ಮುಖ್ಯ ಸುದ್ದಿ
ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಸಭಾತ್ಯಾಗ

CHITRADURGA NEWS | 18 FEBRUARY 2025
ಚಿತ್ರದುರ್ಗ: ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರ ನಡುವೆಯೇ ತಾಳ ಮೇಳ ಸರಿಯಾಗಿಲ್ಲ ಎನ್ನುವುದು ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಹಿರಂಗವಾಯಿತು.
ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಖುದ್ದು ಅಧ್ಯಕ್ಷರು, ಪೌರಾಯುಕ್ತರ ಮೇಲೆ ಅಸಮಧಾನ ವ್ಯಕ್ತಪಡಿಸಿದ ಪ್ರಸಂಗಕ್ಕೆ ನಗರಸಭೆ ಸಾಕ್ಷಿಯಾಯಿತು.

ಇದನ್ನೂ ಓದಿ: ನಗರಸಭೆಯಲ್ಲಿ ಅಧ್ಯಕ್ಷರೇ ಸುಪ್ರೀಂ, ಇನ್ಯಾರೋ ಅಲ್ಲ | ನಗರಸಭೆ ಸದಸ್ಯರ ಗುಡುಗು
ಸಭೆ ಆರಂಭವಾಗುತ್ತಲೇ, ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಮಾತನಾಡುತ್ತಾ, ನಾನು ಪ್ರತಿನಿಧಿಸುವ 33ನೇ ವಾರ್ಡ್‍ನಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಆದರೆ, ಈ ಬಗ್ಗೆ ನಮಗೇ ಮಾಹಿತಿ ಇಲ್ಲ ಎಂದರು.
ನಮ್ಮನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎನ್ನುವುದಾದರೆ ನಾವ್ಯಾಕೆ ಸಭೆಯಲ್ಲಿರಬೇಕು ಎಂದು ಸಭಾತ್ಯಾಗ ಮಾಡಿದರು.
ಇದನ್ನೂ ಓದಿ: ಚಿತ್ರದುರ್ಗ ನಗರಸಭೆ ಬಜೆಟ್ | ಯಾವ ಕೆಲಸಕ್ಕೆ ಎಷ್ಟು ಅನುದಾನ ಮೀಸಲು | ಇಲ್ಲಿದೆ ಪೂರ್ಣ ವಿವರ
ಈ ವೇಳೆ ಸದಸ್ಯರು ಉಪಾಧ್ಯಕ್ಷರಿಗೆ ಅವರ ವಾರ್ಡ್‍ನ ಕಾಮಗಾರಿ ವಿಚಾರ ಗೊತ್ತಾಗುತ್ತಿಲ್ಲ ಎನ್ನುವುದಾದರೆ ಹೇಗೆ, ಇದು ನಾಚಿಕೆಗೇಡಿನ ವಿಚಾರ. ಆಡಳಿತ ಮಾಡುವವತ ನಡುವೆಯೇ ಹೊಂದಾಣಿಕೆ ಇಲ್ಲ ಎಂದು ವ್ಯಂಗ್ಯವಾಡಿದರು.
