Connect with us

    ಶೌಚಾಲಯ ಸ್ವಚ್ಛತಾ ಸಾಮಾಗ್ರಿ ಅಡುಗೆ ಮನೆಯಲ್ಲಿ | ಗರಂ ಆದ ಜಿಪಂ ಸಿಒಇ ಎಸ್‌.ಜೆ.ಸೋಮಶೇಖರ್

    ಮುಖ್ಯ ಸುದ್ದಿ

    ಶೌಚಾಲಯ ಸ್ವಚ್ಛತಾ ಸಾಮಾಗ್ರಿ ಅಡುಗೆ ಮನೆಯಲ್ಲಿ | ಗರಂ ಆದ ಜಿಪಂ ಸಿಒಇ ಎಸ್‌.ಜೆ.ಸೋಮಶೇಖರ್

    ಚಿತ್ರದುರ್ಗನ್ಯೂಸ್.ಕಾಂ

    ಜಿಲ್ಲೆಯ ಎಲ್ಲ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಬಳಸುವ ಕುಡಿಯುವ ನೀರನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸಬೇಕು. ಈ ವಿಚಾರದಲ್ಲಿ ಯಾವುದೇ ಹಂತದಲ್ಲೂ ನಿರ್ಲಕ್ಷ್ಯವಹಿಸುವಂತಿಲ್ಲ. ಒಂದು ಚಿಕ್ಕ ದೂರು ಬಂದರೂ ಸಹ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್‌.ಜೆ.ಸೋಮಶೇಖರ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

    ಸಮಾಜ ಕಲ್ಯಾಣ ಇಲಾಖೆ  ವ್ಯಾಪ್ತಿಯ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಪ್ರತಿ ವಿದ್ಯಾರ್ಥಿ ನಿಲಯದಲ್ಲೂ ಕುಡಿಯವ ನೀರಿನ ವ್ಯವಸ್ಥೆ ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಇದನ್ನೂ ಓದಿ: ಚಿತ್ರದುರ್ಗ-ತುಮಕೂರು ನಡುವೆ ಏರ್‍ಪೋರ್ಟ್(AIRPORT) ನಿರ್ಮಾಣಕ್ಕೆ ಚಿಂತನೆ

    ಚಿತ್ರದುರ್ಗ ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಸಮೀಪದ ಸರ್ಕಾರಿ ಮೆಟ್ರಿಕ್‌ ನಂತರದ ವೃತ್ತಿಪರ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಅವರು, ವಿದ್ಯಾರ್ಥಿ ನಿಲಯದ ಅಡುಗೆ ಕೋಣೆ, ಡೈನಿಂಗ್‌ ಹಾಲ್, ಸ್ಟೋರ್‌ ರೂಂನಲ್ಲಿ ಶೇಖರಿಸಿಟ್ಟ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಸೇರಿದಂತೆ ಆಹಾರ ಪದಾರ್ಥ ಹಾಗೂ ಮೆನು ಚಾರ್ಟ್‌ ವೀಕ್ಷಿಸಿದರು. ಈ ವೇಳೆ ಅಡುಗೆ ಪದಾರ್ಥ ಸಂಗ್ರಹ ಕೊಠಡಿಯಲ್ಲಿ ಫಿನಾಯಿಲ್‌ ಬಾಟಲ್‌ಗಳನ್ನು ಇರಿಸಿದ್ದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.

    ಕೂಡಲೇ ಫಿನಾಯಿಲ್‌ ಬಾಟಲ್‍ಗಳನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚಿಸಿ, ಅಡುಗೆಗೆ ಬಳಸುವ ಪದಾರ್ಥಗಳನ್ನು ಸಂಗ್ರಹಿಸುವ ಕೊಠಡಿಗಳಲ್ಲಿ ಶೌಚಾಲಯ ಅಥವಾ ಸ್ನಾನಗೃಹಕ್ಕೆ ಬಳಸುವ ಸಾಮಗ್ರಿಗಳನ್ನು ದಾಸ್ತಾನು ಮಾಡದಂತೆ ಸೂಚನೆ ನೀಡಿದರು.

    ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಮಕ್ಕಳ ದೂರು ಪುಸ್ತಕ ನಿರ್ವಹಣೆ ಮಾಡಬೇಕು.  ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲೂ ತಪ್ಪದೆ ದೂರು ಪುಸ್ತಕ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

    ಇದನ್ನೂ ಓದಿ: ದುರ್ಗದ ಭೂಗರ್ಭದಲ್ಲಿ ಬಹುಬೇಡಿಕೆಯ ನಿಕ್ಷೇಪ ಪತ್ತೆ

    ಹಾಸ್ಟೆಲ್‌ಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ಮಕ್ಕಳಿಗೆ ಕಾಟ್‌, ಸೋಲಾರ್ ವ್ಯವಸ್ಥೆಯನ್ನು ಕಂಪನಿಗಳ ಸಿಎಸ್‌ಆರ್‌ ನಿಧಿಯಡಿ ಕೈಗೊಳ್ಳಲು ಯತ್ನಿಸಲಾಗುವುದು ಎಂದರು.

    ಚಿತ್ರಹಳ್ಳಿಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳ ಸಮುಚ್ಚಯದ ವಸತಿ ಶಾಲೆಗಳಿಗೆ ದಿಢೀರ್  ಭೇಟಿ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್‌ ಹೆಬ್ಬಳ್ಳಿ, ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಇದ್ದರು.

    ಹಾಸ್ಟೆಲ್‌ ಮಕ್ಕಳೊಂದಿಗೆ ಸಂವಾದ

    ಚಿತ್ರಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸಮುಚ್ಚಯದ ವಸತಿ ಶಾಲೆಗಳಿಗೆ ಭೇಟಿ ನೀಡಿದ ಜಿಪಂ ಸಿಇಒ, ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಶಿಕ್ಷಣ ಹಾಗೂ ವಸತಿ ಶಾಲೆಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಮಕ್ಕಳ ಅನುಕೂಲಕ್ಕೆ ಹಾಸ್ಟೆಲ್‍ಗೆ ಇನ್ನು ಏನೇನು ಸವಲತ್ತು ನೀಡಬೇಕು ಎಂದು ಸಲಹೆ ಕೇಳಿದರು.

    ಇದನ್ನೂ ಓದಿ: ಮಠ, ಪೀಠದ ಅಧಿಕಾರ ಮರಳಿ ಪಡೆದ ಮುರುಘಾ ಶರಣರು

    ವಸತಿ ಶಾಲೆಯಲ್ಲಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಯೇ, ಗುಣಮಟ್ಟದ, ಶುಚಿರುಚಿಯಾದ ಊಟ ನೀಡುತ್ತಾರೆಯೇ, ತಿಂಗಳಿಗೊಮ್ಮೆ ಸೋಪು, ಕೊಬ್ಬರಿ ಎಣ್ಣೆ, ಮತ್ತಿತರ ಸಾಮಗ್ರಿಯ ಕಿಟ್ ನೀಡುತ್ತಾರೆಯೇ ಎಂದು ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಅವರು, ವಿದ್ಯಾರ್ಥಿಗಳು ವ್ಯಾಸಂಗದ ಕಡೆಗೆ ಹೆಚ್ಚಿನ ಗಮನ ನೀಡಬೇಕು.  ನಿಮಗಾಗಿ ಸರ್ಕಾರ ಹಣ ಖರ್ಚು ಮಾಡಿ ಓದಲು ವ್ಯವಸ್ಥೆ ಮಾಡಿದೆ, ಭವಿಷ್ಯದಲ್ಲಿ ನೀವು ಕೂಡ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು, ವಿದ್ಯಾವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಹಾಸ್ಟೆಲ್ ಊಟ ಸವಿದ ಸಿಇಒ

    ಚಿತ್ರಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಸಿಇಒ ಸೋಮಶೇಖರ್ ಅವರು, ಹಾಸ್ಟೆಲ್‌ನಲ್ಲಿಯೇ ಮುದ್ದೆ, ಅನ್ನ ಸಾಂಬಾರ್, ಮಜ್ಜಿಗೆ ಊಟ ಸವಿದು, ಊಟದ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಮಕ್ಕಳಿಗೆ ಎಲ್ಲ ಹಾಸ್ಟೆಲ್‌ಗಳಲ್ಲಿ ನಿಗದಿತ ಮೆನುವಿನಂತೆಯೇ ಊಟೋಪಹಾರ ತಯಾರಿಸಿ ನೀಡಬೇಕು. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ಕಳಪೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top