ಮುಖ್ಯ ಸುದ್ದಿ
ಆದಿಚುಂಚನಗಿರಿ ಗುರುಕಲಕ್ಕೆ ಮಾದಾರ ಚನ್ನಯ್ಯ ಗುರುಪೀಠದ ವಟು ಜಯಬಸವ ದೇವರು
CHITRADURGA NEWS | 10 MAY 2024
ಚಿತ್ರದುರ್ಗ: ಇಂದು ಬೆಳಗ್ಗೆ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ನೂತನ ವಟು ಸ್ವೀಕಾರ ಕಾರ್ಯಕ್ರಮ ಮಠದ ಆವರಣದಲ್ಲಿ ನಡೆಯಿತು.
ವಟು ಸ್ವೀಕಾರ ಕಾರ್ಯಕ್ರಮದ ನಂತರ ಸುದ್ದಿಗಾರರ ಜೊತೆಗೆ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿದರು.
ಇದನ್ನೂ ಓದಿ: SJMIT ಕಾಲೇಜಿನಲ್ಲಿ ರಾಮನ ಅವತಾರ ಚಿತ್ರತಂಡ | ನಟ ರಿಷಿ, ನಿರ್ದೇಶಕ ದುರ್ಗದ ವಿಕಾಸ್ ಪಂಪಾಪತಿ ಜೊತೆ ಮಾತುಕತೆ
ಈ ವೇಳೆ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ ಆರಂಭವಾಗಿ ಎರಡು ದಶಕಗಳಲ್ಲಿ ಇದೊಂದು ಮಹತ್ವದ ದಿನವಾಗಿದೆ. ವಿಶ್ವಗುರು ಬಸವಣ್ಣನವರ ಜಯಂತಿ. ಸರ್ವ ಸಮುದಾಯಗಳಿಗೆ ಸಮಾನತೆ, ಶೋಷಿತ ಸಮುದಾಯಗಳಿಗೆ ಧ್ವನಿ ಕೊಟ್ಟವರ ಜಯಂತಿ ಸಂದರ್ಭದಲ್ಲಿ ವಟು ಸ್ವೀಕಾರ ಮಾಡಲಾಗಿದೆ ಎಂದು ತಿಳಿಸಿದರು.
ವಟುವಿನ ಶಿಕ್ಷಣದ ಜವಾಬ್ದಾರಿ ಮಾದಾರ ಚನ್ನಯ್ಯ ಗುರುಪೀಠ ವಹಿಸಿಕೊಳ್ಳಲಿದೆ. ಆದಿಚುಂಚನಗಿರಿಯಲ್ಲಿರುವ ಗುರುಕುಲದಲ್ಲಿ ಮುಂದಿನ ಅಧ್ಯಯನಕ್ಕೆ ಕಳಿಸುತ್ತೇವೆ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾರ್ಗದರ್ಶನ ಹಾಗೂ ಆಶೀರ್ವಾದದಲ್ಲಿರುತ್ತಾರೆ ಎಂದರು.
ಇದನ್ನೂ ಓದಿ: ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ | ಜಯಬಸವ ದೇವರೆಂದು ನಾಮಕರಣ
ಉನ್ನತ ಶಿಕ್ಷಣದ ನಂತರ ಮಠಕ್ಕೆ ಉತ್ತರಾಧಿಕಾರಿ ಆಯ್ಕೆಯನ್ನು ಟ್ರಸ್ಟ್ ಹಾಗೂ ಸಮಾಜದ ಹಿರಿಯರು ನೆರವೇರಿಸಲಿದ್ದಾರೆ. ಅದು ಅವರ ಜವಾಬ್ದಾರಿ ಎಂದು ತಿಳಿಸಿದರು.
ನಾವು ಧೀಕ್ಷೆ ಪಡೆದ ಮುರುಘಾ ಮಠ ಹಾಗೂ ಬಸವ ತತ್ವ ಪರಂಪರೆಯನ್ನು ಮುಂದುವರೆಸಿಕೊಂಡು, ಉಳಿಸಿಕೊಂಡು ಹೋಗಲಿದ್ದೇವೆ.
ಇದನ್ನೂ ಓದಿ: ನಗರಸಭೆ ಆಸ್ತಿ ಒತ್ತುವರಿ ಮಾಡಿದ್ದೀರಾ ಹಾಗಾದ್ರೆ ಈ ಸುದ್ದಿ ಓದಿ..
ಇಂದು ಸಾಂಕೇತಿಕವಾಗಿ ವಟು ಸ್ವೀಕಾರ ಮಾಡಲಾಗಿದೆ. ಅವರ ಶಿಕ್ಷಣ ನಂತರ ಸಮಾಜದ ಮುಖಂಡರಾದ ಗೋವಿಂದ ಕಾರಜೋಳ, ಕೆ.ಎಚ್.ಮುನಿಯಪ್ಪ, ಬಿ.ಎನ್.ಚಂದ್ರಪ್ಪ ಸೇರಿದಂತೆ ನಾಡಿನಾದ್ಯಂತ ಇರುವ ಹಿರಿಯರು ಉತ್ತರಾಧಿಕಾರಿ ಆಯ್ಕೆ ಮಾಡಲಿದ್ದಾರೆ. ಈ ಜವಾಬ್ದಾರಿಯನ್ನು ಅವರಿಗೆ ಬಿಡುತ್ತೇವೆ ಎಂದರು.
ಇನ್ನೂ ತಮ್ಮ ಪುತ್ರನನ್ನು ವಟುವಾಗಿ ಮಠಕ್ಕೆ ನೀಡಿದ ತಂದೆ ತಾಯಿ ಸವಿತಾ ಹಾಗೂ ಮಹಾಲಿಂಗಪ್ಪ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಮಠದ ಸಂಪರ್ಕದಲ್ಲಿದ್ದೆವು. ಇಲ್ಲಿಗೆ ಆಗಾಗ ಬಂದು ಹೋಗುತ್ತಿದ್ದೆವು. ಮಗನನ್ನು ಸಂತೋಷದಿಂದ ಮಠಕ್ಕೆ ನೀಡಿದ್ದೇವೆ. ಗುರುಗಳು ಮಗನ ವಿದ್ಯಾಭ್ಯಾಸ ನೋಡಿಕೊಂಡು ಹೋಗಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ SSLC ಟಾಪರ್ಸ್ ಇವರೇ ನೋಡಿ