ಹಿರಿಯೂರು
ಲಂಚ ಪಡೆದ ಗ್ರಾಮ ಆಡಳಿತಾಧಿಕಾರಿ SUSPENSION
CHITRADURGA NEWS | 01 0CTOBER 2024
ಚಿತ್ರದುರ್ಗ: ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಗ್ರಾಮ ಆಡಳಿತಾಧಿಕಾರಿ ಜಿ.ಎಂ.ದಾಸೇಗೌಡ ಸಾರ್ವಜನಿಕರಿಂದ ಲಂಚ ಪಡೆದ ಆರೋಪದಡಿ ಅಮಾನತುಗೊಂಡಿದ್ದಾರೆ (SUSPENSION).
ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕೆ.ಆರ್.ಹಳ್ಳಿ ವಿಎ ದಾಸೇಗೌಡ ಅವರು ಸಾರ್ವಜನಿಕರಿಂದ ಲಂಚ ಪಡೆದ ದೃಶ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ಕಪ್ಪು ಪಟ್ಟಿ ಧರಿಸಿ ನಿವೃತ್ತ ನೌಕರರಿಂದ ಧರಣಿ
ಇದನ್ನು ಮನಗಂಡ ತಾಲೂಕು ಹಾಗೂ ಜಿಲ್ಲಾಡಳಿತ ಕಾರಣ ಕೇಳಿ ನೋಟೀಸ್ ನೀಡಿದೆ. ಜೊತೆಗೆ ಮೇಲ್ನೋಟಕ್ಕೆ ಲಂಚ ಪಡೆಯುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಿ.ಎಂ.ದಾಸೇಗೌಡ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.
ಸಾರ್ವಜನಿಕರೊಬ್ಬರು ಕಚೇರಿ ಬಳಿ ಹೋಗಿ ನಾವು ಬಡವರು ಸಾರ್ ಇಷ್ಟೇ ಇರೋದು ಎಂದಾಗ, ಇಲ್ಲ ಆರ್‍ಐಗೆ ಕೊಡಬೇಕು. ನನಗೆ ಉಳಿಯಲ್ಲ ಎನ್ನುತ್ತಾ ಹಣ ಪಡೆದಿದ್ದ ವೀಡಿಯೋ ಬೆಳಗ್ಗೆ ವೈರಲ್ ಆಗಿತ್ತು. ತಕ್ಷಣ ಎಚ್ಚೆತ್ತ ಜಿಲ್ಲಾಡಳಿತ ಸಂಜೆ ವೇಳೆಗೆ ಅಮಾನತು ಮಾಡಿ ಆದೇಶಿಸಿದೆ.
ಇದನ್ನೂ ಓದಿ: ಜಯದೇವ ಶ್ರೀಗಳ ಬೆಳ್ಳಿ ಪ್ರತಿಮೆ | ಅ.5 ರಂದು ಲೋಕಾರ್ಪಣೆ