Connect with us

    ಚಂದ್ರಯಾನ-3 ಪ್ರಾಜೆಕ್ಟ್‍ನಲ್ಲಿ ಚಿತ್ರದುರ್ಗದಲ್ಲಿ ಇಂಜಿನಿಯರಿಂಗ್ ಮಾಡಿದ ವಿಜ್ಞಾನಿಗಳು | ಹಳೆಯ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ SJMIT

    ಮುಖ್ಯ ಸುದ್ದಿ

    ಚಂದ್ರಯಾನ-3 ಪ್ರಾಜೆಕ್ಟ್‍ನಲ್ಲಿ ಚಿತ್ರದುರ್ಗದಲ್ಲಿ ಇಂಜಿನಿಯರಿಂಗ್ ಮಾಡಿದ ವಿಜ್ಞಾನಿಗಳು | ಹಳೆಯ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ SJMIT

    https://chat.whatsapp.com/Jhg5KALiCFpDwME3sTUl7x

    ಚಂದ್ರಯಾನ-3 ಪ್ರಾಜೆಕ್ಟ್‍ನಲ್ಲಿ ಚಿತ್ರದುರ್ಗದಲ್ಲಿ ಇಂಜಿನಿಯರಿಂಗ್ ಮಾಡಿದ ವಿಜ್ಞಾನಿಗಳು | ಹಳೆಯ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ SJMIT

    ಚಿತ್ರದುರ್ಗ ನ್ಯೂಸ್

    • 1987-1991ನೇ ಸಾಲಿನಲ್ಲಿ ಇಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಾನಿಕ್ಸ್ ಅಧ್ಯಯನ ಮಾಡಿದ್ದ ಡಾ.ರಮೇಶ್ ವಿ ನಾಯ್ಡು.
    • 1996-2000ನೇ ಸಾಲಿನಲ್ಲಿ ಎಲೆಕ್ಟ್ರಾನಿಕ್ಸ್ ವ್ಯಾಸಾಂಗ ಮಾಡಿದ್ದ ಮಲ್ಲಿಕಾರ್ಜುನ್.

    ಇಸ್ರೋ ವಿಜ್ಞಾನಿಗಳ ತಂಡ ಸತತ ಪರಿಶ್ರಮದಿಂದ ಚಂದ್ರಯಾನ-3 ಯಶಸ್ವಿಗೊಳಿಸಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆಯುತ್ತಿದ್ದು, ನಭಕ್ಕೆ ಚಿಮ್ಮಿದ್ದ ವಿಕ್ರಂ ನೌಕೆಯನ್ನು ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಸವಾಲನ್ನು ನಮ್ಮ ವಿಜ್ಞಾನಿಗಳ ತಂಡ ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಿದೆ. ಈಗ ವಿಕ್ರಂ ಲ್ಯಾಂಡರ್ ಒಳಗೆ ಅವಿತು ಕುಳಿತಿದ್ದ ಪ್ರಗ್ಯಾನ್ ರೋವರ್ ಕೂಡಾ ಚಂದ್ರನ ಅಂಗಳದಲ್ಲಿ ಹರಿದಾಡುತ್ತಿದೆ.

    ಇಷ್ಟೆಲ್ಲಾ ಸಾಧನೆಗೆ ಇಡೀ ದೇಶ ಹಾಗೂ ಜಗತ್ತಿನ ಹಲವು ದೇಶಗಳು ಇಸ್ರೋಗೆ ಸಲಾಂ ಎಂದಿವೆ. ಆದರೆ, ಇನ್ನೂ ವಿಶೇಷ ಹಾಗೂ ಚಿತ್ರದುರ್ಗ ಜಿಲ್ಲೆಯ ಜನತೆ ಹೆಮ್ಮೆಪಡುವ ಸಂಗತಿಯೆಂದರೆ, ಚಂದ್ರಯಾನ-3 ಯೋಜನೆಯ ತಂಡದಲ್ಲಿ ಚಿತ್ರದುರ್ಗದಲ್ಲಿ ಅಧ್ಯಯನ ಮಾಡಿದ ಇಬ್ಬರು ವಿಜ್ಞಾನಿಗಳಿದ್ದರು ಎನ್ನುವುದು.

    ಇದನ್ನೂ ಓದಿ: ಕೋಟೆನಾಡಿನ ಜನರ ಅಭಿಮಾನದ ಸಂಗತಿ | ಚಂದ್ರಯಾನಕ್ಕೂ-ಚಿತ್ರದುರ್ಗಕ್ಕೂ ಇರುವ ನಂಟೇನು ಗೊತ್ತಾ..?

    ಹೌದು, ಇಲ್ಲಿನ ಮುರುಘಾ ಮಠಕ್ಕೆ ಸೇರಿದ ಶ್ರೀ ಜಗದ್ಗುರು ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯ(ಎಸ್‍ಜೆಎಂಐಟಿ) ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಮಾಡಿದ ಇಬ್ಬರು ವಿಜ್ಞಾನಿಗಳು ತಂಡದಲ್ಲಿರುವುದು ಕೋಟೆ ನಾಡು ಹೆಮ್ಮೆ ಪಡುವ ಸಂಗತಿಯಾಗಿದೆ.

    1987-1991ನೇ ಸಾಲಿನಲ್ಲಿ ಎಸ್‍ಜೆಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಧ್ಯಯನ ಮಾಡಿದ್ದ ಡಾ.ರಮೇಶ್ ವಿ ನಾಯ್ಡು ಹಾಗೂ 1996-2000ನೇ ಸಾಲಿನಲ್ಲಿ ಎಲೆಕ್ಟ್ರಾನಿಕ್ಸ್ ವ್ಯಾಸಾಂಗ ಮಾಡಿದ್ದ ಮಲ್ಲಿಕಾರ್ಜುನ್ ಇಬ್ಬರು ವಿಜ್ಞಾನಿಗಳಾಗಿದ್ದಾರೆ. ಚಿತ್ರದುರ್ಗದಲ್ಲಿ ಇಂಜಿನಿಯರಿಂಗ್ ಪೂರೈಸಿದ ನಂತರ ಡಾ.ರಮೇಶ್ ವಿ ನಾಯ್ಡು ಮುಂದೆ 1991ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ 5ನೇ ರ್ಯಾಂಕ್ ಪಡೆದಿದ್ದರು.

    ಈ ಇಬ್ಬರು ಹೆಮ್ಮೆಯ ವಿಜ್ಞಾನಿಗಳನ್ನು ಎಸ್‍ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ, ಎಸ್‍ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪಿ.ಬಿ.ಭರತ್ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

     

    Continue Reading
    You may also like...
    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top