Connect with us

    ಯುವಜನರು ತಪ್ಪದೇ ಮತ ಚಲಾಯಿಸಿ | ಜಿ.ಎನ್.ಮಲ್ಲಿಕಾರ್ಜುನ

    ಮತದಾನ ಮತ್ತು ಮತದಾರರ ಜಾಗೃತಿ ಕವಿಗೋಷ್ಠಿ ಕಾರ್ಯಕ್ರಮ

    ಲೋಕಸಮರ 2024

    ಯುವಜನರು ತಪ್ಪದೇ ಮತ ಚಲಾಯಿಸಿ | ಜಿ.ಎನ್.ಮಲ್ಲಿಕಾರ್ಜುನ

    CHITRADURGA NEWS | 14 APRIL 2024

    ಚಿತ್ರದುರ್ಗ: ಯುವಜನರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಆರ್ಥಿಕ ಚಿಂತಕ ಜಿ. ಎಸ್. ಮಲ್ಲಿಕಾರ್ಜುನ ಹೇಳಿದರು.

    ನಗರದ ರೋಟರಿ ಬಾಲಭವನದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ, ಕನ್ನಡ ಸಾಹಿತ್ಯ ಪರಿಷತ್, ರೋಟರಿ ಕ್ಲಬ್ ವತಿಯಿಂದ  ಹಮ್ಮಿಕೊಂಡಿದ್ದ ಮತದಾನ ಮತ್ತು ಮತದಾರರ ಜಾಗೃತಿ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ.

    ಇದನ್ನೂ ಓದಿ: ಅಂಬೇಡ್ಕರರನ್ನೂ ಪ್ರಧಾನಿ ಮಾಡಬಹುದಿತ್ತು | ಎಂಎಲ್‍ಸಿ ರವಿಕುಮಾರ್

    ಯುವಜನರನ್ನು ಮತದಾನದ ಕಡೆಗೆ ಸೆಳೆಯುವ ಅಗತ್ಯವಿದೆ, ದೇಶದ ಜನಸಂಖ್ಯೆಯಲ್ಲಿ ಶೇ.40ಕ್ಕೂ ಹೆಚ್ಚು ಯುವ ಜನರಿದ್ದಾರೆ, ಆದರೆ ಯುವಕರು ಮತದಾನ ಮಾಡುವ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದೆ.

    ಪ್ರಜಾಪ್ರಭುತ್ವವನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿರುವ ಯುವಜನರು ಚುನಾವಣೆ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು, ಯುವಜನರು ಹಿಂಜರಿಯುವುದಕ್ಕೆ ಕಾರಣಗಳನ್ನು ತಿಳಿದು, ಅವರುಗಳಿಗೆ ಪ್ರೇರೇಪಣೆಯನ್ನು ನೀಡುವುದು ಅಗತ್ಯ. ಕವಿಗಳಿಗೆ ಸಾಮಾಜಿಕ ಹೊಣೆಗಾರಿಕೆಯಿದೆ. ಕಾವ್ಯದ ಮೂಲಕ ಜನರಿಗೆ ಜಾಗೃತಿ ಮೂಡಿಸುವುದು ಸಾಧ್ಯವಿದೆ. ಜಾಗೃತಿ ಕಾರ್ಯಕ್ರಮಗಳಿಗೆ ಸ್ಪಂದನೆ ಕಡಿಮೆ ಆದರೆ ಅಮಲಿನ ಕಾರ್ಯಕ್ರಮಗಳಿಗೆ ಹೆಚ್ಚಿನ ಸ್ಪಂದನೆ ದೊರೆಯುತ್ತದೆ, ಹೀಗಾಗಿ ಜಾಗೃತಿಯನ್ನು ರುಚಿಕಟ್ಟಾಗಿ ನೀಡಬೇಕಾದ ಅನಿವಾರ್ಯತೆ ಇದೆ ಎಂದರು.

    ಇದನ್ನೂ ಓದಿ: ಕೋಟೆನಾಡಿನಲ್ಲಿ ರಾಜಾಹುಲಿ ಮತ ಶಿಖಾರಿ | ಒಂದೇ ದಿನ ಮೂರು ಸಮಾವೇಶದಲ್ಲಿ ಭಾಗವಹಿಸಿದ ಬಿಎಸ್‍ವೈ

    ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎಸ್.ಅನಂತರಾಜು ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಸಂವಿಧಾನ ತಳಹದಿಯಾಗಿದೆ. ಮತದಾನ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. 18 ತುಂಬಿದ ಎಲ್ಲ ಜನರು ಕಡ್ಡಾಯವಾಗಿ ಮತ ಚಲಾಯಿಸಬೇಕು. ವೃದ್ಧರಿಗೆ, ವಿಕಲಚೇತನರಿಗೆ ಮತದಾನಕ್ಕೆ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ. ಪ್ರಜಾಪ್ರಭುತ್ವಕ್ಕೆ ತಳಹದಿಯಾಗಿರುವ ಮತದಾನ ಕಾರ್ಯದಲ್ಲಿ ಎಲ್ಲರೂ ನಿರ್ಭೀತಿಯಿಂದ ಮತ ಚಲಾಯಿಸಬೇಕು ಎಂದು ಹೇಳಿದರು.

    ಇದನ್ನೂ ಓದಿ: ಬಿಜೆಪಿ ಆಭ್ಯರ್ಥಿಗೆ ಬೆಂಬಲ ಘೋಷಿಸಿದ ಗೂಳಿಹಟ್ಟಿ ಶೇಖರ್

    ಪ್ರೊ.ಜಿ.ಪರಮೇಶ್ವರಪ್ಪ ಮಾತನಾಡಿ, ಸ್ವಂತ ಮನೆಯೂ ಇಲ್ಲದ, ವಾಹನವೂ ಇಲ್ಲದ ಆಟೋದಲ್ಲಿ ಮತ್ತು ಸೈಕಲ್ ನಲ್ಲಿ ಓಡಾಡುವ ಕೇಂದ್ರ ಸರಕಾರದ ಸಚಿವರನ್ನು ನೋಡಿದ್ದೇವೆ. ಇಂಥಹ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಮಾದರಿಯಾಗಿರಬೇಕು. ಕೋಟಿಗಟ್ಟಲೆ ಆಸ್ತಿ ಹೊಂದಿರುವವರು ಮಾತ್ರ ನಾಮಪತ್ರ ಸಲ್ಲಿಸುತ್ತಿರುವುದು ನೋಡುತ್ತಿದ್ದೇವೆ. ಯುವಜನರು ಭ್ರಷ್ಟತೆಯನ್ನು ಪ್ರತಿರೋಧಿಸುವ ಹಾಗೂ ಪ್ರಶ್ನಿಸುವ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು ಎಂದರು.

    ಇದನ್ನೂ ಓದಿ: ಚಿತ್ರದುರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಆದ್ಯತೆ | ಗೋವಿಂದ ಕಾರಜೋಳ

    ಈ ವೇಳೆ ರೋಟರಿ ಕ್ಲಬ್ ಕಾರ್ಯದರ್ಶಿ ಇ.ಲಕ್ಷ್ಮೀಕಾಂತ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ, ಸಾಹಿತಿ ಟೀಕಾ ಸುರೇಶ್ ಗುಪ್ತ, ಸಂಚಾಲಕ ಶ್ರೀನಿವಾಸ್ ಮಳಲಿ, ಕೋಶಾಧ್ಯಕ್ಷ ಸಿ.ಲೋಕೇಶ, ಸಂಘಟನಾ ಕಾರ್ಯದರ್ಶಿ ವಿ.ಧನಂಜಯ ಭಾಗವಹಿಸಿದ್ದರು

    Click to comment

    Leave a Reply

    Your email address will not be published. Required fields are marked *

    More in ಲೋಕಸಮರ 2024

    To Top