ಮುಖ್ಯ ಸುದ್ದಿ
ಕೊಟ್ಟ ಮಾತು ಉಳಿಸಿಕೊಂಡ ಜಿಪಂ ಸಿಇಓ | ಬಾಲ ಮಂದಿರದ ಮಕ್ಕಳಿಗೆ ಬ್ಯಾಟ್, ಬಾಲ್, ಕೇರಂ, ಚೆಸ್ ವ್ಯವಸ್ಥೆ
CHITRADURGA NEWS | 10 DECEMBER 2024
ಚಿತ್ರದುರ್ಗ: ಇತ್ತೀಚೆಗೆ ನಗರದ ಸರ್ಕಾರಿ ಬಾಲ ಮಂದಿರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್.ಜೆ.ಸೋಮಶೇಖರ್ ಬಾಲ ಮಂದಿರ ಪರಿಶೀಲನೆ ನಡೆಸಿ, ಪ್ರತಿಯೊಬ್ಬ ಮಕ್ಕಳಿಂದ ಅಹವಾಲು ಆಲಿಸಿದ್ದರು.
ಈ ವೇಳೆ ಮಕ್ಕಳು, ಮಕ್ಕಳ ಅಧ್ಯಯನ ಕೊಠಡಿಗೂ ತೆರಳಿ ವೀಕ್ಷಿಸಿ, ಶೈಕ್ಷಣಿಕ ಪ್ರಗತಿ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದರು. ಈ ವೇಳೆ ಮಕ್ಕಳೆಲ್ಲರೂ ನಮಗೆ ಕ್ರೀಡಾ ಸಾಮಗ್ರಿ, ಆಟಿಕೆಗಳು ಕೊಡಿಸಿ ಕೊಡಿ ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನಕ್ಕೆ ಕಂಬನಿ ಮಿಡಿದ ಕೋಟೆನಾಡು
ಮಕ್ಕಳ ಮಾತಿಗೆ ಕಿವಿಗೊಟ್ಟಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್, ನಾನೇ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿ ಬಂದಿದ್ದರು.
ಅದರಂತೆ ಸೋಮವಾರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ತಮ್ಮ ಸ್ವಂತ ಹಣದಿಂದ ಖರೀಧಿಸಿರುವ ಕ್ರಿಕೇಟ್ ಬ್ಯಾಟ್, ಬಾಲ್, ಕೇರಂ ಬೋರ್ಡ್, ವಾಲಿಬಾಲ್, ಫುಟ್‍ಬಾಲ್ ಸೇರಿದಂತೆ ಹಲವು ಆಟಿಕೆಗಳನ್ನು ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಬಾಲಮಂದಿರಕ್ಕೆ ಹಸ್ತಾಂತರಿಸಿದರು.
ಇದನ್ನೂ ಓದಿ: ಚಿತ್ರದುರ್ಗಕ್ಕೆ ನೀರು ಕೊಟ್ಟ ಪುಣ್ಯಾತ್ಮ ಎಸ್.ಎಂ.ಕೃಷ್ಣ | ಜಿ.ಎಚ್.ತಿಪ್ಪಾರೆಡ್ಡಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಆರ್ ಬಣಕಾರ್, ಜಿಲ್ಲಾ ಮಕ್ಕಳ ಶಿಕ್ಷಣಾಧಿಕಾರಿ ಸವಿತಾ ಹಾಗೂ ಸಿಬ್ಬಂದಿ ಆಟಿಕೆಗಳನ್ನು ಮಕ್ಕಳ ಪರವಾಗಿ ಸ್ವೀಕರಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ತಿಮ್ಮಪ್ಪ, ಡಿವೈಎಸ್ಪಿ ಪಿ.ಕೆ.ದಿನಕರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಸರ್ಕಾರಿ ಬಾಲ ಮಂದಿರದ ಅಧೀಕ್ಷಕರಾದ ಜಿ.ವಿ.ಸಂತೋಷ, ಜ್ಯೋತಿ, ಕಾವೇರಮ್ಮ ಮತ್ತಿತರರಿದ್ದರು.