Connect with us

    Bsc Student: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ | ಇಡೀ ದಿನ ಏನೇನಾಯ್ತು | ಪೋಷಕರು ಹೇಳಿದ್ದೇನು

    ABVP protests against college management

    ಕ್ರೈಂ ಸುದ್ದಿ

    Bsc Student: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ | ಇಡೀ ದಿನ ಏನೇನಾಯ್ತು | ಪೋಷಕರು ಹೇಳಿದ್ದೇನು

    CHITRADURGA NEWS | 19 OCTOBER 2024

    ಚಿತ್ರದುರ್ಗ: ನಗರದ ಚಿತ್ರ ಡಾನ್‍ಬಾಸ್ಕೋ ಕಾಲೇಜು ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು 17 ವರ್ಷದ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ (Bsc Student) ಪ್ರೇಮಾ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಆಖಲಾಗಿದೆ.

    ಶುಕ್ರವಾರ ಬೆಳಗ್ಗೆ 8.50ರ ಸುಮಾರಿಗೆ ಕಾಲೇಜಿಗೆ ಬಂದ ಪ್ರೇಮಾ, ತನ್ನ ಸ್ನೇಹಿತೆಯರ ಜೊತೆ ಮಾತನಾಡಿ, ನಂತರ ಮೂರನೇ ಮಹಡಿಗೆ ಹೋಗಿ ಜಿಗಿದಿರುವ ಸಿ.ಸಿ.ಟಿವಿ ಫೂಟೇಜ್ ಪೊಲೀಸರಿಗೆ ಸಿಕ್ಕಿದೆ.

    ಇದನ್ನೂ ಓದಿ: ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಸಾವು

    ಈ ನಡುವೆ ಪ್ರೇಮಾ ಆತ್ಮಹತ್ಯೆಗೆ ಆಕೆಯ ಜೊತೆ ಓದುತ್ತಿದ್ದ ನಗರದ ವಿದ್ಯಾರ್ಥಿಯೊಬ್ಬ ಕಾರಣ ಎಂದು ಆಕೆಯ ತಂದೆ ಸುಧಾಕರ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪ್ರೇಮಾಳಿಗೆ ಪ್ರೀತಿ ಮಾಡುವಂತೆ ಒತ್ತಾಯಿಸಿ ಮೆಸೇಜ್ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಜೆ.ಜೆ.ಆಕ್ಟ್ ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

    ಇದನ್ನೂ ಓದಿ: ವಿವಿ ಸಾಗರ ಯಾತ್ರಿ ನಿವಾಸ ಉದ್ಯಾನವನ ನಿರ್ವಹಣೆಗೆ ಅರ್ಜಿ ಆಹ್ವಾನ

    ಅ.17ರ ಸಂಜೆ ಹುಡುಗನೊಬ್ಬ ಮೆಸೇಜ್ ಕಳುಹಿಸಿದ್ದ ಬಗ್ಗೆ ವಿದ್ಯಾರ್ಥಿನಿ ತನ್ನ ತಂದೆಗೆ ತಿಳಿಸಿದ್ದಳು. ನಾನು ಬೆಳಗ್ಗೆ ಬಂದು ವಿಚಾರಿಸುತ್ತೇನೆ ಎಂದು ತಂದೆ ತಿಳಿಸಿದ್ದಾರೆ. ಇನ್ನೂ ಕೆಲ ಮೆಸೇಜ್‍ಗಳನ್ನು ಕಳಿಸಿದ್ದು, ಎಲ್ಲ ವಿವರ ಇದೆ ಎಂದು ಬಾಲಕಿಯ ಚಿಕ್ಕಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಬೆಳಗ್ಗೆ 8.45ಕ್ಕೆ ಕಾಲೇಜಿಗೆ ಬಂದಿದ್ದು, ತರಗತಿಯಲ್ಲಿ ಕುಳಿತು ಸ್ನೇಹಿತೆಯರ ಜೊತೆಗೆ ಮಾತನಾಡಿದ್ದಾಳೆ. ನಂತರ ಕಾಲೇಜಿನ ಮೂರುನೇ ಮಹಡಿಗೆ ಹೋಗಿ ಜಿಗಿದಿದ್ದಾಳೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರು ಬದುಕುಳಿಯಲಿಲ್ಲ. ಆಕೆಯ ಸಾವಿಗೆ ಸರಿಯಾದ ಕಾರಣ ಗೊತ್ತಿಲ್ಲ. ತಂದೆ ತಾಯಿ ಜೊತೆಗೆ ಮಾತನಾಡಿರಬಹುದು ಎಂದು ಚಿತ್ರ ಡಾನ್‍ಬಾಸ್ಕೋ ಕಾಲೇಜಿನ ಪ್ರಾಚಾರ್ಯ ಡೆನ್ನಿ ಹೇಳಿಕೆ ನೀಡಿದ್ದಾರೆ.

    ರಾಯನಹಳ್ಳಿಯಲ್ಲಿ ಅಂಂತ್ಯಕ್ರಿಯೆ:

    ಮೃತ ವಿದ್ಯಾರ್ಥಿನಿ ಪ್ರೇಮಾ ಅವರ ಸ್ವಗ್ರಾಮ ಚಿತ್ರದುರ್ಗ ತಾಲೂಕಿನ ರಾಯನಹಳ್ಳಿಯ ತೋಟದಲ್ಲಿ ಶುಕ್ರವಾರ ಸಂಜೆ ಅಂತ್ಯಸಂಸ್ಕಾರ ನಡೆಯಿತು.

    ಇದನ್ನೂ ಓದಿ: ಮನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲಿ | ಸಂಸದ ಗೋವಿಂದ ಕಾರಜೋಳ

    ಗ್ರಾಮಕ್ಕೆ ಶವ ತರುತ್ತಲೇ ಇಡೀ ಗ್ರಾಮದಲ್ಲಿ ಶೋಕ ಆವರಿಸಿತ್ತು. ತಮ್ಮ ಕಣ್ಣೆದುರು ಬಾಳಿ, ಬೆಳಗಬೇಕಾದ ಬಾಲಕಿಯ ಸಾವನ್ನು ತಂದೆ ತಾಯಿ ಮಾತ್ರವಲ್ಲದೆ ಯಾರಿಗೂ ಅರಗಿಸಿಕೊಳ್ಳುವುದು ಕಷ್ಟವಾಗಿತ್ತು.

    ಕಾಲೇಜು ಆಡಳಿತ ಮಂಡಳಿ ವಿರುದ್ಧ ಎಬಿವಿಪಿ ಪ್ರತಿಭಟನೆ:

    ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಸವೇಶ್ವರ ಆಸ್ಪತ್ರೆ ಹಾಗ ಚಿತ್ರ ಡಾನ್‍ಬಾಸ್ಕೋ ಕಾಲೇಜಿನ ಬಳಿ ಸಾಕಷ್ಟು ಜನ ಜಮಾಯಿಸಿದ್ದರು.

    ಇದನ್ನೂ ಓದಿ: ಸತತ ಮಳೆಗೆ ಜಿಲ್ಲೆಯಲ್ಲಿ 80 ಮನೆಗಳಿಗೆ ಹಾನಿ

    ಪದವಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿ ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಕಾಲೇಜು ಆಡಳಿತ ಮಂಡಳಿಯ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟಿಸಿದರು.

    ಬೆಳಗ್ಗೆ 8.50 ರ ಸುಮಾರಿಗೆ ಕಾಲೇಜಿಗೆ ಬಂದ ವಿದ್ಯಾರ್ಥಿನಿ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರಲ್ಲಿ ಆಡಳಿತ ಮಂಡಳಿಯ ವೈಫಲ್ಯ ಎದ್ದು ಕಾಣುತ್ತಿದ್ದು, ಅವರ ಮೇಲೆಯೂ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

    ಇದನ್ನೂ ಓದಿ: ತಡರಾತ್ರಿ ಭಾರೀ ಮಳೆ | ತುಂಬಿ ಹರಿದ ಕೆರೆ, ಕಟ್ಟೆ | ತಳುಕು ಶಾಲೆ ಜಲಾವೃತ

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top