಕೇಂದ್ರದಿಂದ ಸರಬರಾಜಾಗುವ 11ಕೆವಿ ಮಾರ್ಗದ ಅನ್ನೇಹಾಳ್, ಹುಲ್ಲೂರು ಎನ್.ಜೆ.ವೈ, ಪಂಡರಹಳ್ಳಿ ಕಾವಲಹಟ್ಟಿ, ಕುರುಬರಹಳ್ಳಿ, ಎಫ್-10 ಬೆಟ್ಟದನಾಗೇನಹಳ್ಳಿ, ಸಿಂಗಾಪುರ, ಕಕ್ಕೇರು ಎನ್.ಜೆ.ವೈ ಸರಬರಾಜು ಕೇಂದ್ರಕ್ಕೆ ಹೊಂದಿಕೊಂಡಿರುವ ಅನ್ನೇಹಾಳ್, ಹುಲ್ಲೂರು, ಪಂಡರಹಳ್ಳಿ ಕಾವಲಹಟ್ಟಿ, ಮಹದೇವನಹಟ್ಟಿ, ಗೊಡಬನಾಳ್, ಸೊಂಡೆಕೊಳ, ಕುರುಬರಹಳ್ಳಿ, ಬೆಟ್ಟದನಾಗೇನಹಳ್ಳಿ, ಸಿಂಗಾಪುರ ಹಾಗೂ ಕಕ್ಕೇರು ಗ್ರಾಮಗಳು ಮತ್ತು ಐ.ಪಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕ್ಲಿಕ್ ಮಾಡಿ ಓದಿ: ಕರ್ತವ್ಯಕ್ಕೆ ಗೈರು | PDO ಅಮಾನತು | ಜಿಪಂ ಸಿಇಓ ಆದೇಶ
ಸಾರ್ವಜನಿಕ ಹಾಗೂ ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.