ಮುಖ್ಯ ಸುದ್ದಿ
ಮಹಿಳೆಯರಿಗೆ ಅನುಕಂಪ ಬೇಡ, ಸಮಾನ ಅವಕಾಶ ಕೊಡಿ | ಬಸವಕುಮಾರ ಸ್ವಾಮೀಜಿ

CHITRADURG NEWS | 08 MARCH 2025
ಚಿತ್ರದುರ್ಗ: ಮಹಿಳೆಯರ ಬಗ್ಗೆ ಕೇವಲ ಅನುಕಂಪ ತೋರಿಸಿದರೆ ಸಾಲದು ಸಮಾನ ಅವಕಾಶವನ್ನು ಪ್ರತಿ ಕ್ಷೇತ್ರದಲ್ಲಿ ನೀಡಿದಾಗ ಬಲಿಷ್ಠ, ಆರೋಗ್ಯ ಪೂರ್ಣ ಮತ್ತು ಸಮಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.
Also Read: ಮೂವರು ಪೊಲೀಸ್ Inspector ವರ್ಗಾವಣೆ
ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆ ಇಂದು ಎಲ್ಲ ರಂಗದಲ್ಲಿ ತನ್ನ ಇರುವಿಕೆಯನ್ನು ತೋರ್ಪಡಿಸುತ್ತಿರುವುದು ಮತ್ತು ಶಿಕ್ಷಣ ರಂಗದಲ್ಲಿ ಮೇಲುಗೈ ಸಾಧಿಸುತ್ತಿರುವುದು ಅವರೇ ಆಗಿದ್ದಾರೆ.
ಪ್ರತಿಭೆಗೆ ತಕ್ಕ ಅವಕಾಶ ನೀಡಿದರೆ ಅಭಿವೃದ್ಧಿಯ ನಾಡು ನಿರ್ಮಾಣವಾಗಲು ಸಾಧ್ಯವಿದೆ. ಅದರಂತೆ ಮಹಿಳೆಗೆ ಅತ್ಯಂತ ಗೌರವ ಮತ್ತು ಉನ್ನತ ಸ್ಥಾನ ನೀಡಿದ್ದು, 12ನೇ ಶತಮಾನದಲ್ಲಿ ಲಿಂಗ ಅಸಮಾನತೆಯನ್ನು ತೊಡೆದು ಹಾಕಿದ್ದರಿಂದ 33 ಮಹಿಳೆಯರು ಅನುಭವ ಮಂಟಪದಲ್ಲಿ ಅವಕಾಶ ಪಡೆದು ಎಲ್ಲರೂ ವಚನ ರಚನೆ ಮಾಡಿದ್ದು ಬಹುದೊಡ್ಡ ಇತಿಹಾಸ ಎಂದರು.
Also Read: ಬಡವರ ಪಾಲಿನ ದೇವರು | ಡಾ.ಜಯರಾಮ್ ಇನ್ನು ನೆನಪು ಮಾತ್ರ | ನುಡಿನಮನ
ಮಹಿಳೆಯರು ಇನ್ನೂ ಕೂಡ ಸಮಾಜದಲ್ಲಿ ಕೆಲ ಕ್ಷೇತ್ರಗಳಲ್ಲಿ ಧೈರ್ಯದಿಂದ ಭಾಗವಹಿಸಲು ಮುಜುಗರ, ಅಂಜಿಕೆ ಪಡುತ್ತಿದ್ದು, ದಿಟ್ಟತನದಿಂದ ಎಲ್ಲ ರಂಗದಲ್ಲಿ ಭಾಗವಹಿಸಬೇಕು.
ಇತ್ತೀಚೆಗೆ ಆಕೆ ಎಲ್ಲ ರಂಗದಲ್ಲಿ ಉನ್ನತ ಸ್ಥಾನಮಾನ ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಇದು ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರಿಯಬೇಕೆ0ದು ಆಶಯ ವ್ಯಕ್ತಪಡಿಸಿದರು.
Also Read: ನಾಳೆಯಿಂದ ಒಂದು ವಾರ ವಿದ್ಯುತ್ ವ್ಯತ್ಯಯ
ಈ ಸಂದರ್ಭದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್, ಡಾ.ಲತಾ, ಡಾ.ನಂದಿನಿ, ಡಾ.ನಾಗೇಂದ್ರ ಗೌಡ ಸೇರಿದಂತೆ ಕಾಲೇಜಿನ ವೈದ್ಯರು ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
