Connect with us

    Inflow: ವಿವಿ ಸಾಗರಕ್ಕೆ ಒಂದೇ ದಿನದಲ್ಲಿ 1 ಟಿಎಂಸಿ ನೀರು | ಈ ವರ್ಷ ಕೋಡಿ ಪಕ್ಕಾ..

    Vanivilasa sagara

    ಮುಖ್ಯ ಸುದ್ದಿ

    Inflow: ವಿವಿ ಸಾಗರಕ್ಕೆ ಒಂದೇ ದಿನದಲ್ಲಿ 1 ಟಿಎಂಸಿ ನೀರು | ಈ ವರ್ಷ ಕೋಡಿ ಪಕ್ಕಾ..

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 24 OCTOBER 2024

    ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯಕ್ಕೆ ಭರ್ಜರಿ ಒಳಹರಿವು ಬರುತ್ತಿದ್ದು, ಒಂದೇ ದಿನದಲ್ಲಿ 1 ಟಿಎಂಸಿ ನೀರು ಜಲಾಶಯ ಸೇರಿದ್ದು, ಈ ವರ್ಷ ಭರ್ತಿಯಾಗುವುದು ಬಹುತೇಕ ನಿಶ್ಚಿತವಾಗಿದೆ.

    ವೇದಾವತಿ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅ.24 ಗುರುವಾರ ಬೆಳಗ್ಗೆ ನಡೆಸಿದ ಮಾಪನದ ವೇಳೆ ವಿವಿ ಸಾಘರ ಜಲಾಶಯಕ್ಕೆ ಬರೋಬ್ಬರಿ 7741 ಕ್ಯೂಸೆಕ್ ನೀರು ಹರಿದು ಬಂದಿದೆ.

    ಇದನ್ನೂ ಓದಿ: ವಿವಿ ಸಾಗರಕ್ಕೆ ಭರ್ಜರಿ ನೀರು | ಮೈದುಂಬಿ ಹರಿಯುತ್ತಿರುವ ವೇದಾವತಿ

    130 ಅಡಿ ಎತ್ತರದ ವಿವಿ ಸಾಗರ ಜಲಾಶಯದಲ್ಲಿ ಅ.24ಕ್ಕೆ 125.60 ಅಡಿಯಷ್ಟು ನೀರು ಬಂದಿದೆ. 30 ಟಿಎಂಸಿ ಸಾಮಥ್ರ್ಯದ ಈ ಜಲಾಶಯಕ್ಕೆ ಈಗ 26.73 ಟಿಎಂಸಿ ನೀರು ಸಂಗ್ರಹವಾಗಿದೆ. ಭರ್ತಿಯಾಗಲು ಇನ್ನು 3 ಟಿಎಂಸಿ ಮಾತ್ರ ಬೇಕಾಗಿದೆ.

    Vedavathi

    ವೇದಾವತಿ ನದಿ

    ಅ.23 ರಂದು ಕೂಡಾ ವಿವಿ ಸಾಗರಕ್ಕೆ 4852 ಕ್ಯೂಸೆಕ್ ನೀರು ಹರಿದು ಬಂದಿತ್ತು. ಇಂದು ಇನ್ನೂ ಹೆಚ್ಚಾಗಿದ್ದು, ನಾಳೆಯೂ ಈ ಒಳಹರಿವು ಇರಲಿದೆ. ಇದರಿಂದಾಗಿ ಜಲಾಶಯಕ್ಕೆ ವೇದಾವತಿ ನದಿ ಮೂಲಕ ಭಾರೀ ಪ್ರಮಾಣದಲ್ಲಿ ನೀರು ಬಂದು ಸೇರುತ್ತಿದೆ.

    ಇದನ್ನೂ ಓದಿ: ನೀರಿನಲ್ಲಿ ಸಿಲುಕಿದ ಟ್ರ್ಯಾಕ್ಟರ್ | ನಾಯಕನಹಟ್ಟಿ ಹೊರಮಠ ಜಲಾವೃತ

    89 ವರ್ಷಗಳ ನಂತರ 2022ರಲ್ಲಿ ಭರ್ತಿಯಾಗಿ ತಿಂಗಳುಗಳ ಕಾಲ ಕೋಟಿಯಲ್ಲಿ ಅಪಾರ ಪ್ರಮಾಣದ ನೀರು ಹರಿದಿತ್ತು. ಈಗ 2024ರಲ್ಲಿ ಮತ್ತೊಮ್ಮೆ ವಿವಿ ಸಾಗರ ಕೋಡಿ ಹರಿಯುವ ಸಾಧ್ಯತೆ ಕಂಡು ಬರುತ್ತಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top